IND vs SL: ಸಂಜು ಸ್ಯಾಮ್ಸನ್​ಗೆ ಇಂಜುರಿ; ಪ್ಲೇಯಿಂಗ್ ಇಲೆವೆನ್​ನಲ್ಲಿ ಸಂಜು ಇರದಿರುವುದಕ್ಕೆ ಸ್ಪಷ್ಟನೆ ನೀಡಿದ ಬಿಸಿಸಿಐ

IND vs SL: ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಾಗಿರುವ ಗಾಯ ಮತ್ತು ಅವರನ್ನು ತಂಡದಲ್ಲಿ ಆಯ್ಕೆ ಮಾಡದಿರುವ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ. ಸ್ಯಾಮ್‌ಸನ್‌ಗೆ ಮೊಣಕಾಲಿನ ಗಾಯವಾಗಿದೆ ಈ ಕಾರಣದಿಂದಾಗಿ ಅವರು ಆಯ್ಕೆಗೆ ಲಭ್ಯವಿರಲಿಲ್ಲ.

IND vs SL: ಸಂಜು ಸ್ಯಾಮ್ಸನ್​ಗೆ ಇಂಜುರಿ; ಪ್ಲೇಯಿಂಗ್ ಇಲೆವೆನ್​ನಲ್ಲಿ ಸಂಜು ಇರದಿರುವುದಕ್ಕೆ ಸ್ಪಷ್ಟನೆ ನೀಡಿದ ಬಿಸಿಸಿಐ
ಸಂಜು ಸ್ಯಾಮ್ಸನ್​ಗೆ ಇಂಜುರಿ
Follow us
TV9 Web
| Updated By: ಪೃಥ್ವಿಶಂಕರ

Updated on: Jul 18, 2021 | 5:48 PM

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ ಇಲೆವೆನ್‌ನಿಂದ ಸಂಜು ಸ್ಯಾಮ್ಸನ್ ಹೆಸರು ಕಾಣೆಯಾಗಿದೆ. ಅವರ ಸ್ಥಾನದಲ್ಲಿ, ಇಶಾನ್ ಕಿಶನ್ ಅವರ ಚೊಚ್ಚಲ ಪ್ರವೇಶವಾಗಿದೆ. ಆದರೆ ಸ್ಯಾಮ್ಸನ್‌ ಅವರನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಈ ದೊಡ್ಡ ಪ್ರಶ್ನೆಗೆ ಉತ್ತರ ಈಗ ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ, ಆಡುವ ಹನ್ನೊಂದರಲ್ಲಿ ಸ್ಯಾಮ್ಸನ್ ಆಯ್ಕೆಯಾಗದಿರಲು ಕಾರಣ ಅವರ ಗಾಯ. ಬಿಸಿಸಿಐ ಸ್ವತಃ ಈ ಬಗ್ಗೆ ಹೇಳಿಕೆ ನೀಡಿದೆ. ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಾಗಿರುವ ಗಾಯ ಮತ್ತು ಅವರನ್ನು ತಂಡದಲ್ಲಿ ಆಯ್ಕೆ ಮಾಡದಿರುವ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ. ಸ್ಯಾಮ್‌ಸನ್‌ಗೆ ಮೊಣಕಾಲಿನ ಗಾಯವಾಗಿದೆ ಈ ಕಾರಣದಿಂದಾಗಿ ಅವರು ಆಯ್ಕೆಗೆ ಲಭ್ಯವಿರಲಿಲ್ಲ.

ಅವರ ಗಾಯದ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ನಿರಂತರವಾಗಿ ನಿಗಾ ವಹಿಸುತ್ತಿದೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಯಾಮ್ಸನ್ ಆಡುವ ಮತ್ತು ಚೊಚ್ಚಲ ಪ್ರವೇಶ ಮಾಡುವ ಸಾಧ್ಯತೆಗಳು ಹೆಚ್ಚಾಗಿದ್ದವು. ಸ್ಯಾಮ್ಸನ್ ಇದುವರೆಗೆ ಭಾರತದ ಪರ ಕೇವಲ 7 ಟಿ 20 ಪಂದ್ಯಗಳನ್ನು ಆಡಿದ್ದಾರೆ. ದ್ರಾವಿಡ್ ಮತ್ತು ಧವನ್ ಅವರ ದೃಷ್ಟಿಯಲ್ಲಿ ವಿಕೆಟ್ ಕೀಪಿಂಗ್ಗಾಗಿ ಅವರು ಮೊದಲ ಆಯ್ಕೆಯಾಗಿದ್ದರು. ಆದರೆ ಗಾಯದಿಂದಾಗಿ ಅವರು ಪಾದಾರ್ಪಣೆ ಮಾಡುವ ಅವಕಾಶ ಕಳೆದುಕೊಂಡಿದ್ದಾರೆ. ಹೀಗಾಗಿ ಹುಟ್ಟುಹಬ್ಬದ ದಿನ ಇಶಾನ್ ಕಿಶನ್ ಅವರಿಗೆ ಈ ಅವಕಾಶ ಸಿಕ್ಕಿದೆ.

ಹುಟ್ಟುಹಬ್ಬದಂದು ಪಾದಾರ್ಪಣೆ ಮಾಡಿದ ಇಶಾನ್ ಇಶಾನ್ ಕಿಶನ್ ಅವರ ಏಕದಿನ ಚೊಚ್ಚಲ ಪಂದ್ಯದ ಪ್ರವೇಶ ಅವರ ಜನ್ಮದಿನದಂದು ನಡೆದಿರುವುದು ದೊಡ್ಡ ಕಾಕತಾಳೀಯ. ಆದಾಗ್ಯೂ, ಅವರು ತಮ್ಮ ಜನ್ಮದಿನದಂದು ಮೊದಲ ಏಕದಿನ ಪಂದ್ಯವನ್ನು ಆಡಿದ ಮೊದಲ ಆಟಗಾರನಲ್ಲ. 23 ವರ್ಷದ ಇಶಾನ್ ಕಿಶನ್​ಗೂ ಮೊದಲು, 27 ವರ್ಷದ ಗುರ್ಷರನ್ ಸಿಂಗ್ ಅವರು 1990 ರಲ್ಲಿ ತಮ್ಮ ಜನ್ಮದಿನದ ದಿನದಂದು ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.

ಇಶಾನ್ ಅವರಿಗೆ ಹೀರೋ ಆಗಲು ಅವಕಾಶ ಟೀಮ್ ಇಂಡಿಯಾ ಇಶಾನ್ ಕಿಶನ್ ಅವರಿಗೆ ಚೊಚ್ಚಲ ಅವಕಾಶವನ್ನು ನೀಡುವ ಮೂಲಕ ಉಡುಗೊರೆಯಾಗಿ ನೀಡಿದೆ. ಈಗ ಹುಟ್ಟುಹಬ್ಬದ ಸಂಭ್ರಮದಲ್ಲಿ ಇಶಾನ್ ತಂಡವನ್ನು ಗೆಲ್ಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಲು ನೆರವಾಗಬಹುದು. ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಇಶಾನ್ ಅವರೊಂದಿಗೆ ಪಾದಾರ್ಪಣೆ ಮಾಡಿದ್ದಾರೆ. ಈ ಇಬ್ಬರೂ ಆಟಗಾರರ ಟಿ 20 ಚೊಚ್ಚಲ ಪಂದ್ಯವೂ ಒಂದೇ ಸರಣಿಯಿಂದಲೇ ಆಯಿತು.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್