AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿದೇಶಿ ಮಗುವಿನ ಬಾಯಲ್ಲಿ ನಮಸ್ತೇ ಇಂಡಿಯಾ! ವಿಡಿಯೋ ನೋಡಿ ದೃಷ್ಟಿ ತೆಗೆದ ಭಾರತೀಯರು

Namaste India: ಬಜರಂಗ್ ಪೂನಿಯಾ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿರುವ ಪುಟ್ಟ ಬಾಲಕ ಭಾರತೀಯರ ಮನಗೆಲ್ಲಲು ಕಾರಣವಾಗಿರುವುದು ಆತ ತೊದಲು ನುಡಿಯಲ್ಲಿ ಹೇಳಿರುವ ಮಾತು.

Viral Video: ವಿದೇಶಿ ಮಗುವಿನ ಬಾಯಲ್ಲಿ ನಮಸ್ತೇ ಇಂಡಿಯಾ! ವಿಡಿಯೋ ನೋಡಿ ದೃಷ್ಟಿ ತೆಗೆದ ಭಾರತೀಯರು
ನಮಸ್ತೇ ಇಂಡಿಯಾ ಎಂದ ಬಾಲಕ
TV9 Web
| Updated By: Skanda|

Updated on: Jul 18, 2021 | 2:26 PM

Share

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಷಯಗಳು ಮಿಂಚಿನ ವೇಗದಲ್ಲಿ ವೈರಲ್ (Viral Video) ಆಗಿ ಬಿಡುತ್ತವೆ. ಭಾರತದಿಂದ ಒಲಿಂಪಿಕ್ (Olympic) ಕ್ರೀಡಾಕೂಟಕ್ಕೆ ತೆರಳುತ್ತಿರುವ ಕುಸ್ತಿಪಟು ಬಜರಂಗ್​ ಪೂನಿಯಾ (Bajarang Punia) ಇತ್ತೀಚೆಗಷ್ಟೇ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಒಂದು ಅಷ್ಟೇ ವೇಗವಾಗಿ ಎಲ್ಲೆಡೆ ಹರಿದಾಡಿ ನೆಟ್ಟಿಗರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಅಪರೂಪದ ವಿಡಿಯೋಗಳನ್ನು, ವಿಶೇಷ ಎನ್ನಿಸುವ ಸಂಗತಿಗಳನ್ನು ಹಂಚಿಕೊಳ್ಳುವ ಬಜರಂಗ್ ಪೂನಿಯಾ ಈ ವಿಡಿಯೋ ಮೂಲಕ ಅನೇಕರನ್ನು ಮಂತ್ರ ಮುಗ್ಧಗೊಳಿಸಿದ್ದಾರೆ. ವಿದೇಶಿ ಮಗುವೊಂದರ (Foreign Kid) ವಿಡಿಯೋವನ್ನು ಪೂನಿಯಾ ಹಂಚಿಕೊಂಡಿದ್ದು, ಅದನ್ನು ನೋಡಿದ ಭಾರತೀಯರು ಮೆಚ್ಚಿ ಕೊಂಡಾಡಿದ್ದಾರೆ.

ಬಜರಂಗ್ ಪೂನಿಯಾ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿರುವ ಪುಟ್ಟ ಬಾಲಕ ಭಾರತೀಯರ ಮನಗೆಲ್ಲಲು ಕಾರಣವಾಗಿರುವುದು ಆತ ತೊದಲು ನುಡಿಯಲ್ಲಿ ಹೇಳಿರುವ ಮಾತು. ವಿಡಿಯೋ ಮಾಡುತ್ತಿರುವವರು ಹೇಳಿಕೊಟ್ಟಂತೆಯೇ ನಗುನಗುತ್ತಾ ತನ್ನ ಪುಟ್ಟ ಬಾಯಲ್ಲಿ ನಮಸ್ತೇ ಇಂಡಿಯಾ (Namaste India) ಎಂದಿರುವ ಪುಟಾಣಿ ಹುಡುಗ ಭಾರತೀಯರ ಮನ ಗೆದ್ದಿದ್ದಾನೆ. ಬಜರಂಗ್ ಪೂನಿ ಈ ವಿಡಿಯೋವನ್ನು ಹಂಚಿಕೊಂಡ ನಂತರ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಜನರು ಅದನ್ನು ಹಂಚಿಕೊಂಡಿರುವುದರಿಂದ ಅದು ವೈರಲ್ ಆಗಿದೆ.

ಕೆಲವೇ ಸೆಕೆಂಡುಗಳಷ್ಟಿರುವ ಈ ವಿಡಿಯೋವನ್ನು ಈಗಾಗಲೇ ಸರಿಸುಮಾರು 8 ಸಾವಿರ ಮಂದಿ ಮೆಚ್ಚಿಕೊಂಡಿದ್ದಾರೆ. ಆ ಪುಟಾಣಿ ಬಾಲಕ ಮಂದಸ್ಮಿತನಾಗಿ ನಮಸ್ತೇ ಇಂಡಿಯಾ ಎಂದು ಹೇಳಿರುವ ಶೈಲಿಗೆ ಮನಸೋತ ಭಾರತೀಯರು, ಕಾಮೆಂಟ್​ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಎಮೋಜಿಗಳ ಮೂಲಕ, ಸ್ಟಿಕ್ಕರ್​ಗಳ ಮೂಲಕ, ಚಿಕ್ಕ ಚಿಕ್ಕ ಸಾಲುಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿರುವ ಭಾರತೀಯರು ಆ ಹುಡುಗನನ್ನೂ, ವಿಡಿಯೋ ಮಾಡಿದ ವ್ಯಕ್ತಿಯನ್ನೂ ಕೊಂಡಾಡುತ್ತಿದ್ದಾರೆ.

ಸದ್ಯ ಬಜರಂಗ್ ಪೂನಿಯಾ ಜುಲೈ 23ರಿಂದ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದು, ಇನ್ನು ಐದೇ ಐದು ದಿನಗಳು ಕ್ರೀಡಾಕೂಟಕ್ಕೆ ಬಾಕಿ ಉಳಿದಿವೆ. ಈ ಬಾರಿ ಭಾರತೀಯರು ಬಜರಂಗ್ ಪೂನಿಯಾ ಗೆಲ್ಲಬೇಕೆಂಬ ಬಯಕೆ ವ್ಯಕ್ತಪಡಿಸಿದ್ದು, ಚಿನ್ನದ ಪದಕ ಗಳಿಸಿ ಮಿಂಚಲಿ ಎಂದು ಹಾರೈಸುತ್ತಿದ್ದಾರೆ.

ಇದನ್ನೂ ಓದಿ: Sania Mirza: ಒಲಿಂಪಿಕ್ ಕಿಟ್​ನಲ್ಲಿ ಸಾನಿಯಾ ಮಿರ್ಜಾ ಸಖತ್ ಡ್ಯಾನ್ಸ್: ವೈರಲ್ ವಿಡಿಯೋ ಇಲ್ಲಿದೆ ನೋಡಿ 

Tokyo Olympics: ಒಲಿಂಪಿಕ್ಸ್​ಗೆ ಮತ್ತೆ ಕೊರೊನಾ ಕರಿನೆರಳು: ಇಬ್ಬರು ಕ್ರೀಡಾಪಟುಗಳಿಗೆ ಕೋವಿಡ್ ಸೋಂಕು

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!