Viral Video: ಮೊಸಳೆಯನ್ನು ಕೆಣಕಿ ಬಿಯರ್ ಕ್ಯಾನ್ ಮುಚ್ಚಳ ತೆಗೆಯುವ ದುಸ್ಸಾಹಸ! ವಿಡಿಯೋ ವೈರಲ್
ದೃಶ್ಯದಲ್ಲಿ ನೋಡುವಂತೆ ಸ್ನೇಹಿತರೆಲ್ಲಾ ನದಿಯಲ್ಲಿ ದೋಣಿಯ ಮೇಲೆ ನಿಂತಿದ್ದಾರೆ. ಕೆಂಪು ಬಣ್ಣದ ಅಂಗಿ ತೊಟ್ಟ ವ್ಯಕ್ತಿ ಮೊಸಳೆಯನ್ನು ಕೆಣಕಲು ಪ್ರಾರಂಭಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಮೊಸಳೆ ಬಾಯ್ತೆರೆಯುತ್ತದೆ. ಮೊಸಳೆಯ ಹಲ್ಲಿಗೆ ಬಿಯರ್ ಕ್ಯಾನ್ ಹೊಡೆಯುವ ಮೂಲಕ ಮುಚ್ಚಳ ತೆಗೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ತಮಾಷೆಯ ವಿಡಿಯೋಗಳು ಜನರನ್ನು ಗೆಲ್ಲುವುದಂತೂ ನಿಜ. ಜತೆಜತೆಗೆ ಆಶ್ಚರ್ಯವಾಗುವ ಕೆಲವು ಸಂಗತಿಗಳು ಕುತೂಹಲ ಕೆರಳಿಸುತ್ತದೆ. ಕೆಲವು ಭಯಾನಕ ದೃಶ್ಯಗಳ ನಡುವೆ ದಿಗ್ಭ್ರಮೆಗೊಳ್ಳುವ ಕೆಲವು ದೃಶ್ಯಗಳು ವೈರಲ್ ಆಗುತ್ತವೆ. ಅಂಥಹದ್ದೇ ಒಂದು ವಿಡಿಯೋ ಇದೀಗ ಭಾರೀ ಸುದ್ದಿಯಲ್ಲಿದೆ. ವಿಡಿಯೋ ನೋಡಿದರ ಅದೆಷ್ಟೋ ಜನ ನಿಜವಾಗಿಯೂ ದುಸ್ಸಾಹಸಕ್ಕೆ ಮುಂದಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮೊಸಳೆ ಕೆಣಕುವ ವಿಷಯ ಸಾಮಾನ್ಯದ್ದಲ್ಲ. ಒಂದು ಬಾರಿ ಸಿಕ್ಕಿಹಾಕಿಕೊಂಡರೆ ಜೀವವೇ ಉಳಿಯುವುದು ಕಷ್ಟ. ಅಂತಾದ್ರಲ್ಲಿ ಇಲ್ಲೋರ್ವರು ಮೊಸಳೆಯನ್ನು ಕೆಣಕಲು ಮುಂದಾಗಿದ್ದಾರೆ. ಜತೆಗೆ ಕೈಯಲ್ಲಿರುವ ಬಿಯರ್ ಕ್ಯಾನ್ ಮುಚ್ಚಳವನ್ನು ಮೊಸಳೆಯ ಹಲ್ಲುಗಳಿಂದ ತೆಗೆಯಲು ಪ್ರಯತ್ನಿಸಿದ್ದಾರೆ. ವಿಡಿಯೋ ಇದೀಗ ವೈರಲ್ ಆಗಿದೆ.
ಸ್ನೇಹಿತರೆಲ್ಲಾ ಪ್ರವಾಸಕ್ಕೆ ಹೋಗುವುದೆಂದರೆ ಖುಷಿಯ ಸಂಗತಿ. ತಮಾಷೆ ಮಾಡುತ್ತಾ ಸುಂದರ ಸ್ಥಳದಲ್ಲಿ ಸಮಯವನ್ನು ಕಳೆಯುತ್ತೇವೆ. ಆದರೆ ಕೆಲವು ದುಸ್ಸಾಹಸದ ಕೆಲಸಗಳು ಪ್ರಾಣಕ್ಕೇ ಅಪಾಯ ತಂದೊಡ್ಡಬಹುದು. ಆದರೆ ಅದೃಷ್ಟವಶಾತ್ ಇವರಿಗೆ ಏನೂ ಆಗಿಲ್ಲ. ಮೊಸಳೆಯ ಬಾಯ್ತೆರೆಸಿ ಹಲ್ಲಿನಲ್ಲಿ ಬಿಯರ್ ಕ್ಯಾನ್ ಮುಚ್ಚಳವನ್ನು ತೆಗೆದಿದ್ದಾರೆ. ಬಳಿಕವೇ ಗಟಗಟನೆ ಬಿಯರ್ ಏರಿಸಿದ್ದಾರೆ.
Normal day in Florida pic.twitter.com/aYzVP5MpE7
— Public Go Crazy (@photocliks) July 16, 2021
ದೃಶ್ಯದಲ್ಲಿ ನೋಡುವಂತೆ ಸ್ನೇಹಿತರೆಲ್ಲಾ ನದಿಯಲ್ಲಿ ದೋಣಿಯ ಮೇಲೆ ನಿಂತಿದ್ದಾರೆ. ಕೆಂಪು ಬಣ್ಣದ ಅಂಗಿ ತೊಟ್ಟ ವ್ಯಕ್ತಿ ಮೊಸಳೆಯನ್ನು ಕೆಣಕಲು ಪ್ರಾರಂಭಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಮೊಸಳೆ ಬಾಯ್ತೆರೆಯುತ್ತದೆ. ಮೊಸಳೆಯ ಹಲ್ಲಿಗೆ ಬಿಯರ್ ಕ್ಯಾನ್ ಹೊಡೆಯುವ ಮೂಲಕ ಮುಚ್ಚಳ ತೆಗೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ 5 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಲಭ್ಯವಾಗಿವೆ. ದುಸ್ಸಾಹಸದ ಕೆಲಸ ಎಂದು ನೆಟ್ಟಿಗರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
Women Fall off 6300 Feet Cliff : ಜೋಕಾಲಿ ಆಡ್ತಾ 6300 ಅಡಿ ಎತ್ತರದಿಂದ ಬಿದ್ದರು
Viral Video: ಜೋಕಾಲಿ ಆಡ್ತಾ ಆಡ್ತಾ ಬಂಡೆ ಅಂಚಿನಿಂದ ಬಿದ್ದ ಯುವತಿಯರು; ಭಯಾನಕ ದೃಶ್ಯದ ವಿಡಿಯೋ ವೈರಲ್