AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಫಾಯಿ ಕರ್ಮಚಾರಿಯಾಗಿ ಜೋಧ್​ಪುರ ಬೀದಿಗಳನ್ನು ಗುಡಿಸುತ್ತಿದ್ದ ಮಹಿಳೆ ರಾಜಸ್ತಾನ ಆಡಳಿತಾತ್ಮಕ ಸೇವೆ ಪರೀಕ್ಷೆ ಪಾಸು ಮಾಡಿದ್ದಾರೆ!

ಎಂಟು ವರ್ಷಗಳು ಹಿಂದೆ ಆಶಾ ಅವರ ಪತಿ ಇಬ್ಬರು ಮಕ್ಕಳು ಮತ್ತು ಅವರನ್ನು ಬಿಟ್ಟು ದೂರವಾದರು. ತಂದೆ ತಾಯಿಗಳ ನೆರವು ಮತ್ತು ಪ್ರೋತ್ಸಾಹದಿಂದ ಅವರು ಓದು ಮುಂದುವರೆಸಿ ಪದವಿ ಪಡೆದರು ಮತ್ತು 2018 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದರು.

ಸಫಾಯಿ ಕರ್ಮಚಾರಿಯಾಗಿ ಜೋಧ್​ಪುರ ಬೀದಿಗಳನ್ನು ಗುಡಿಸುತ್ತಿದ್ದ ಮಹಿಳೆ ರಾಜಸ್ತಾನ ಆಡಳಿತಾತ್ಮಕ ಸೇವೆ ಪರೀಕ್ಷೆ ಪಾಸು ಮಾಡಿದ್ದಾರೆ!
ತಂದೆ ತಾಯಿಗಳೊಂದಿಗೆ ಆಶಾ ಕಂದಾರಾ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 18, 2021 | 1:56 AM

Share

ಈ ಬಾರಿಯ ರಾಜಸ್ತಾನ ಆಡಳಿತಾತ್ಮಕ ಸೇವೆಗೆ ನಡೆದ ಪರೀಕ್ಷೆಗಳಲ್ಲಿ ಯಶ ಸಾಧಿಸಿದವರ ಪೈಕಿ 40-ವರ್ಷ ವಯಸ್ಸಿನ ಆಶಾ ಕಂದಾರಾ ಅವರೂ ಸೇರಿದ್ದಾರೆ. ಅದರಲ್ಲೇನು ಅಂಥ ವಿಶೇಷ ಅಂತೀರಾ? ವಿಶೇಷತೆ ಇದೆ, ಯಾಕೆಂದರೆ ಆಕೆಯ ಕತೆ ಎಲ್ಲರಂತಲ್ಲದೆ ಭಿನ್ನವಾಗಿದೆ. ಎರಡು ಮಕ್ಕಳ ತಾಯಿಯಾಗಿರುವ ಆಶಾ ಜೋಧ್​ಪುರ ನಗರಸಭೆಯಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಾರೆ. ಇನ್ನು ಮುಂದೆ ರಾಜ್ಯದ ಆಡಳಿತಾತ್ಮಕ ಸೇವೆಯಲ್ಲಿ ಅವರನ್ನು ಹಿರಿಯ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಎಂಟು ವರ್ಷಗಳು ಹಿಂದೆ ಆಶಾ ಅವರ ಪತಿ ಇಬ್ಬರು ಮಕ್ಕಳು ಮತ್ತು ಅವರನ್ನು ಬಿಟ್ಟು ದೂರವಾದರು. ತಂದೆ ತಾಯಿಗಳ ನೆರವು ಮತ್ತು ಪ್ರೋತ್ಸಾಹದಿಂದ ಅವರು ಓದು ಮುಂದುವರೆಸಿ ಪದವಿ ಪಡೆದರು ಮತ್ತು 2018 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದರು. ಎರಡು ಹಂತಗಳಲ್ಲಿ ನಡೆದ ರಾಜಸ್ತಾನ ಆಡಳಿತಾತ್ಮಕ ಸೇವೆ ಪರೀಕ್ಷೆ ಬರೆದ ನಂತರ ಆಕೆ ಬಹಳ ದಿನಗಳವರೆಗೆ ಕಾಯಬೇಕಾಯಿತು. ಕೋವಿಡ್-19 ಪಿಡುಗಿನಿಂದಾಗಿ ಫಲಿತಾಂಶ ಪ್ರಕಟಿಸುವುದು ವಿಳಂಬವವಾಯಿತು. ಕೇವಲ ಕಳೆದ ವಾರವಷ್ಟೇ ಅವುಗಳನ್ನು ಪ್ರಕಟಿಸಲಾಗಿದೆ.

ಏತನ್ಮಧ್ಯೆ, ಮಕ್ಕಳ ಸಲುವಾಗಿ ಕೆಲಸ ಮಾಡಲೇಬೇಕಿದ್ದ ಆಶಾ ಜೋಧ್​ಪುರ ನಗರಸಭೆಯಲ್ಲಿ ಸಫಾಯಿ ಕರ್ಮಚಾರಿಯಾಗಿ ಸೇರಿಕೊಂಡರು. ಕೈಯಲ್ಲಿ ಪೊರಕೆ ಹಿಡಿದುಕೊಂಡು ಜೋಧ್​ಪುರ ನಗರದ ರಸ್ತೆಗಳನ್ನು ಪ್ರತಿದಿನ ಅವರು ಗುಡಿಸುತ್ತಿದ್ದರು.

ಎನ್​ಡಿಟಿವಿ ವರದಿಗಾರರೊಂದಿಗೆ ಮಾತಾಡಿರುವ ಆಶಾ, ಯಾವ ಕೆಲಸವೂ ಕನಿಷ್ಠವಲ್ಲ ಎಂದು ಹೇಳಿದ್ದಾರೆ. ‘2019ರಲ್ಲಿ ನಾನು ಮೇನ್ಸ್ ಪರೀಕ್ಷೆ ಬರೆದೆ, ರಿಸಲ್ಟ್​ಗಳು ಪ್ರಕಟಗೊಳ್ಳುವ ಮೊದಲೇ ನನಗೆ ಜೋಧ್​ಪುರ ನಗರಸಭೆಯಲ್ಲಿ ಕೆಲಸ ಸಿಕ್ಕಿತು. ನಾನು ಓದುವುದನ್ನು ನಿಲ್ಲಿಸಲಿಲ್ಲ. ನನ್ನ ಪರಿಶ್ರಮ ಫಲ ಕೊಟ್ಟಿರುವುದನ್ನು ನೀವೇ ನೋಡುತ್ತಿದ್ದೀರಿ ಎಂದು ಆಕೆ ಹೇಳಿದ್ದಾರೆ.

‘ಬದುಕಿನಲ್ಲಿ ನಾನು ಆಳವಡಿಸಿಕೊಂಡಿರುವ ತತ್ವವೆಂದರೆ, ಜನರು ನಿಮ್ಮತ್ತ ಕಲ್ಲೆಸೆದರೆ, ಅವುಗಳನ್ನು ಕಲೆಹಾಕಿಕೊಂಡು ಒಂದು ಸೇತುವೆ ಕಟ್ಟಬೇಕು. ನಾನು ಈ ಸಾಧನೆ ಮಾಡಬಹುದಾರೆ ಬೇರೆ ಯಾರು ಬೇಕಾದರೂ ಮಾಡಬಹುದು,’ ಎಂದು ಆಶಾ ಹೇಳಿದ್ದಾರೆ.

ತನಗೆ ತಂದೆಯೇ ಸ್ಪೂರ್ಥಿ ಎಂದು ಆಶಾ ಹೇಳಿದ್ದಾರೆ. ‘ವಿದ್ಯಾವಂತರಾಗಿರುವ ನನ್ನ ತಂದೆ ವಿದ್ಯೆಯ ಮಹತ್ವವನ್ನು ಅರಿತಿದ್ದಾರೆ. ಓದಿನ ಮೂಲಕ ಜೀವನದಲ್ಲಿ ಮುಂದೆ ಸಾಗುವುದನ್ನು ನನಗೆ ಹೇಳಿಕೊಟ್ಟಿದ್ದಾರೆ. ನನ್ನಂಥ ಇತರ ಅವಕಾಶವಂಚಿತರಿಗೆ ನೆರವಾಗಬೇಕೆನ್ನುವ ಉದ್ದೇಶದಿಂದ ನಾನು ಆಡಳಿತಾತ್ಮಕ ಸೇವೆಯನ್ನು ಆರಿಸಿಕೊಂಡೆ. ನಮ್ಮೆಲ್ಲ ಸಮಸ್ಯೆಗಳಿಗೆ ವಿದ್ಯೆಯಲ್ಲಿ ಪರಿಹಾರವಿದೆ, ಶಿಕ್ಷಣ ಅವಕಾಶದ ಬಾಗಿಲನ್ನು ತೆರೆಯುತ್ತದೆ,’ ಎಂದು ಆಕೆ ಹೇಳಿದ್ದಾರೆ.

ಆಶಾ ಅವರ ತಂದೆ ರಾಜೇಂದ್ರ ಕಂದಾರಾ ದಾರಿದ್ರ್ಯದ ಹಿನ್ನೆಲೆಯಲ್ಲಿ ಬೆಳೆದರೂ ಯಾವ ಕಾರಣಕ್ಕೂ ಓದು ನಿಲ್ಲಿಸಲಿಲ್ಲ. ಭಾರತೀಯ ಆಹಾರ ನಿಗಮದಲ್ಲಿ ಆಕೌಂಟೆಂಟ್ ಆಗಿ ಸೇವೆ ಸಲ್ಲಿಸಿದ ನಂತರ ಅವರು ನಿವೃತ್ತರಾಗಿದ್ದಾರೆ. ‘ಬೀದಿ ದೀಪದ ಕೆಳಗಡೆ ಕೂತು ನಾನು ಓದುತ್ತಿದ್ದೆ. ನಮಗೆ ಶಿಕ್ಷಣದ ಮಹತ್ವ ಗೊತ್ತು. ಬದುಕು ಹೋರಾಟವಾಗಿದೆ ಮತ್ತು ಹೋರಾಟವೇ ಬದುಕಾಗಿದೆ. ಆದರೆ ನಮಗೆ ಇಂದು ಬಹಳ ಹೆಮ್ಮೆಯಾಗುತ್ತಿದೆ,’ ಎಂದು ಆವರು ಹೇಳಿದರು.

ಇದನ್ನೂ ಓದಿ: ‘ಪ್ರೀತಿಗಿಂತಲೂ ಹೆಚ್ಚಿನದಾದ ಪ್ರೀತಿಯಿಂದ ಪ್ರೀತಿಸಿದ’ ಗರ್ಲ್​ಫ್ರೆಂಡನ್ನೇ ಮದುವೆಯಾದ ರಾಜಸ್ತಾನ ರಾಯಲ್ಸ್ ಆಲ್​ರೌಂಡರ್ ಶಿವಂ ದುಬೆ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ