AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SA vs NZ, T20 Semi Final Highlights: ಆಲೆನ್ ದಾಖಲೆಯ ಶತಕ; ಫೈನಲ್​ಗೇರಿದ ನ್ಯೂಜಿಲೆಂಡ್

South Africa vs New Zealand T20 world cup Highlights in Kannada: 2026 ರ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯ ನೀಡುತ್ತಿದೆ. ಐಸಿಸಿ ನಾಕೌಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿಯೂ ಗೆದ್ದಿದೆ.

SA vs NZ, T20 Semi Final Highlights:  ಆಲೆನ್ ದಾಖಲೆಯ ಶತಕ; ಫೈನಲ್​ಗೇರಿದ ನ್ಯೂಜಿಲೆಂಡ್
Finn Allen
ಪೃಥ್ವಿಶಂಕರ
|

Updated on:Mar 04, 2026 | 10:12 PM

Share

2026 ರ ಟಿ20 ವಿಶ್ವಕಪ್‌ನ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ನ್ಯೂಜಿಲೆಂಡ್ ಫೈನಲ್ ತಲುಪಿದೆ. ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ಕಿವೀಸ್ ಪಡೆ ಕಳೆದ ವಿಶ್ವಕಪ್ ರನ್ನರ್ ಅಪ್ ದಕ್ಷಿಣ ಆಫ್ರಿಕಾವನ್ನು ಮೊದಲ ಸೆಮಿಫೈನಲ್‌ನಲ್ಲಿ ಒಂಬತ್ತು ವಿಕೆಟ್‌ಗಳಿಂದ ಸೋಲಿಸಿ, ತಮ್ಮ ಎರಡನೇ ವಿಶ್ವಕಪ್ ಫೈನಲ್ ಆಡಲು ಟಿಕೆಟ್ ಪಡೆದುಕೊಂಡಿದೆ. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಸಾಂಘಿಕ ಪ್ರದರ್ಶನ ನೀಡಿತು. ಮೊದಲು ಆಫ್ರಿಕಾ ತಂಡವನ್ನು 169 ರನ್​ಗಳಿಗೆ ಕಟ್ಟಿ ಹಾಕಿದ ಕಿವೀಸ್, ಫಿನ್ ಆಲೆನ್ ಅವರ ಸಿಡಿಲಬ್ಬರದ ಶತಕದ ನೆರವಿನಿಂದ ಸುಲಭವಾಗಿ ಗೆಲುವು ದಾಖಲಿಸಿತು. ಆಲೆನ್ ಕೇವಲ 33 ಎಸೆತಗಳಲ್ಲಿ ಅಜೇಯ ಶತಕ ಬಾರಿಸುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದರು.

LIVE NEWS & UPDATES

The liveblog has ended.
  • 04 Mar 2026 10:06 PM (IST)

    SA vs NZ, T20 Semi Final Live: ಫೈನಲ್ ತಲುಪಿದ ನ್ಯೂಜಿಲೆಂಡ್

    ನ್ಯೂಜಿಲೆಂಡ್ ಭರ್ಜರಿ ಪ್ರದರ್ಶನದೊಂದಿಗೆ ಫೈನಲ್‌ಗೆ ಸ್ಥಾನ ಪಡೆದುಕೊಂಡಿತು. ತಂಡದ ಪರ ಫಿನ್ ಅಲೆನ್ ಕೇವಲ 33 ಎಸೆತಗಳಲ್ಲಿ ಅದ್ಭುತ ಶತಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನ್ಯೂಜಿಲೆಂಡ್ ಕೇವಲ 12.5 ಓವರ್‌ಗಳಲ್ಲಿ 173 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿತು.

  • 04 Mar 2026 09:48 PM (IST)

    SA vs NZ, T20 Semi Final Live: ಅಲೆನ್ ದಾಖಲೆಯ ಅರ್ಧಶತಕ

    ಫಿನ್ ಅಲೆನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು, ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ನಾಕೌಟ್ ಪಂದ್ಯವೊಂದರಲ್ಲಿ ವೇಗದ ಅರ್ಧಶತಕವಾಗಿದೆ.

  • 04 Mar 2026 09:47 PM (IST)

    SA vs NZ, T20 Semi Final Live: ಸೀಫರ್ಟ್ ಅರ್ಧಶತಕ

    ಟಿಮ್ ಸೀಫರ್ಟ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಂಡವನ್ನು ಕೇವಲ ಎಂಟು ಓವರ್‌ಗಳಲ್ಲಿ 100 ರನ್ ಗಡಿ ದಾಟಿಸಿದರು. ನ್ಯೂಜಿಲೆಂಡ್ ಸುಲಭ ಗೆಲುವಿನತ್ತ ಸಜ್ಜಾಗಿದೆ.

  • 04 Mar 2026 09:36 PM (IST)

    SA vs NZ, T20 Semi Final Live: 6 ಓವರ್‌ಗಳಲ್ಲಿ 84 ರನ್‌ಗಳು

    ನ್ಯೂಜಿಲೆಂಡ್‌ನ ಆರಂಭಿಕರು ಪವರ್‌ಪ್ಲೇನಲ್ಲೇ ದಕ್ಷಿಣ ಆಫ್ರಿಕಾವನ್ನು ಸೋಲಿನ ದವಡೆಗೆ ತಳ್ಳಿದ್ದಾರೆ. ಸೀಫರ್ಟ್ ಮತ್ತು ಅಲೆನ್ ದಕ್ಷಿಣ ಆಫ್ರಿಕಾದ ಪ್ರತಿಯೊಬ್ಬ ಬೌಲರ್‌ಗಳನ್ನೂ ಹೊಡೆದುರುಳಿಸಿ ಕೇವಲ ಆರು ಓವರ್‌ಗಳಲ್ಲಿ 84 ರನ್‌ಗಳನ್ನು ಗಳಿಸಿದರು. ಆ ರನ್‌ಗಳಲ್ಲಿ 22 ರನ್‌ಗಳು ಪವರ್‌ಪ್ಲೇಯ ಕೊನೆಯ ಓವರ್‌ನಲ್ಲಿ ಬಂದವು.

  • 04 Mar 2026 09:21 PM (IST)

    SA vs NZ, T20 Semi Final Live: ಉತ್ತಮ ಆರಂಭ

    ಟಿಮ್ ಸೀಫರ್ಟ್ ತಮಗೆ ನೀಡಲಾದ ಜೀವವನ್ನು ಸದುಪಯೋಗಪಡಿಸಿಕೊಂಡು ದಕ್ಷಿಣ ಆಫ್ರಿಕಾದ ಬೌಲರ್‌ಗಳ ಬೆವರಿಳಿಸಿದ್ದಾರೆ. ಕೇವಲ ಮೂರು ಓವರ್‌ಗಳಲ್ಲಿ, ಸೀಫರ್ಟ್ ಮತ್ತು ಅಲೆನ್ ನ್ಯೂಜಿಲೆಂಡ್ ಅನ್ನು 37 ರನ್‌ಗಳಿಗೆ ಕೊಂಡೊಯ್ದರು.

  • 04 Mar 2026 08:57 PM (IST)

    SA vs NZ, T20 Semi Final Live: ನ್ಯೂಜಿಲೆಂಡ್​ಗೆ 170 ರನ್ ಗುರಿ

    ಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಮುಗಿದಿದ್ದು, ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 169 ರನ್ ಗಳಿಸಿದೆ. ಅಂತಿಮ ಓವರ್‌ನಲ್ಲಿ ಮ್ಯಾಟ್ ಹೆನ್ರಿ ಕೇವಲ 6 ರನ್‌ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್‌ಗಳನ್ನು ಪಡೆದರು. ಮಾರ್ಕೊ ಯಾನ್ಸನ್ 30 ಎಸೆತಗಳಲ್ಲಿ 55 ರನ್ ಗಳಿಸಿ ಅಜೇಯರಾಗಿ ಉಳಿದರು. ಏತನ್ಮಧ್ಯೆ, ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ, ಕೋಲ್ ಮೆಕ್‌ಕಾಂಚಿ ಮತ್ತು ರಾಚಿನ್ ರವೀಂದ್ರ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

  • 04 Mar 2026 08:44 PM (IST)

    SA vs NZ, T20 Semi Final Live: ಸತತ 2 ವಿಕೆಟ್‌ಗಳು

    20ನೇ ಓವರ್‌ನಲ್ಲಿ ಮ್ಯಾಟ್ ಹೆನ್ರಿ ಸತತ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಮೊದಲು ಅವರು ಕಾರ್ಬಿನ್ ಬಾಷ್ ಅವರನ್ನು ಬೌಲ್ಡ್ ಮಾಡಿದರು ಮತ್ತು ನಂತರ, ಮುಂದಿನ ಎಸೆತದಲ್ಲಿ ಕಗಿಸೊ ರಬಾಡ ಅವರನ್ನು ಔಟ್ ಮಾಡಿದರು.

  • 04 Mar 2026 08:43 PM (IST)

    SA vs NZ, T20 Semi Final Live: ಯಾನ್ಸನ್ ಅರ್ಧಶತಕ

    ಮಾರ್ಕೊ ಯಾನ್ಸೆನ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಗಳಿಸಿ ತಂಡವನ್ನು ಸಂಕಷ್ಟದಿಂದ ಹೊರತಂದರು. 19 ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅವರು ಅರ್ಧಶತಕ ಪೂರೈಸಿದರು.

  • 04 Mar 2026 08:20 PM (IST)

    SA vs NZ, T20 Semi Final Live: ಬ್ರೆವಿಸ್ ಔಟ್

    ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಲೈನ್ ಅಪ್ ನ ಅರ್ಧದಷ್ಟು ಆಟಗಾರರು ಪೆವಿಲಿಯನ್​ಗೆ ಮರಳಿದ್ದಾರೆ. ವೇಗವಾಗಿ ರನ್ ಗಳಿಸುತ್ತಿದ್ದ ಡೆವಾಲ್ಡ್ ಬ್ರೆವಿಸ್ (34) ಅವರನ್ನು 11 ನೇ ಓವರ್​ನಲ್ಲಿ ಜೇಮ್ಸ್ ನೀಶಮ್ ಔಟ್ ಮಾಡಿ ದಕ್ಷಿಣ ಆಫ್ರಿಕಾಕ್ಕೆ ಐದನೇ ವಿಕೆಟ್ ನೀಡಿದರು.

  • 04 Mar 2026 07:58 PM (IST)

    SA vs NZ, T20 Semi Final Live: ಮಾರ್ಕ್ರಾಮ್ ಕೂಡ ಔಟ್

    ದಕ್ಷಿಣ ಆಫ್ರಿಕಾ ತಂಡದ ನಾಯಕ ಐಡನ್ ಮಾರ್ಕ್ರಾಮ್ ಔಟಾಗಿದ್ದಾರೆ. ಎಂಟನೇ ಓವರ್‌ನಲ್ಲಿ ರಚಿನ್ ರವೀಂದ್ರ ಎಸೆತದಲ್ಲಿ ಲಾಂಗ್-ಆನ್‌ನಲ್ಲಿ ಮಾರ್ಕ್ರಾಮ್ (18) ಕ್ಯಾಚ್ ನೀಡಿದರು.

  • 04 Mar 2026 07:23 PM (IST)

    SA vs NZ, T20 Semi Final Live: 2 ಎಸೆತಗಳಲ್ಲಿ 2 ವಿಕೆಟ್‌

    ದಕ್ಷಿಣ ಆಫ್ರಿಕಾ ತಂಡವು ಎರಡನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭವನ್ನು ಪಡೆಯಿತು. ಕೋಲ್ ಮೆಕಾಂಚಿ ಸತತ ಎಸೆತಗಳಲ್ಲಿ ಕ್ವಿಂಟನ್ ಡಿ ಕಾಕ್ (10) ಮತ್ತು ರಯಾನ್ ರಿಕಲ್ಟನ್ (0) ಅವರನ್ನು ಔಟ್ ಮಾಡಿದರು.

  • 04 Mar 2026 07:08 PM (IST)

    SA vs NZ, T20 Semi Final Live: ನ್ಯೂಜಿಲೆಂಡ್ ತಂಡ

    ಮಿಚೆಲ್ ಸ್ಯಾಂಟ್ನರ್ (ನಾಯಕ), ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಾರ್ಕ್ ಹೆನ್ರಿ, ಕೋಲ್ ಮೆಕ್‌ಕಾಂಚಿ ಮತ್ತು ಲಾಕಿ ಫರ್ಗುಸನ್

  • 04 Mar 2026 07:07 PM (IST)

    SA vs NZ, T20 Semi Final Live: ದಕ್ಷಿಣ ಆಫ್ರಿಕಾ

    ಏಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಿಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೂವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಯಾನ್ಸೆನ್, ಕಾರ್ಬಿನ್ ಬಾಷ್, ಕಗಿಸೊ ರಬಾಡ, ಕೇಶವ್ ಮಹಾರಾಜ್ ಮತ್ತು ಲುಂಗಿ ಎನ್‌ಗಿಡಿ.

  • 04 Mar 2026 06:43 PM (IST)

    SA vs NZ, T20 Semi Final Live: ಆಫ್ರಿಕಾ ತಂಡದಲ್ಲಿ ಮೂರು ಬದಲಾವಣೆ

    ದಕ್ಷಿಣ ಆಫ್ರಿಕಾ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದ್ದು, ಹಿಂದಿನ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದ್ದ ಮಾರ್ಕೊ ಯಾನ್ಸೆನ್, ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ತಂಡಕ್ಕೆ ಮರಳಿದ್ದಾರೆ.

  • 04 Mar 2026 06:42 PM (IST)

    SA vs NZ, T20 Semi Final Live: ಟಾಸ್ ಗೆದ್ದ ಕಿವೀಸ್ ಫೀಲ್ಡಿಂಗ್ ಆಯ್ಕೆ

    ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಸ್ಟಾರ್ ವೇಗಿ ಮ್ಯಾಟ್ ಹೆನ್ರಿ ತಮ್ಮ ದೇಶದಿಂದ ಮರಳಿದ್ದಾರೆ. ಆಡುವ ಹನ್ನೊಂದರ ಬಳಗದಲ್ಲಿ ಒಂದೇ ಒಂದು ಬದಲಾವಣೆ ಮಾಡಲಾಗಿದೆ: ಇಶ್ ಸೋಧಿ ಬದಲಿಗೆ ಜೇಮ್ಸ್ ನೀಶಮ್ ತಂಡಕ್ಕೆ ಮರಳಿದ್ದಾರೆ.

  • 04 Mar 2026 06:19 PM (IST)

    SA vs NZ, T20 Semi Final Live: ಮೊದಲ ಸೆಮಿಫೈನಲ್ ಪಂದ್ಯ

    2026 ರ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

Published On - Mar 04,2026 6:19 PM

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ