ಸಮಸ್ಯೆಗಳನ್ನು ಬಗೆಹರಿಸಿದರೆ ನಾನು ಅಮರಿಂದರ್ ಸಿಂಗ್ ಜತೆ ಕೆಲಸ ಮಾಡಲು ಸಿದ್ಧ: ನವಜೋತ್ ಸಿಂಗ್ ಸಿಧು

Navjot Singh Sidhu: ಜ್ಯೋತಿರಾದಿತ್ಯ ಸಿಂಧಿಯಾ  ಅಥವಾ ಜಿತಿನ್ ಪ್ರಸಾದ ಅವರಂತೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಲು ಸಿದ್ಧರಾಗಿದ್ದೀರಾ ಎಂದು ಕೇಳಿದಾಗ ಹೈಕಮಾಂಡ್ ಅದ್ಭುತ ಜನ. ಮೊದಲ ದಿನದಿಂದ ನಾನು ಜನರ ಪರವಾದ ಕಾರ್ಯಸೂಚಿಯನ್ನು ಅನುಸರಿಸಿದ್ದೇನೆ ಎಂದು ಉತ್ತರಿಸಿದ್ದಾರೆ  ನವಜೋತ್ ಸಿಂಗ್ ಸಿಧು.

ಸಮಸ್ಯೆಗಳನ್ನು ಬಗೆಹರಿಸಿದರೆ ನಾನು ಅಮರಿಂದರ್ ಸಿಂಗ್ ಜತೆ ಕೆಲಸ ಮಾಡಲು ಸಿದ್ಧ: ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 22, 2021 | 11:33 AM

ದೆಹಲಿ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗೆ ಕೆಲಸ ಮಾಡಲು ಸಿದ್ಧ ಎಂದು ನವಜೋತ್ ಸಿಂಗ್ ಸಿಧು ಸೋಮವಾರ ಹೇಳಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಿದರೆ ನಾನು ಅವರೊಂದಿಗೆ ಕೆಲಸ ಮಾಡಲು ಯಾವಾಗಲೂ ಸಿದ್ಧನಿದ್ದೇನೆ ಎಂದಿದ್ದಾರೆ ಸಿಧು. ಅಮರಿಂದರ್ ಸಿಂಗ್ ಅವರು ಸಿಧು ಅವರ ಬೇಡಿಕೆಗಳಿಗೆ ಅನುಗುಣವಾಗಿ ಒಲವು ತೋರಿಸಿದ್ದು, ಇದರಲ್ಲಿ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಪರಿಶ್ರಮವಿದೆ.

ಸೋಮವಾರ  ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಎರಡನೇ ಬಾರಿಗೆ ದೆಹಲಿಗೆ ಕರೆಸಲಾಯಿತು. ಕಾಂಗ್ರೆಸ್ ಸಮಿತಿಯು ಎಲ್ಲಾ ಕಡೆಯವರನ್ನು ತೃಪ್ತಿಪಡಿಸಿ  ಪರಿಹಾರವನ್ನು ಶಿಫಾರಸು ಮಾಡುವ ಕಾರ್ಯವನ್ನು ಮಾಡಿದೆ.

ಅಮರಿಂದರ್  ಜತೆಗಿ ನ ಭಿನ್ನಾಭಿಪ್ರಾಯದ  ನಡುವೆಯೇ ವಾಗ್ದಾಳಿ ನಡೆಸಿದ ಸಿಧು,  ಸಿಂಗ್ ಅಥವಾ ಕ್ಯಾಪ್ಟನ್ ಬಾಗಿಲು ಮುಚ್ಚುತ್ತಿದ್ದಾರೆ ಎಂದು ಅವರು ಭಾವಿಸುತ್ತಾರೆಯೇ?  “ನವಜೋತ್ ಸಿಂಗ್ ಸಿಧು ಅವರಿಗೆ ಬಾಗಿಲು ಮುಚ್ಚಲು ಅವರು ಯಾರು? ಅವರು ಮೂರು ಚುನಾವಣೆಗಳಲ್ಲಿ ಸೋತರು, ಅವರು ತಮ್ಮ ಠೇವಣಿ ಕಳೆದುಕೊಂಡರು ಮತ್ತು ನಂತರ ಮೇಡಮ್ ಸೋನಿಯಾ (ಗಾಂಧಿ) ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು. ಅವರು ಪಕ್ಷವನ್ನು ವಿಭಜಿಸುವುದಾಗಿ ಬೆದರಿಕೆ ಹಾಕಿದರು.

117 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಎಲ್ಲಾ 78 ಕಾಂಗ್ರೆಸ್ ಶಾಸಕರು ತಮ್ಮೊಂದಿಗಿದ್ದಾರೆ ಎಂದು ಸಿಧು ಹೇಳಿದರು.

ಬಂಡಾಯವು ಪಕ್ಷವನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದ್ದಕ್ಕೆ ಸಿಂಗ್ ವಿರುದ್ಧ ಕಿಡಿ ಕಾರಿದ ಸಿಧು “ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ” ಎಂದು ಆರೋಪಿಸಿದರು. ನಾನು ಯಾವುದೇ ಹುದ್ದೆಗೆ ಹಾತೊರೆಯುತ್ತಿಲ್ಲ. ಕಳೆದ 17 ವರ್ಷಗಳಲ್ಲಿ ನಾನು ಯಾವುದೇ ಹುದ್ದೆಯನ್ನು ಕೇಳಿದ್ದೇನೆ ಎಂದು ಸಾಬೀತುಪಡಿಸಿ” ಎಂದು ಹೇಳಿದರು.

ನಾನು ಪಕ್ಷಕ್ಕೆ ಹಾನಿ ಮಾಡುತ್ತಿದ್ದೇನೆ ಎಂದು ಹೇಳುತ್ತಿರುವವರು ಯಾರು? ನೀವು ಸಮಸ್ಯೆಗಳನ್ನು ಬಗೆಹರಿಸಿದರೆ ಅದು ಹಾನಿಯಾಗುತ್ತದೆಯೇ? ಪ್ರತಿಯೊಬ್ಬ ಶಾಸಕರು ಈ ವಿಷಯವನ್ನು ಎತ್ತುತ್ತಿದ್ದಾರೆ. ಎಲ್ಲಾ 78 ಶಾಸಕರು ನನ್ನೊಂದಿಗಿದ್ದಾರೆ. ಎಲ್ಲವೂ ಸರಿಯಾಗಿದ್ದರೆ ಪಕ್ಷ ಏಕೆ ಮೂರು ಸದಸ್ಯರ ಸಮಿತಿಯನ್ನು ರಚಿಸಿತು? ಎಂದು ಅವರು ಪ್ರಶ್ನಿಸಿದರು. “ನಾನು ಪಕ್ಷದ ನಿಜವಾದ ಯೋಧ. ಅವರನ್ನು ದೆಹಲಿಗೆ ಎರಡು ಬಾರಿ ಕರೆಸಲಾಗಿದೆ.”

ಚುನಾವಣೆಯ ಸಮಯದಲ್ಲಿ “ಶೋಪೀಸ್” ಆಗಿ ನನ್ನನ್ನು ಪರಿಗಣಿಸುವುದು ಬೇಡ . ಚುನಾವಣೆಗೆ ಕೆಲವು ತಿಂಗಳುಗಳು ಬಾಕಿ ಇರುವಾಗ, ಮೊದಲು ನನಗೆ ಚಹಾ, ನಂತರ ಊಟಕ್ಕೆ ಆಹ್ವಾನ ಬರುತ್ತದೆ. ನಂತರ ನನ್ನನ್ನು ಕಾಂಗ್ರೆಸ್ ಪ್ರಚಾರದಲ್ಲಿ ಶೋಪೀಸ್‌ನಂತೆ ಅಲಂಕರಿಸಲಾಗುತ್ತದೆ” ಎಂದು ಅವರು ಹೇಳಿದರು.

ಅವರು 2017 ರ ಪಂಜಾಬ್ ಚುನಾವಣೆಗೆ ಮುನ್ನ ನಾನು ಕಾಂಗ್ರೆಸ್​ಗೆ ಬಂದಿದ್ದೆ . “ಪ್ರಶಾಂತ್ ಕಿಶೋರ್ ನನ್ನ ಬಳಿಗೆ 60 ಬಾರಿ ಬಂದರು. ಅವರನ್ನು ಕೇಳಿ. ನೀವು ಹೈಕಮಾಂಡ್ ಅನ್ನು ಭೇಟಿಯಾಗಿ ಅವರು ನೇರಾನೇರ ಜನ ಎಂದು ಹೇಳಿದ್ದರು. ನಾನು 56 ಸ್ಥಾನಗಳಲ್ಲಿ ಪ್ರಚಾರ ಮಾಡಿದ್ದೇನೆ ಮತ್ತು ಪಕ್ಷವು 54 ಸ್ಥಾನಗಳನ್ನು ಗೆದ್ದಿದೆ.” ಸಿಂಗ್ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಎರಡು ವರ್ಷಗಳ ನಂತರ ಸಿಂಗ್ ಜತೆಗಿನ ಭಿನ್ನಾಭಿಪ್ರಾಯದಿಂದ ಸಿಧು ಅವರು ಸಚಿವ ಸಂಪುಟ ತೊರೆದಿದ್ದರು.

ಸಿಖ್ ಧಾರ್ಮಿಕ ಗ್ರಂಥ ಗುರು ಗ್ರಂಥ ಸಾಹೀಬ್ ಅಪವಿತ್ರ ಮಾಡಿದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆಯ ಸಮಯದಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿದ 2015 ರ ಪ್ರಕರಣದಲ್ಲಿ ಪಂಜಾಬ್ ಸರ್ಕಾರವು ಕಾನೂನು ಹಿನ್ನಡೆ ಅನುಭವಿಸಿದ ನಂತರ ಸಿಧು ಇತ್ತೀಚೆಗೆ ಮುಖ್ಯಮಂತ್ರಿಯ ಮೇಲೆ ಹೊಸ ದಾಳಿ ನಡೆಸಿದ್ದಾರೆ. ಚುನಾವಣೆ ವೇಳೆ ಇದು ಬಹಳ ಭಾವನಾತ್ಮಕ ವಿಷಯಗಳಾಗಿತ್ತು. ಈ ದಾಳಿಗಳು ಸಿಂಗ್ ವಿರುದ್ಧ ಪೂರ್ಣ ಪ್ರಮಾಣದ ದಂಗೆಯಾಗಿ ಮಾರ್ಪಟ್ಟವು.

ಇಬ್ಬರು ಕಾಂಗ್ರೆಸ್ ಶಾಸಕರ ಪುತ್ರರಿಗೆ “ಸಹಾನುಭೂತಿಯ” ಆಧಾರದ ಮೇಲೆ ಸರ್ಕಾರಿ ಉದ್ಯೋಗಗಳನ್ನು ನೀಡುವ ಮುಖ್ಯಮಂತ್ರಿಯ ಹೊಸ ಕ್ರಮವು ಮತ್ತೆ ದೊಡ್ಡ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ. “ನೀವು ಗಣ್ಯರಿಗೆ ಉದ್ಯೋಗ ನೀಡುತ್ತೀರಿ, ಶಾಸಕರ ಪುತ್ರರಿಗೆ …” ಎಂದು ಸಿಧು ಹೇಳಿದರು.

ಜ್ಯೋತಿರಾದಿತ್ಯ ಸಿಂಧಿಯಾ  ಅಥವಾ ಜಿತಿನ್ ಪ್ರಸಾದ ಅವರಂತೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಲು ಸಿದ್ಧರಾಗಿದ್ದೀರಾ ಎಂದು ಕೇಳಿದಾಗ ಹೈಕಮಾಂಡ್ ಅದ್ಭುತ ಜನ. ಮೊದಲ ದಿನದಿಂದ ನಾನು ಜನರ ಪರವಾದ ಕಾರ್ಯಸೂಚಿಯನ್ನು ಅನುಸರಿಸಿದ್ದೇನೆ ಎಂದು ಉತ್ತರಿಸಿದ್ದಾರೆ  ನವಜೋತ್ ಸಿಂಗ್ ಸಿಧು.

ಇದನ್ನೂ ಓದಿ:  ಚುನಾವಣೆ ಗೆಲ್ಲಲು ಬಳಸುವ ಶೋಪೀಸ್ ನಾನಲ್ಲ: ನವಜೋತ್ ಸಿಂಗ್ ಸಿಧು

(Willing to work with Amarinder Singh if issues are resolved says Navjot Singh Sidhu)