ಕಬ್ಬಿನ ಹೊಲದಲ್ಲಿ 8 ವರ್ಷದ ಬಾಲಕಿಯ ಶವ ಪತ್ತೆ
ಎಂಟು ವೈದ್ಯರೊಡನೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅವಳ ಕುತ್ತು ಹಿಸುಕುವ ಮೂಲಕ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಅತ್ಯಾಚಾರದ ಕುರಿತಾಗಿ ಯಾವುದೇ ದೃಢೀಕರಣ ಕಂಡು ಬಂದಿಲ್ಲ ಎಂದು ಖೇರಿಯ ಪೊಲೀಸ್ ಅಧಿಕಾರಿ ವಿಜಯ್ ಧುಲ್ ಹೇಳಿಕೆ ನೀಡಿದ್ದಾರೆ.
ಲಕ್ನೋ: 8 ವರ್ಷದ ಮುಗ್ಧ ಬಾಲಕಿಯನ್ನು ಹತ್ಯೆ ಮಾಡಿದ ಘಟನೆ ಭಾನುವಾರ ನಡೆದಿದೆ. ಲಕ್ನೋದಿಂದ 130 ಕಿಲೋ ಮೀಟರ್ ದೂರದಲ್ಲಿರುವ ಖೇರಿ ಜಿಲ್ಲೆಯ ಹಳ್ಳಿಯೊಂದರ ಕಬ್ಬಿನ ಹೊಲದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆಕೆಯ ಮೈ ಮೇಲಿದ್ದ ಗಾಯದ ಆಧಾರದ ಮೆಲೆ ಅತ್ಯಾಚಾರ ಮಾಡಿ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಶಂಕೆ ಮೂಡಿದೆ.
ಬಾಲಕಿ ಧರಿಸಿದ್ದ ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಅತ್ಯಾಚಾರ ಮಾಡಿರುವ ಶಂಕೆ ಇದೆ. ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊಲದಲ್ಲಿ ಆಡುಗಳನ್ನು ಮೇಯಿಸಲು ಬಾಲಕಿ ಮತ್ತು ಅಜ್ಜಿ ಹೋಗಿದ್ದರು. ಮಧ್ಯಾಹ್ನದ ವೇಳೆಗೆ, ನಾನು ಮನೆಗೆ ಹೋಗುತ್ತೇನೆ ಎಂದು ಅಲ್ಲಿಂದ ಬಾಲಕಿ ಹೊರಟಿದ್ದಾಳೆ. ಸಂಜೆಯ ವೇಳೆಗೆ ಅಜ್ಜಿ ಮನೆಗೆ ಬರುವಷ್ಟರಲ್ಲಿ ಬಾಲಕಿ ಮನೆಯಲ್ಲಿ ಇರಲಿಲ್ಲ. ಆತಂಕಗೊಂಡ ಕುಟುಂಬವು ಅವಳನ್ನು ಹುಡುಕಲು ಪ್ರಾರಂಭಿಸಿದೆ.
ಆಡು ಮೇಯಿಸಲು ನನ್ನೊಂದಿಗೆ ಬಂದಿದ್ದ ಬಾಲಕಿ, ನನಗೆ ಆಯಾಸವಾಗುತ್ತಿದೆ ನಾನು ಮನೆಗೆ ಹೋಗುತ್ತೇನೆ ಎಂದು ಅಲ್ಲಿಂದ ಹೊರಟಳು. ನಾನು ಆಡು ಮೇಯಿಸಿಕೊಂಡು ಬರುತ್ತೇನೆ ಎಂದು ಹೇಳಿದೆ. ಸಂಜೆಯ ವೇಳೆಗೆ ನಾನು ಮನೆಗೆ ಬರುವಷ್ಟರಲ್ಲಿ ಆಕೆ ಮನೆಗೆ ಇನ್ನೂ ತಲುಪಿರಲಿಲ್ಲ ಎಂದು ಗೊತ್ತಾಯಿತು. ಗ್ರಾಮದಲ್ಲಿ ಎಲ್ಲೋ ಆಟವಾಡುತ್ತಿರುತ್ತಾಳೆ ಎಂದು ಭಾವಿಸಿ ಹುಡುಕಲು ಪ್ರಾರಂಭಿಸಿದೆವು. ಆದರೆ ಅವಳ ಮೃತದೇಹವು ಪತ್ತೆಯಾಗಿದೆ. ಅವಳ ಕಾಲುಗಳನ್ನು ಕಟ್ಟಿಹಾಕಲಾಗಿದೆ ಎಂದು ಬಾಲಕಿಯ ಅಜ್ಜಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಎಂಟು ವೈದ್ಯರೊಡನೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅವಳ ಕುತ್ತು ಹಿಸುಕುವ ಮೂಲಕ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಅತ್ಯಾಚಾರದ ಕುರಿತಾಗಿ ಯಾವುದೇ ದೃಢೀಕರಣ ಕಂಡು ಬಂದಿಲ್ಲ ಎಂದು ಖೇರಿಯ ಪೊಲೀಸ್ ಅಧಿಕಾರಿ ವಿಜಯ್ ಧುಲ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಒತ್ತೆಹಣಕ್ಕಾಗಿ ಅಪಹೃತ ಬಾಲಕನ ಬರ್ಬರ ಹತ್ಯೆ: ನಂಜಾಪುರದಲ್ಲಿ ಶವ ಪತ್ತೆ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಫೂಟ್ಪಾತ್ ಬಳಿ ವ್ಯಕ್ತಿಯ ಶವ ಪತ್ತೆ
Published On - 12:51 pm, Tue, 22 June 21