Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Tweet: ಮರಗಳಿಂದ ಮನುಷ್ಯರು ಕಲಿಯಬಹುದಾದ 8 ಸುಂದರ ಪಾಠಗಳು ಇವು..; ಹರ್ಷವರ್ಧನ್​ ಗೋಯೆಂಕಾ ಟ್ವೀಟ್ ಸಖತ್ ವೈರಲ್​

ಒಂದು ಮರದಿಂದ ನಾವೆಷ್ಟು ಪಾಠಗಳನ್ನು ಕಲಿಯಬಹುದು? ಅವು ಯಾವವು ಎಂಬುದನ್ನು ಹರ್ಷವರ್ಧನ್​ ಗೋಯೆಂಕಾ ತಮ್ಮ ಟ್ವೀಟ್​​ನಲ್ಲಿ ತುಂಬ ಸುಂದರವಾಗಿ ವಿವರಿಸಿದ್ದಾರೆ.

Viral Tweet: ಮರಗಳಿಂದ ಮನುಷ್ಯರು ಕಲಿಯಬಹುದಾದ 8 ಸುಂದರ ಪಾಠಗಳು ಇವು..; ಹರ್ಷವರ್ಧನ್​ ಗೋಯೆಂಕಾ ಟ್ವೀಟ್ ಸಖತ್ ವೈರಲ್​
ಹರ್ಷ ಗೋಯೆಂಕಾ
Follow us
TV9 Web
| Updated By: Lakshmi Hegde

Updated on: Jul 18, 2021 | 5:54 PM

ಮರಗಿಡಗಳು ಮನುಷ್ಯನಿಗೆ ಉಪಕಾರಿ. ಅವಿಲ್ಲದಿದ್ದರೆ ನಮಗೆ ಬದುಕೇ ಇಲ್ಲ. ಆದರೆ ದುರದೃಷ್ಟಕ್ಕೆ ಅನೇಕಾನೇಕ ಜನರಿಗೆ ಮರಗಳ ಮಹತ್ವ ಗೊತ್ತಿಲ್ಲ. ಮನೆಕಟ್ಟಲು ಬೇಕು..ಇನ್ನೊಂದು ಅಲಂಕಾರಕ್ಕೆ ಬೇಕು..ಮಾರಾಟ ಮಾಡಿ ದುಡ್ಡು ಮಾಡಲು ಬೇಕು. ಹೀಗೆ ಹಲವು ಕಾರಣಗಳಿಗಾಗಿ ಹಸಿಹಸಿ ಮರಗಳನ್ನೇ ಕತ್ತರಿಸುವ ಪರಿಪಾಠ ಹೆಚ್ಚಾಗುತ್ತಿದೆ. ಇನ್ನೊಂದು ಕಡೆಯಲ್ಲಿ ನಿಜವಾದ ಪರಿಸರ ಪ್ರೇಮಿಗಳು ಸಸಿ ನೆಟ್ಟು ಮರವಾಗಿಸುವ ಕಾಯಕದಲ್ಲಿ ತೊಡಗಿದ್ದಾರೆ. ಹೀಗಿರುವಾಗ ಉದ್ಯಮಿ ಹರ್ಷವರ್ಧನ್​ ಗೋಯೆಂಕಾ ಅವರು ಮರದ ಬಗ್ಗೆ ಮಾಡಿರುವ ಒಂದು ಟ್ವೀಟ್​ ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಪ್ರಕೃತಿಯಿಂದ ಮನುಷ್ಯ ಕಲಿಯುವ ಪಾಠ ಸಾಕಷ್ಟಿದೆ. ಪ್ರಾಣಿಗಳಿಂದ ಮಾನವರು ಪಾಠ ಕಲಿಯುವಂತ ಪರಿಸ್ಥಿತಿ ಈಗಿದೆ. ಹಾಗೇ ಒಂದು ಮರದಿಂದ ನಾವೆಷ್ಟು ಪಾಠಗಳನ್ನು ಕಲಿಯಬಹುದು? ಅವು ಯಾವವು ಎಂಬುದನ್ನು ಹರ್ಷವರ್ಧನ್​ ಗೋಯೆಂಕಾ ತಮ್ಮ ಟ್ವೀಟ್​​ನಲ್ಲಿ ತುಂಬ ಸುಂದರವಾಗಿ ವಿವರಿಸಿದ್ದಾರೆ.

ಇಲ್ಲಿದೆ ನೋಡಿ ಮರದಿಂದ ನಾವು ಕಲಿಯಬೇಕಾದ ಅಂಶಗಳು (ಹರ್ಷ ಗೋಯೆಂಕಾ ದೃಷ್ಟಿಯಲ್ಲಿ) 1. ಎತ್ತರಕ್ಕೆ ಬೆಳೆದು..ಹೆಮ್ಮೆಯಿಂದ ನಿಂತುಕೊಳ್ಳಿ 2. ಕಾಲು ನೆಲದಲ್ಲೇ ಗಟ್ಟಿಯಾಗಿರಲಿ 3. ನಿಮ್ಮ ಬೇರುಗಳೊಂದಿಗೆ ಸಂಪರ್ಕ ಕಡಿತ ಮಾಡಿಕೊಳ್ಳಬೇಡಿ 4. ಬೆಳೆಯುತ್ತಲೇ ಇರಿ 5. ಹೇರಳವಾಗಿ ನೀರು ಕುಡಿಯಿರಿ 6. ನಿಮ್ಮ ದೃಷ್ಟಿಕೋನವನ್ನು ನೀವು ಆನಂದಿಸಿ 7. ನಿಮ್ಮ ಎಲೆಗಳನ್ನು ಚೆಲ್ಲಿ (ಅಂದರೆ ನೀವಿಲ್ಲಿ ನಿಮ್ಮ ವಿಚಾರಧಾರೆಗಳನ್ನು ಚೆಲ್ಲಿ ಎಂದು ಭಾವಿಸಬೇಕು) ಮತ್ತು ಸದಾ ಹೊಸದಾಗಿ ಕಲಿಯುತ್ತ..ಹೊಸದಾಗಿ ಹೊರಹೊಮ್ಮುತ್ತಿರಿ 8. ಏನನ್ನೂ ನಿರೀಕ್ಷೆ ಮಾಡದೆ ಉಳಿದವರಿಗೆ ನೆರಳಾಗಿರಿ ಅಂದರೆ ಆಶ್ರಯದಾತರಾಗಿರಿ.

ಮರಗಳೇ ಹಾಗೇ..ಎಷ್ಟೇ ಎತ್ತರಕ್ಕೆ ಬೆಳೆದರೂ ತಲೆಯೆತ್ತಿ ಹೆಮ್ಮೆಯಿಂದ ನಿಂತಂತೆ ಕಾಣಿಸುತ್ತವೆ. ಆದರೆ ಅವು ಭೂಮಿಯ ಮೇಲೇ ನಿಂತಿರುತ್ತವೆ. ಭೂಮಿಯಾಳದ ಬೇರುಗಳೊಂದಿಗೆ ಭದ್ರವಾಗಿ ಇರುತ್ತವೆ. ಹಾಗೇ ಮನುಷ್ಯನೂ ಸಹ ಜೀವನದಲ್ಲಿ ಗುರಿಯತ್ತ ಸಾಗಿ ಎತ್ತರಕ್ಕೆ ಬೆಳೆಯಬೇಕು. ಗುರಿಮುಟ್ಟಿ ಹೆಮ್ಮೆಯಿಂದ ನಿಂತ ಮೇಲೂ ಅಹಂಕಾರ ಪಡಬಾರದು. ನಮ್ಮವರೊಂದಿಗೆ ಸಂಬಂಧ ಕಳಚಿಕೊಳ್ಳಬಾರದು. ಅದರಲ್ಲೂ ಮುಖ್ಯವಾಗಿ ತಂದೆ-ತಾಯಿಯೇ ಪ್ರತಿಯೊಬ್ಬರಿಗೂ ಬೇರು. ಹಾಗೇ ಆರೋಗ್ಯದ ದೃಷ್ಟಿಯಿಂದ ಚೆನ್ನಾಗಿ ನೀರು ಕುಡಿಯಬೇಕು. ನಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತ..ಹೊಸದನ್ನು ಕಲಿಯುತ್ತ ಸಾಗಬೇಕು. ಬಡವರು, ಅಗತ್ಯ ಇದ್ದವರಿಗೆ ನೆರಳಾಗಬೇಕು. ಅಂದರೆ ಕೈಲಾದ ಸಹಾಯ ಮಾಡಬೇಕು ಎಂಬುದು ಹರ್ಷ ಗೋಯೆಂಕಾರ ಟ್ವೀಟ್​ನಲ್ಲಿ ಕಾಣಿಸುವ ಅಂಶ. ಹಾಗೇ..ಈ ಟ್ವೀಟ್​ನ್ನು ನೀವು ಪರಾಮರ್ಶಿಸಬಹುದು. ಒಟ್ಟಿನಲ್ಲಿ ಟ್ವೀಟ್ ಮಾತ್ರ ಭರ್ಜರಿ ವೈರಲ್ ಆಗುತ್ತಿದೆ. ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.

ಇದನ್ನೂ ಓದಿ: IND vs SL: ಸಂಜು ಸ್ಯಾಮ್ಸನ್​ಗೆ ಇಂಜುರಿ; ಪ್ಲೇಯಿಂಗ್ ಇಲೆವೆನ್​ನಲ್ಲಿ ಸಂಜು ಇರದಿರುವುದಕ್ಕೆ ಸ್ಪಷ್ಟನೆ ನೀಡಿದ ಬಿಸಿಸಿಐ

These are the 8 lessons you should learn from trees Tweet By Harsh Goenka

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್