AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಪ್ರತಿಭೆ ನನಗೆ ಬೇಕಿಲ್ಲ ಎಂದಿದ್ದರು ಉಪ್ಪಿ: ತೆಲುಗು ಹಿರಿಯ ನಟ

Upendra in Tollywood: ಉಪೇಂದ್ರ ಕನ್ನಡದಲ್ಲಿ ಮಾತ್ರವಲ್ಲ ತೆಲುಗಿನಲ್ಲಿಯೂ ಜನಪ್ರಿಯ ನಟ, ನಿರ್ದೇಶಕ. ಉಪೇಂದ್ರ ಅವರು 1997 ರಲ್ಲಿ ಮೊದಲ ತೆಲುಗು ಸಿನಿಮಾ ‘ಓಂಕಾರ’ ನಿರ್ದೇಶಿಸಿದ್ದರು. ಆಗ ಅವರೊಟ್ಟಿಗೆ ಕೆಲಸ ಮಾಡಿದ್ದ ಹಿರಿಯ ನಟ, ಸಂಭಾಷಣೆಕಾರರೊಬ್ಬರು ಉಪೇಂದ್ರ ಅವರ ಬಗ್ಗೆ ಮಾತನಾಡಿದ್ದಾರೆ.

ನಿಮ್ಮ ಪ್ರತಿಭೆ ನನಗೆ ಬೇಕಿಲ್ಲ ಎಂದಿದ್ದರು ಉಪ್ಪಿ: ತೆಲುಗು ಹಿರಿಯ ನಟ
Upendra
ಮಂಜುನಾಥ ಸಿ.
|

Updated on: Dec 05, 2025 | 2:14 PM

Share

ಉಪೇಂದ್ರ (Upendra) ಅವರಿಗೆ ಕನ್ನಡದಲ್ಲಿ ಇರುವಂತೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. 90ರ ದಶಕದಲ್ಲಿಯೇ ತೆಲುಗು ಚಿತ್ರರಂಗದಲ್ಲಿ ಉಪೇಂದ್ರ ಕೆಲಸ ಮಾಡಿದ್ದರು. ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು ಮಾತ್ರವೇ ಅಲ್ಲದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ. ಚಿರಂಜೀವಿ ಅವರಿಗೆ ತೆಲುಗು ಚಿತ್ರರಂಗದಲ್ಲಿ ಒಂದು ಕಲ್ಟ್ ಫಾಲೋವಿಂಗ್ ಇದೆ. ಅಲ್ಲಿನ ಚಿತ್ರಕರ್ಮಿಗಳೊಟ್ಟಿಗೆ ಆಪ್ತ ಬಂಧವೂ ಸಹ ಉಪೇಂದ್ರ ಅವರಿಗೆ ಇದೆ. ಇತ್ತೀಚೆಗೆ ಸಹ ಉಪೇಂದ್ರ ಅವರು ತೆಲುಗಿನ ‘ಆಂಧ್ರ ಕಿಂಗ್’ ಸಿನಿಮಾನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದೀಗ ತೆಲುಗು ಚಿತ್ರರಂಗದ ಹಿರಿಯ ಮತ್ತು ಬಲು ಜನಪ್ರಿಯ ಪೋಷಕ ನಟರೊಬ್ಬರು ಉಪೇಂದ್ರ ಅವರೊಟ್ಟಿಗಿನ ತಮ್ಮ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಉಪೇಂದ್ರ ಅವರು ‘ನಿಮ್ಮ ಪ್ರತಿಭೆ ನನಗೆ ಬೇಕಿಲ್ಲ’ ಎಂದು ನನಗೆ ಹೇಳಿದ್ದರು ಎಂದು ಆ ಹಿರಿಯ ಪೋಷಕ ನಟ ಹೇಳಿದ್ದು, ಸನ್ನಿವೇಶವನ್ನು ಸಹ ವಿವರಿಸಿದ್ದಾರೆ.

1995 ರಲ್ಲಿ ಉಪೇಂದ್ರ ನಿರ್ದೇಶಿಸಿ, ಶಿವಣ್ಣ ನಟಿಸಿದ್ದ ‘ಓಂ’ ಸಿನಿಮಾ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಯ್ತು. ತೆಲುಗು, ತಮಿಳಿನಲ್ಲಿ ಹೆಸರು ಮಾಡಿದ್ದ ಕೆವಿ ಸತ್ಯನಾರಾಯಣ್ ಅವರು ಕನ್ನಡದ ‘ಓಂ’ ಸಿನಿಮಾ ನೋಡಿ ಇಷ್ಟಪಟ್ಟು ಅದನ್ನು ತೆಲುಗಿನಲ್ಲಿ ರೀಮೇಕ್ ಮಾಡಲು ಮುಂದಾದರು. ಸಿನಿಮಾಕ್ಕೆ ರಾಜಶೇಖರ್ ನಾಯಕ, ಉಪೇಂದ್ರ ಅವರಿಂದಲೇ ಸಿನಿಮಾದ ನಿರ್ದೇಶನ ಮಾಡಿಸಿದ್ದರು. ಸಿನಿಮಾಕ್ಕೆ ‘ಓಂಕಾರಂ’ ಎಂದು ಹೆಸರಿಡಲಾಗಿತ್ತು. ಅದು ಉಪೇಂದ್ರ ಕೆಲಸ ಮಾಡಿದ ಮೊಟ್ಟ ಮೊದಲ ತೆಲುಗು ಸಿನಿಮಾ ಆಗಿತ್ತು.

ತೆಲುಗಿನ ಹಿರಿಯ ಪೋಷಕ ನಟ ಎಲ್​ಬಿ ಶ್ರೀರಾಮ್ ಅವರು ಆ ಸಿನಿಮಾಕ್ಕೆ ಸಂಭಾಷಣೆ, ಚಿತ್ರಕತೆ ಬರೆದಿದ್ದರು. ಅದೇ ಎಲ್​​ಬಿ ಶ್ರೀರಾಮ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಓಂಕಾರಂ’ ಸಿನಿಮಾದ ಅನುಭವಗಳನ್ನು ಹೇಳಿಕೊಂಡಿದ್ದಾರೆ. ‘ಅದಾಗಲೇ ನಾನು ಭಿನ್ನ ಸಂಭಾಷಣೆಕಾರ, ಚಿತ್ರಕತೆಗಾರ ಎಂಬ ಹೆಸರು ಇತ್ತು. ಸೂಪರ್ ಹಿಟ್ ಸಿನಿಮಾಗಳಾದ ‘ಹಿಟ್ಲರ್’, ‘ಹಲೋ ಬ್ರದರ್’ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದೆ. ಹಾಗಾಗಿ ಕೆವಿ ಸತ್ಯನಾರಾಯಣ್ ಅವರು ನನ್ನನ್ನು ಸಂಭಾಷಣೆಕಾರನನ್ನಾಗಿ ಕರೆಸಿದ್ದರು’ ಎಂದಿದ್ದಾರೆ.

ಇದನ್ನೂ ಓದಿ:ಉಪೇಂದ್ರ ತೆಲುಗು ಸಿನಿಮಾ ‘ಆಂಧ್ರ ಕಿಂಗ್’ ಗಳಿಸಿದ್ದೆಷ್ಟು? ಹಿಟ್ ಅಥವಾ ಫ್ಲಾಪ್?

‘ನನ್ನನ್ನು ಒಮ್ಮೆ ಉಪೇಂದ್ರ ಕರೆದರು. ಕರೆದು ಸಂಭಾಷಣೆ ಎಷ್ಟಾಗಿದೆ ಎಂದು ಕೇಳಿದರು. ಅದಕ್ಕೆ ನಾನು, ಇಲ್ಲ, ಭಿನ್ನವಾಗಿ ಬರೆಯೋಣ ಎಂದುಕೊಂಡೆ ಹಾಗಾಗಿ ಹೆಚ್ಚು ಸಮಯ ಹಿಡಿಯುತ್ತಿದೆ. ಮೂರು ದಿನಗಳಾದರೂ ಕೇವಲ ನಾಲ್ಕು ಸೀನ್​​ಗೆ ಮಾತ್ರವೇ ಸಂಭಾಷಣೆ ಬರೆದಿದ್ದೇನೆ ಎಂದು ಹೇಳಿದೆ’ ಎಂದು ನೆನಪು ಮಾಡಿಕೊಂಡಿದ್ದಾರೆ ಶ್ರೀರಾಮ್.

‘ಅದಕ್ಕೆ ಉಪೇಂದ್ರ, ಶ್ರೀರಾಮ್ ಅವರೇ ನೀವು ಚೆನ್ನಾಗಿ ಬರೆಯುತ್ತೀರಿ, ಭಿನ್ನವಾಗಿ ಬರೆಯುತ್ತೀರಿ ಎಂದು ಕೇಳಿದ್ದೇನೆ ಆದರೆ ನನಗೆ ಇಲ್ಲಿ ಅದರ ಅವಶ್ಯಕತೆ ಇಲ್ಲ. ನಿಮ್ಮ ಪ್ರತಿಭೆ ನನಗೆ ಬೇಕಿಲ್ಲ. ನಾನು ಈಗಾಗಲೇ ಈ ಸಿನಿಮಾ ಕನ್ನಡದಲ್ಲಿ ಮಾಡಿದ್ದೇನೆ, ನನ್ನ ಕತೆಗೆ ಸಂಭಾಷಣೆ ಹೇಗಿರಬೇಕು ಎಂಬ ಐಡಿಯಾ ಈಗಾಗಲೇ ನನಗೆ ಇದೆ. ಆದರೆ ನನಗೆ ತೆಲುಗು ಬಾರದು ಎಂಬ ಕಾರಣಕ್ಕೆ ಮಾತ್ರವೇ ನೀವು ಬಂದಿದ್ದೀರಿ. ಇಲ್ಲಿ ನಿಮ್ಮ ಪ್ರತಿಭೆಯನ್ನು ಬಳಸಬೇಡಿ, ಕನ್ನಡದಲ್ಲಿ ನಾನು ಏನು ಮಾಡಿದ್ದೀನೋ ಅದನ್ನೇ ತೆಲುಗಿನಲ್ಲಿ ಕೊಡಿ ಸಾಕು’ ಎಂದರು ಎಂದು ಶ್ರೀರಾಮ್ ನೆನಪಿಸಿಕೊಂಡಿದ್ದಾರೆ.

‘ಅದೇ ದಿನ ನಾವು ಕಚೇರಿಯಲ್ಲಿ ಕೂತೆವು, ಉಪೇಂದ್ರ, ‘ಓಂ’ ಸಿನಿಮಾದ ಸಂಭಾಷಣೆಗಳನ್ನು ಇಂಗ್ಲೀಷ್​​ನಲ್ಲಿ ಹೇಳಿದರು. ಅದನ್ನು ನಾನು ತೆಲುಗಿನಲ್ಲಿ ಬರೆದೆ. ಅವರು ಸ್ಪಷ್ಟವಾಗಿ ಹೇಳಿದ್ದರು, ಯಾವುದೇ ಕಾರಣಕ್ಕೂ ಸ್ವಂತಿಕೆ ಬಳಸಬಾರದು, ನಿಮ್ಮ ಸ್ವಂತ ಸಂಭಾಷಣೆ ಬಳಸಿದರೆ ತೆಲುಗು ಬಾರದ ನನಗೆ ಅದು ಗೊಂದಲ ಮೂಡಿಸುತ್ತದೆ’ ಎಂದು ಅವರು ಹೇಳಿದ್ದರು. ಹಾಗಾಗಿ ಅವರು ಇಂಗ್ಲೀಷ್​​ನಲ್ಲಿ ಹೇಳಿದ ಸಂಭಾಷಣೆಯನ್ನು ನಾನು ತೆಲುಗಿನಲ್ಲಿ ಬರೆದೆ, ಮೂರೇ ದಿನಕ್ಕೆ ಇಡೀ ಸಿನಿಮಾದ ಸಂಭಾಷಣೆ ಕೆಲಸ ಮುಗಿದು ಹೋಯ್ತು’ ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ