ರಿಮೋಟ್ ಕಾರಿನ ಬದಲು ಆನ್ಲೈನ್ನಲ್ಲಿ ಬಂತು ಬೇರೊಂದು ವಸ್ತು; ಈಗ ‘ಚಹ ಮಾಡೋದೇ ಬೆಸ್ಟ್’ ಎಂದ ಗ್ರಾಹಕ
ಹೀಗೆ ಆನ್ಲೈನ್ ಶಾಪಿಂಗ್ನಿಂದ ಕೆಟ್ಟ ಅನುಭವ ಆಗಿದ್ದು ವಿಕ್ರಮ್ ಬುರಗೋಹೈನ್ ಎಂಬುವರಿಗೆ. ಫೇಸ್ಬುಕ್ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ದೆಹಲಿ: ಈಗಂತೂ ಆನ್ಲೈನ್ ಶಾಪಿಂಗ್ ತುಂಬ ಹೆಚ್ಚಾಗುತ್ತಿದೆ. ಹಾಗೇ, ಇದರಲ್ಲಿ ವಂಚನೆಯ ಪ್ರಕರಣಗಳೂ ವರದಿಯಾಗುತ್ತಿವೆ. ಆರ್ಡರ್ ಮಾಡಿದ ವಸ್ತುವಿನ ಬದಲು, ಇನ್ನೊಂದು ಏನೋ ಕೈಸೇರಿದ ಘಟನೆಗಳೂ ನಡೆದಿವೆ. ಹಾಗೇ ದೆಹಲಿಯ ಭಗವಾನ್ ನಗರ ಆಶ್ರಮ ಏರಿಯಾದಲ್ಲಿ ಗ್ರಾಹಕರೊಬ್ಬರಿಗೆ ಇಂಥ ಅನುಭವ ಆಗಿದೆ. ಇ-ಕಾಮರ್ಸ್ ತಾಣದಲ್ಲಿ ರಿಮೋಟ್ ಕಂಟ್ರೋಲ್ ಕಾರ್ ಆರ್ಡರ್ ಮಾಡಿದ್ದ ಇವರಿಗೆ ಬಂದಿದ್ದು ಮಾತ್ರ ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್.
ಹೀಗೆ ಆನ್ಲೈನ್ ಶಾಪಿಂಗ್ನಿಂದ ಕೆಟ್ಟ ಅನುಭವ ಆಗಿದ್ದು ವಿಕ್ರಮ್ ಬುರಗೋಹೈನ್ ಎಂಬುವರಿಗೆ. ಫೇಸ್ಬುಕ್ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಮಕ್ಕಳಿಗಾಗಿ ನಾನು ಅಮೇಜಾನ್ನಲ್ಲಿ ನಾನು ರಿಮೋಟ್ ಕಂಟ್ರೋಲ್ ಕಾರು ಆರ್ಡರ್ ಮಾಡಿದ್ದೆ. ಆದರೆ ಈ ಪಾರ್ಲೆ-ಜಿ ಬಿಸ್ಕತ್ತಿನ ಪ್ಯಾಕೇಟ್ ಬಂತು. ಈಗ ಚಹಾ ಮಾಡಲು ಹೋಗೋದೇ..ಎಂದು ವಿಕ್ರಮ್ ಪೋಸ್ಟ್ ಹಾಕಿದ್ದಾರೆ.
ಈ ಪೋಸ್ಟ್ಗೆ ವಿವಿಧ ಫನ್ನಿ ಕಾಮೆಂಟ್ಗಳು ಬಂದಿವೆ. ನೀವು ರಿಮೋಟ್ ಕಾರು ಆರ್ಡರ್ ಮಾಡಿದ್ದು ನೋಡಿ ಮಕ್ಕಳಿರುವುದು ಅವರಿಗೆ ಗೊತ್ತಾಯಿತು. ಹಾಗಾಗಿ ಪಾರ್ಲೆ-ಜಿ ಕಳಿಸಿದ್ದಾರೆ ಎಂದು ಒಬ್ಬರು ಬರೆದಿದ್ದಾರೆ. ಹಾಗೇ ಇನ್ನೊಬ್ಬರು ಕಾಮೆಂಟ್ ಮಾಡಿ, ನಿಮ್ಮದು ಪುಣ್ಯ, ಇಟ್ಟಿಗೆ ಕಳಿಸಲಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಈಗಾಗಲೇ ದೂರು ನೀಡಿದ್ದೇನೆ. ಅದರಂತೆ ಕಂಪನಿ ಹಣ ಹಿಂತಿರುಗಿಸುವ ಪ್ರಕ್ರಿಯೆ ನಡೆಸುತ್ತಿದೆ. ಕ್ಷಮೆಯನ್ನೂ ಕೇಳಿದೆ ಎಂದು ವಿಕ್ರಮ್ ತಿಳಿಸಿದ್ದಾರೆ. ಕಳೆದ ತಿಂಗಳು ಮುಂಬೈ ಮೂಲದ ವ್ಯಕ್ತಿಯೊಬ್ಬರಿಗೆ ಹೀಗೇ ಅನುಭವ ಆಗಿತ್ತು. ಕೊಲ್ಗೇಟ್ ಮೌತ್ ವಾಶ್ ಆರ್ಡರ್ ಮಾಡಿದ್ದವರಿಗೆ ರೆಡ್ಮಿ ನೋಟ್ 10 ಫೋನ್ ಬಂದಿತ್ತು.
ಇದನ್ನೂ ಓದಿ: ಡಿಸಿಜಿಐಗೆ ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗಗಳ ಮಾಹಿತಿ ಸಲ್ಲಿಸಿದ ಭಾರತ್ ಬಯೋಟೆಕ್
(Delhi Man received Parle-G biscuit pakc in online instead of Remote control car)