ಮುಂಗಾರು ಅಧಿವೇಶನದ ವೇಳೆ ಪ್ರತಿಭಟನೆ ನಡೆಸಲು ಸಂಸತ್ ಬದಲು ಬೇರೆ ಸ್ಥಳ ಆಯ್ಕೆ ಮಾಡಿ: ರೈತರಿಗೆ ದೆಹಲಿ ಪೊಲೀಸ್ ಸಲಹೆ
Monsoon Session:40 ಕ್ಕೂ ಹೆಚ್ಚು ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರತಿದಿನ ಸಂಸತ್ತಿನ ಹೊರಗೆ 200 ರೈತರನ್ನು ಒಳಗೊಂಡ ಪ್ರತಿಭಟನೆಯನ್ನು ಯೋಜಿಸಿದೆ.
ದೆಹಲಿ: ಸೋಮವಾರದಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನದ ವೇಳೆ ರೈತರು ಪ್ರತಿದಿನ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ದೆಹಲಿಯ ಐದು ಹಿರಿಯ ಪೊಲೀಸ್ ಅಧಿಕಾರಿಗಳ ತಂಡವು ಭಾನುವಾರ ಮಧ್ಯಾಹ್ನ ಅಲಿಪುರದ ಮಂತ್ರಮ್ ರೆಸಾರ್ಟ್‌ನಲ್ಲಿ ರೈತ ನಾಯಕರನ್ನು ಭೇಟಿಯಾಗಿ ಸಂಸತ್ ಬದಲು ಬೇರೆ ಸ್ಥಳಗಳಲ್ಲಿ ಪ್ರತಿಭಟನೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. 40 ಕ್ಕೂ ಹೆಚ್ಚು ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರತಿದಿನ ಸಂಸತ್ತಿನ ಹೊರಗೆ 200 ರೈತರನ್ನು ಒಳಗೊಂಡ ಪ್ರತಿಭಟನೆಯನ್ನು ಯೋಜಿಸಿದೆ.
ಬಲ್ಬೀರ್ ಸಿಂಗ್ ರಾಜೇವಾಲ್, ದರ್ಶನ್ ಪಾಲ್, ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರಾಹನ್, ಮತ್ತು ಯೋಗೇಂದ್ರ ಯಾದವ್ ಸೇರಿದಂತೆ ಮೋರ್ಚಾದ ಹಲವಾರು ಸದಸ್ಯರು ಶನಿವಾರ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಿಗೆ “ಮತದಾರರ ವಿಪ್” ನೀಡಿದ್ದು, ರೈತರ ಬೇಡಿಕೆಗೆ ದನಿಯಾಗಬೇಕು ಮತ್ತು ಅಧಿವೇಶನದಿಂದ ಹೊರನಡೆಯಬೇಕು ಎಂದು ರೈತ ಮುಖಂಡರು ಹೇಳಿದ್ದಾರೆ.
ಶನಿವಾರ ದೆಹಲಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಲಾಯಿತು, ಅಲ್ಲಿ ಆಯುಕ್ತ ಬಾಲಾಜಿ ಶ್ರೀವಾಸ್ತವ ಅವರು ಐದು ಹಿರಿಯ ಅಧಿಕಾರಿಗಳು ಹಿರಿಯ ರೈತ ಮುಖಂಡರೊಂದಿಗೆ ಮಾತನಾಡಿದ್ದು ಮತ್ತು ಸಂಸತ್ತಿಗೆ ಬರದಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಹಿರಿಯ ಅಧಿಕಾರಿಗಳು ಜನವರಿ 26 ರಂದು ದೆಹಲಿಯಲ್ಲಿ ನಡೆದ ಟ್ರಾಕ್ಟರ್ ಪೆರೇಡ್ ಬಗ್ಗೆ ಮಾತನಾಡಲಿದ್ದಾರೆ. ರೈತರ ಪ್ರತಿಭಟನೆ ವೇಳೆ ಬ್ಯಾರಿಕೇಡ್‌ಗಳನ್ನು ಮುರಿದ ನಂತರ ಸಾವಿರಾರು ಪ್ರತಿಭಟನಾಕಾರರು ದೆಹಲಿಗೆ ಪ್ರವೇಶಿಸಿ ದಾಂಧಲೆ ನಡೆಸಿದ್ದರು. ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದರು ಮತ್ತು ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಿದರು ”ಎಂದು ಹಿರಿಯ ಪೊಲೀಸ್ ಹೇಳಿದ್ದಾರೆ.
ದೆಹಲಿ ಪೊಲೀಸರು ಸೋಮವಾರ ಸಂಸತ್ತಿನ ಬಳಿ ಎಚ್ಚರಿಕೆ ವಹಿಸಿ ಏಳು ಮೆಟ್ರೋ ನಿಲ್ದಾಣಗಳನ್ನು ಮುಚ್ಚುವಂತೆ ಕೋರಿ ಡಿಎಂಆರ್‌ಸಿಗೆ ಪತ್ರ ಕಳುಹಿಸಿದ್ದಾರೆ.
“ಭಾನುವಾರ, ಪೂರ್ವ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಕೂಡ ತಯಾರಿ ಆರಂಭಿಸಿದರು. ಅವರು ಪ್ರಸ್ತುತ ಯಮುನಾ ಖಾದರ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ರೈತರನ್ನು ಸಂಯಮದಿಂದ ತಡೆಯಲು ಮತ್ತು ಕಲ್ಲು ತೂರಾಟದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವರಿಗೆ ತರಬೇತಿ ನೀಡಲಾಗುತ್ತಿದೆ ”ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇದನ್ನೂ ಓದಿ:ಸಂಸತ್ನ ಮುಂಗಾರು ಅಧಿವೇಶನದಲ್ಲಿ ಯಾವುದೇ ವಿಷಯದ ಬಗ್ಗೆ ಚರ್ಚೆಗೆ ಸಿದ್ಧ: ನರೇಂದ್ರ ಮೋದಿ