AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜೋಕಾಲಿ ಆಡ್ತಾ ಆಡ್ತಾ ಬಂಡೆ ಅಂಚಿನಿಂದ ಬಿದ್ದ ಯುವತಿಯರು; ಭಯಾನಕ ದೃಶ್ಯದ ವಿಡಿಯೋ ವೈರಲ್

ವಿಡಿಯೋ ನೋಡಿದ ತಕ್ಷಣ ಒಮ್ಮಲೆ ಮೈ ಜುಂ.. ಅನ್ನುವುದಂತೂ ಸತ್ಯ. ಕೆಲವು ಬಾರಿ ಅದೃಷ್ಟ ಕೆಟ್ಟಿದ್ದರೆ ಏನೆಲ್ಲಾ ಸಮಭವಿಸಬಹುದು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. 6300 ಅಡಿ ಬಂಡೆಯ ಅಂಚಿನಿಂದ ಇಬ್ಬರು ಯುವತಿಯರು ಬಿದ್ದಿದ್ದಾರೆ. ವಿಡಿಯೋ ಭಯಾನಕವಾಗಿದೆ.

Viral Video: ಜೋಕಾಲಿ ಆಡ್ತಾ ಆಡ್ತಾ ಬಂಡೆ ಅಂಚಿನಿಂದ ಬಿದ್ದ ಯುವತಿಯರು; ಭಯಾನಕ ದೃಶ್ಯದ ವಿಡಿಯೋ ವೈರಲ್
ಜೋಕಾಲಿ ಆಡ್ತಾ ಆಡ್ತಾ ಕೆಳಗೆ ಬಿದ್ದ ಯುವತಿಯರು
TV9 Web
| Edited By: |

Updated on:Jul 15, 2021 | 3:39 PM

Share

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತದೆ. ಕೆಲವು ಭಯ ಹುಟ್ಟಿಸುತ್ತದೆ. ಇನ್ನು ಕೆಲವು ಆಶ್ಚರ್ಯವನ್ನುಂಟು ಮಾಡುತ್ತವೆ. ಹಲವು ವಿಡಿಯೋಗಳು ಎಚ್ಚರಿಕೆಯ ಸಂದೇಶವನ್ನೂ ಸಾರುತ್ತದೆ. ಅಂಥಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಣಿವೆಗಳಲ್ಲಿ ಜೋಕಾಲಿ ( ಸ್ವಿಂಗ್​ ರೈಡ್​) ಆಡುವುದು ಅಂದ್ರೆ ಕೆಲವರಿಗೆ ಇಷ್ಟವಾಗಿರಬಹುದು. ಆದರೆ, ಅದೃಷ್ಟ ಕೆಟ್ಟಿದ್ರೆ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಉದಾಹರಣೆಯಾಗಿ ಇಲ್ಲೊಂದು ಭಯಾನಕ ವಿಡಿಯೋ ವೈರಲ್​ ಆಗಿದೆ.

ರಷ್ಯಾದಲ್ಲಿ ಸೆರೆಯಾದ ವಿಡಿಯೋವೊಂದು ಇದೀಗ ಭಾರೀ ಸುದ್ದಿಯಲ್ಲಿದೆ. ಇಬ್ಬರು ಯುವತಿಯರು ಜೋಕಾಲಿ (ಸ್ವಿಂಗ್​ ರೈಡ್​) ಆಟ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಓರ್ವ ವ್ಯಕ್ತಿಯು ಹಿಂದಿನಿಂದ ಜೋರಾಗಿ ತಳ್ಳುತ್ತಿರುತ್ತಾರೆ. ಆರಂಭದಲ್ಲಿ ಸ್ವಿಂಗ್​ ರೈಡ್​ಅನ್ನು ಆನಂದಿಸುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದಂತೆಯೇ ಜೋಕಾಲಿಯ ಸರಪಳಿ ಕಳಚುತ್ತದೆ. ಇಬ್ಬರೂ ಕೆಳಗೆ ಬೀಳುತ್ತಾರೆ.

ವಿಡಿಯೋ ನೋಡಿದ ತಕ್ಷಣ ಒಮ್ಮಲೆ ಮೈ ಜುಂ.. ಅನ್ನುವುದಂತೂ ಸತ್ಯ. ಕೆಲವು ಬಾರಿ ಅದೃಷ್ಟ ಕೆಟ್ಟಿದ್ದರೆ ಏನೆಲ್ಲಾ ಸಂಭವಿಸಬಹುದು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. 6300 ಅಡಿ ಬಂಡೆಯ ಅಂಚಿಲ್ಲಿದ್ದ ಇಬ್ಬರು ಯುವತಿಯರು ಬಿದ್ದಿದ್ದಾರೆ. ಅದೃಷ್ಟವಷಾತ್​ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಳಗೆ ಬಿದ್ದಿರುವ ಪರಿಣಾಮ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಘಟನೆ ನಡೆದ ಬಳಿಕ ಯುವತಿಯರು ಗಾಬರಿಗೊಂಡಿದ್ದರು. ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ಮೈ ಕೈ ತೆರೆಚಿದೆ. ಸ್ವಿಂಗ್​ನ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಿಲ್ಲ. ಹಾಗಾಗಿ ಯುವತಿಯರು ಕೆಳಗೆ ಬಿದ್ದಿದ್ದಾರೆ ಎಂದು ಡಾಗೆಸ್ತಾನ್​ನ ಪ್ರವಾಸೋದ್ಯಮ ಸಚಿವಾಲಯವು ಹೇಳಿದೆ. ಈ ಕುರಿತಂತೆ ಪರಿಶೀಲನೆಗಳು ನಡೆಯುತ್ತಿವೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:

Video Viral: ಮ್ಯಾಜಿಕ್​ ಥ್ರಿಲ್ಲಿಂಗ್​​ ರೈಡ್​ನಲ್ಲಿ ಯಡವಟ್ಟಾಯ್ತು! ಜನರ ಸಹಾಯದಿಂದ ಜೀವ ಉಳಿಯಿತು; ಶಾಂಕಿಂಗ್ ವಿಡಿಯೋ

Viral Photo: ಮರದ ಕೊಂಬೆಗೆ ನೇತಾಡುತ್ತಿದೆ ನಿಗೂಢ ಗೊಂಬೆಯ ಆಕೃತಿ; ಭಯಾನಕ ದೃಶ್ಯದ ಹಿಂದಿನ ಸತ್ಯವೇನು?

Published On - 12:24 pm, Thu, 15 July 21

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ