ದಿನೇ ದಿನೇ ಹೆಚ್ಚಾದ ರೂಪಾಂತರಿ ವೈರಾಣು ಕೇಸ್.. ಮಹಾರಾಷ್ಟ್ರದಲ್ಲಿ 21 ಜನರಲ್ಲಿ ಡೆಲ್ಟಾ ಪ್ಲಸ್ ಪ್ರಬೇಧ ಪತ್ತೆ

ಮೇ 15ರಿಂದ ಮಹಾರಾಷ್ಟ್ರದಲ್ಲಿ 7,500ಕ್ಕೂ ಹೆಚ್ಚು ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್ ಮಾಡಲಾಗಿದ್ದು ಪ್ರತಿ ಜಿಲ್ಲೆಯಲ್ಲಿ ತಲಾ 100 ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್ ಮಾಡಲಾಗಿದೆ. ಡೆಲ್ಟಾ ಪ್ರಬೇಧದ ವೈರಸ್ ಈಗಾಗಲೇ ರೂಪಾಂತರಗೊಂಡು ಡೆಲ್ಟಾ ಪ್ರಬೇಧ ಡೆಲ್ಟಾ ಪ್ಲಸ್ ಪ್ರಬೇಧವಾಗಿ ಹರಡುತ್ತಿದೆ.

ದಿನೇ ದಿನೇ ಹೆಚ್ಚಾದ ರೂಪಾಂತರಿ ವೈರಾಣು ಕೇಸ್.. ಮಹಾರಾಷ್ಟ್ರದಲ್ಲಿ 21 ಜನರಲ್ಲಿ ಡೆಲ್ಟಾ ಪ್ಲಸ್ ಪ್ರಬೇಧ ಪತ್ತೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 22, 2021 | 1:30 PM

ಕೊವಿಡ್-19 ವೈರಾಣುವಿನ ಹೊಸ ರೂಪಾಂತರಿ ಡೆಲ್ಟಾ ಪ್ಲಸ್ ಪ್ರಬೇಧ ಇತ್ತೀಚೆಗೆ ದೇಶದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ 21 ಜನರಲ್ಲಿ ಡೆಲ್ಟಾ ಪ್ಲಸ್ ಪ್ರಬೇಧ ಪತ್ತೆಯಾಗಿದೆ. ರತ್ನಗಿರಿ ಜಿಲ್ಲೆ 9, ಜಲಗಾಂವ್ ಜಿಲ್ಲೆ 7, ಮುಂಬೈ 2 ಕೇಸ್, ಪಾಲ್ಘರ್, ಸಿಂಧುದುರ್ಗ, ಥಾಣೆಯಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ.

ಮೇ 15ರಿಂದ ಮಹಾರಾಷ್ಟ್ರದಲ್ಲಿ 7,500ಕ್ಕೂ ಹೆಚ್ಚು ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್ ಮಾಡಲಾಗಿದ್ದು ಪ್ರತಿ ಜಿಲ್ಲೆಯಲ್ಲಿ ತಲಾ 100 ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್ ಮಾಡಲಾಗಿದೆ. ಡೆಲ್ಟಾ ಪ್ರಬೇಧದ ವೈರಸ್ ಈಗಾಗಲೇ ರೂಪಾಂತರಗೊಂಡು ಡೆಲ್ಟಾ ಪ್ರಬೇಧ ಡೆಲ್ಟಾ ಪ್ಲಸ್ ಪ್ರಬೇಧವಾಗಿ ಹರಡುತ್ತಿದೆ. ಭಾರತದಲ್ಲಿ ಕೊರೊನಾ 3ನೇ ಅಲೆಗೆ ಡೆಲ್ಟಾ ಪ್ರಬೇಧ ಕಾರಣವಾಗಬಹುದು. ಆದರೆ ರೂಪಾಂತರವು ಪ್ರಬಲವಾಗಿದೆಯೇ ಅಥವಾ ಚದುರಿಹೋಗಿದೆಯೆ ಎಂದು ಅರ್ಥಮಾಡಿಕೊಳ್ಳಲು ಹೆಚ್ಚಿನ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಡೆಲ್ಟಾ ಪ್ಲಸ್ ರೂಪಾಂತರಿ ಎಂದರೇನು? ಭಾರತದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಡೆಲ್ಟಾ ಪ್ರಬೇಧದ ಕೊರೊನಾ ವೈರಸ್ ಕಂಡುಬಂದಿತ್ತು. ಈ ಸ್ವರೂಪದ ಕೊವಿಡ್ ವೈರಸ್ನಿಂದಾಗಿ ಹಲವು ಜನರು ಸಂಕಷ್ಟಕ್ಕೆ ಸಿಲುಕಿದರು. ವಿಜ್ಞಾನಿಗಳ ಪ್ರಕಾರ, ಡೆಲ್ಟಾದಿಂದ ರೂಪಾಂತರಿ ಹೊಂದಿದ ವೈರಾಣುವೇ ಡೆಲ್ಟಾ ಪ್ಲಸ್ ಆಗಿದೆ. ಸ್ವರೂಪ ಬದಲಿಸಿದೆ. ಈ ವೈರಾಣುವಿನ ಮೇಲೆ ಕೇಂದ್ರ ಸರ್ಕಾರದ ತಂಡವೂ ಕಣ್ಣಿರಿಸಿದೆ. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ತಜ್ಞರು ಹೇಳುವ ಪ್ರಕಾರ, ಹೊಸ ಪ್ರಭೇದದ ವೈರಾಣುವಿನ ಬಗ್ಗೆ ಭಾರತದಲ್ಲಿ ಇನ್ನೂ ಕೂಡ ತನಿಖೆ ನಡೆಯುತ್ತಿದೆ. ವೈರಾಣು ರೂಪಾಂತರ ಹೊಂದುವುದು ಒಂದು ಜೈವಿಕ ಕ್ರಮ. ಅದನ್ನು ತಡೆಗಟ್ಟಲು ನಾವು ಕ್ರಮ ಕೈಗೊಳ್ಳಬೇಕು. ಎಲ್ಲಾ ಮುಂಜಾಗ್ರತೆಗಳನ್ನು ಪಾಲಿಸಬೇಕು. ಹರಡುವಿಕೆ ತಡೆಗಟ್ಟಬೇಕು ಎಂದು ಸರ್ಕಾರ ಹೇಳುತ್ತಾ ಬಂದಿದೆ.

ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ಹೇಗೆ ಸೃಷ್ಟಿಯಾದದ್ದು? ಡೆಲ್ಟಾ ವೈರಾಣು ಅಥವಾ B.1.617.2 ಸ್ವರೂಪದ ಕೊರೊನಾ ವೈರಸ್ ಡೆಲ್ಟಾ ಪ್ಲಸ್ ಆಗಿ ರೂಪಾಂತರ ಹೊಂದಿದೆ. ಈ ರೂಪಾಂತರವನ್ನು K417N ಎಂದು ಕರೆದಿದ್ದಾರೆ. ಈ ಹೊಸ ಸ್ವರೂಪದ ವೈರಾಣುವಿನ ಸ್ಪೈಕ್ ಪ್ರೊಟೀನ್ನಲ್ಲಿ ಕೆಲವು ಬದಲಾವಣೆಗಳು ಆಗಿದೆ.

ಇದನ್ನೂ ಓದಿ: Explainer: ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಎಂದರೇನು? ರೂಪಾಂತರಿ ವೈರಾಣು ಎಷ್ಟು ಅಪಾಯಕಾರಿ, ಇದರಿಂದ ರಕ್ಷಣೆ ಹೇಗೆ?

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು