ಮುಗಿಯದ ಸಿಂಗ್-ಸಿಧು ಕಾದಾಟ, ಇಂದು ಸಭೆ ಸೇರಿರುವ ಪಂಜಾಬ ಸಂಸದರಿಗೆ ಸಿಧು ಪಿಪಿಸಿಸಿ ಅಧ್ಯಕ್ಷರಾಗುವುದು ಬೇಕಿಲ್ಲ!

ಏತನ್ಮಧ್ಯೆ, ನವಜೋತ್ ಸಿಧು ಅವರು ತಮ್ಮ ನೆಲೆಯನ್ನು ಮುಖ್ಯಮಂತ್ರಿಗಳ ತವರೂರು ಪಟಿಯಾಲಾಗೆ ಸ್ಥಳಾಂತರಿಸಿದ್ದಾರೆ. ಶನಿವಾರ ಅವರು 30 ಶಾಸಕರನ್ನು ಭೇಟಿಯಾಗಿದ್ದು ಇನ್ನೂ ಕೆಲವರನ್ನು ಇಂದು (ರವಿವಾರ) ಭೇಟಿಯಾಗಲಿದ್ದಾರಂತೆ. ಕೆಲ ಶಾಸಕರು ಅವರನ್ನು ಬೇಟಿಯಾಗಲು ಹಿಂದೇಟು ಹಾಕುತ್ತಿದ್ದಾರೆ.

ಮುಗಿಯದ ಸಿಂಗ್-ಸಿಧು ಕಾದಾಟ, ಇಂದು ಸಭೆ ಸೇರಿರುವ ಪಂಜಾಬ ಸಂಸದರಿಗೆ ಸಿಧು ಪಿಪಿಸಿಸಿ ಅಧ್ಯಕ್ಷರಾಗುವುದು ಬೇಕಿಲ್ಲ!
ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು
TV9kannada Web Team

| Edited By: Arun Belly

Jul 18, 2021 | 4:35 PM

ಶನಿವಾರದಂದು ಎಲ್ಲ ಸರಿಹೋದಂತೆ ಕಂಡ ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ತಮ್ಮ ಬದ್ಧ ವೈರಿ ಮತ್ತು ಮಾಜಿ ಕ್ರಿಕೆಟ್ ಆಟಗಾರ ನನವಜೋತ್ ಸಿಂಗ್ ಸಿಧು ಅವರಿಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನಾಗಿ ಬಡ್ತಿ ನೀಡುವುದನ್ನು ಮತ್ತೊಮ್ಮೆ ವಿರೋಧಿಸುತ್ತಿರುವಂತೆಯೇ, ಸಂಸತ್ತಿನ ಎರಡೂ ಸದನದ ಪಂಜಾಬ ಸಂಸದರು ಇಂದು ಸಭೆ ಸೇರಲು ನಿರ್ಧರಿಸಿದ್ದಾರೆ. ಹಾಗೆಯೇ, ಸಿಧು ಇಂದು (ರವಿವಾರ) ಪಟಿಯಾಲಾದಲ್ಲಿ ಶಾಸಕರರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಸದರು, ಸಿಧು ಅವರನ್ನು ಪಕ್ಷದ ಅಧ್ಯಕ್ಷನಾಗಿ ನೇಮಕ ಮಾಡದಿರುವಂತೆ ಹೈಕಮಾಂಡನ್ನು ಆಗ್ರಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿಗಳ ಪತ್ನಿ ಸಂಸದರ ಸಭೆಯನ್ನು ಆಯೋಜಿಸುತ್ತಿದ್ದಾರೆ. ‘ಬಿಜೆಪಿಯಿಂದ ತಿಸ್ಕರಿಸಲ್ಪಟ್ಟ ನಾಯಕ’ ಎಂದು ತಾವು ಪರಿಗಣಿಸುವ ಸಿಧು ಪಿಪಿಸಿಸಿ ಅಧ್ಯಕ್ಷನಾಗುವುದು ಇಷ್ಟವಿಲ್ಲ ಎಂದು ಪಂಜಾಬಿನ ಹಿರಿಯ ಕಾಂಗ್ರೆಸ್ ನಾಯಕರು ಹೇಳಿರುವರೆಂದು ಮೂಲಗಳು ತಿಳಿಸಿವೆ.

ಸದರಿ ಸಭೆಯ ನಾಯಕತ್ವವನ್ನು ಪಿಪಿಸಿಸಿಯ ಪ್ರಸಕ್ತ ಅಧ್ಯಕ್ಷ ಮತ್ತು ಬಹಲ ದಿನಗಳಿಂದ ಸಿಂಗ್ ಅವರನ್ನು ವಿರೋಧಿಸುತ್ತಿದ್ದ ಸುನಿಲ್ ಜಾಖರ್ ವಹಿಸಿದ್ದಾರೆ. ಮೂಲಗಳ ಪ್ರಕಾರ ಅವರ ನಡುವಿನ ವೈಮನಸ್ಸು ಈಗ ತಿಳಿಗೊಂಡು ಸೌಹಾರ್ದಯುತ ಸಂಬಂಧ ಏರ್ಪಟ್ಟಿದೆ. ಜಾಖರ್ ಅವರು ಸೋಮವಾರದದಂದು ಶಾಸಕರ ಮತ್ತು ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆಯನ್ನೂ ಕರೆದಿದ್ದಾರೆ.

ಏತನ್ಮಧ್ಯೆ, ನವಜೋತ್ ಸಿಧು ಅವರು ತಮ್ಮ ನೆಲೆಯನ್ನು ಮುಖ್ಯಮಂತ್ರಿಗಳ ತವರೂರು ಪಟಿಯಾಲಾಗೆ ಸ್ಥಳಾಂತರಿಸಿದ್ದಾರೆ. ಶನಿವಾರ ಅವರು 30 ಶಾಸಕರನ್ನು ಭೇಟಿಯಾಗಿದ್ದು ಇನ್ನೂ ಕೆಲವರನ್ನು ಇಂದು (ರವಿವಾರ) ಭೇಟಿಯಾಗಲಿದ್ದಾರಂತೆ. ಕೆಲ ಶಾಸಕರು ಅವರನ್ನು ಬೇಟಿಯಾಗಲು ಹಿಂದೇಟು ಹಾಕುತ್ತಿದ್ದಾರೆ.

ಈ ಸಭೆಗಳು; ಸಿಂಗ್ ಮತ್ತು ಸಿಧು ನಡುವೆ ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ಗಾಂಧಿಗಳು ಹೆಣೆದಿದ್ದ ರಾಜಿಸೂತ್ರವನ್ನು ನಿಷ್ಫಲಗೊಳಿಸಿವೆ. ಅವರಿಬ್ಬರು ಒಂದಾಗಲು ಮನವೊಲಿಸಿ ಸರಣಿ ಸಭೆಗಳನ್ನು ನಡೆಸಿದ್ದಲ್ಲದೆ ಬೇರೆ ಕಸರತ್ತುಗಳನ್ನು ಸಹ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಮಾಡಿದ್ದರು.

ಕಳೆದ ವಾರಾಂತ್ಯದಲ್ಲಿ ಗಾಂಧಿಗಳು ರೂಪಿಸಿದ ರಾಜಿಸೂತ್ರವನ್ನು ಮತ್ತು ಸಿಧು ಅವರಿಗೆ ಬಡ್ತಿ ನೀಡುವುದನ್ನು ಅಮರಿಂದರ್ ಸಿಂಗ್ ಷರತ್ತುಗಳೊಂದಿಗೆ ಒಪ್ಪಿಕೊಂಡಿದ್ದರು. ಮುಂದಿನ ವರ್ಷವೇ ಪಂಜಾಬ್​ನಲ್ಲಿ ವಿಧಾನ ಸಭೆ ಚುನಾವಣೆ ನಡೆಯಿರುವುದರಿಂದ ಪಕ್ಷ ತೆಗೆದುಕೊಳ್ಳುವ ಪ್ರಮುಖ ನಿರ್ಣಯಗಳಲ್ಲಿ ತನ್ನನ್ನು ಭಾಗಿ ಮಾಡಬೇಕೆನ್ನುವುದು ಸಿಂಗ್ ಮುಂದಿಟ್ಟ ಷರತ್ತುಗಳಲ್ಲಿ ಒಂದಾಗಿದೆ.

ಹಾಗೆಯೇ, ಸಂಪುಟ ಪುನಾರಚನೆ ಮಾಡುವ ನಿರ್ಧಾರ ಕೇವಲ ತನಗೆ ಮಾತ್ರ ಬಿಡಬೇಕು ಮತ್ತು ಬೇರೆ ಯಾರೂ ಹಸ್ತಕ್ಷೇಪ ಮಾಡಬಾರದು ಅಂತ ಅವರು ಹೈಕಮಾಂಡ್​ಗೆ ತಿಳಿಸಿದ್ದರು. ಸಿಧು ಅವರೊಂದಿಗೆ ಕೆಲಸ ಮಾಡುವ ಪಿಪಿಸಿ ಸಿ ಮೂರು ಕಾರ್ಯಾಧ್ಯಕ್ಷರನ್ನು ಸಹ ತಾನೇ ನೇಮಕ ಮಾಡುವುದಾಗಿ ಸಿಂಗ್ ಹೇಳಿದ್ದರು.

ಸಂಪುಟ ಪುನಾರಚನೆಯಲ್ಲಿ ಹಿಂದೂ ಮತ್ತು ದಲಿತರಿಗೆ ಆದ್ಯತೆ ನೀಡಲಾಗವುದೆಂದು ತಿಳಿದುಬಂದಿದೆ.

ತಮ್ಮ ವಿರುದ್ಧ ಮಾಡಿದ ಟ್ವೀಟ್​ಗಳಿಗೆ ಸಿಧು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ ನಂತರವೇ ತಾನು ಅವರನ್ನು ಭೇಟಿಯಾಗುವುದಾಗಿ ಸಿಂಗ್ ಶನಿವಾರ ಹೇಳಿದ್ದರು.

ಸೋನಿಯಾ ಗಾಂಧಿ ಅವರಯ ತೆಗೆದುಕೊಳ್ಳುವ ಯಾವುದೇ ನಿರ್ಣಯಕ್ಕೆ ತಾನು ಬದ್ಧನಾಗಿರಿವುದಾಗಿ ಅಮರಿಂಧರ ಅವರು ಪಂಜಾಬ ಕಾಂಗ್ರೆಸ್ ಉಸ್ತುವಾರಿ ಹರೀಷ ರಾವತ್​ಗೆ ತಿಳಿಸದ್ದರು, ಸಿಂಗ್ ಅವರನ್ನು ಭೇಟಿಯಾಗಲು ರಾವತ್ ಇಂದು ಹೆಲಿಕ್ಯಾಪ್ಟರ್​ನಲ್ಲಿ ಚಂಡೀಗಡ್​ಗೆ ದೌಡಾಯಿಸಿದ್ದಾರೆ.

ಇದನ್ನೂ ಓದಿ: ಸಮಸ್ಯೆಗಳನ್ನು ಬಗೆಹರಿಸಿದರೆ ನಾನು ಅಮರಿಂದರ್ ಸಿಂಗ್ ಜತೆ ಕೆಲಸ ಮಾಡಲು ಸಿದ್ಧ: ನವಜೋತ್ ಸಿಂಗ್ ಸಿಧು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada