ಪ್ರಧಾನಿ ಮೋದಿ ಪ್ರತಿಮೆ ಹುಂಡಿ ತಯಾರಿಸಿದ ಬಿಹಾರದ ಶಿಲ್ಪಿ; ಕಲಾಕಾರನ ಕೈಚಳಕಕ್ಕೆ ಮೆಚ್ಚುಗೆ
ಹಣ ಸಂಗ್ರಹ ಮಾಡುವ ಉದ್ದೇಶದಿಂದ ನಾನು ಈ ಪ್ರತಿಮೆಗಳನ್ನು ತಯಾರಿಸಲು ಬಯಸಿದ್ದೇನೆ. ಇದರಲ್ಲಿ ಒಂದು ರೂಪಾಯಿ ನಾಣ್ಯದಿಂದ ಹಿಡಿದು ನೋಟುಗಳನ್ನು ಸಹ ಸಂಗ್ರಹಿಸಿ ಇಡಬಹುದು ಎಂದು ಜೈಪ್ರಕಾಶ್ ಹೇಳಿದ್ದಾರೆ.
ಬಿಹಾರ ಮುಜಾಫರ್ಪುರ ಮೂಲದ ಶಿಲ್ಪ ಕಲಾಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯ ಹುಂಡಿಗಳನ್ನು ತಯಾರಿಸಿದ್ದಾರೆ. ಕಳೆದ ವರ್ಷ ಜನತಾ ಕರ್ಫ್ಯೂ ಜಾರಿಯಲ್ಲಿದ್ದಾಗ ಶಿಲ್ಪ ಕಲಾಕಾರರಾದ ಜೈಪ್ರಕಾಶ್ ಅವರಿಗೆ ಈ ಉಪಾಯ ಹೊಳೆಯಿತು. ಹಣ ಸಂಗ್ರಹಿಸುವ ಉದ್ದೇಶದಿಂದ ಈ ಪ್ರತಿಮೆಗಳನ್ನು ತಯಾರಿಸಿದ್ದಾಗಿ ಜೈ ಪ್ರಕಾಶ್ ಹೇಳಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಜೈಪ್ರಕಾಶ್ ಅವರು, ಹಣ ಸಂಗ್ರಹ ಮಾಡುವ ಉದ್ದೇಶದಿಂದ ನಾನು ಈ ಪ್ರತಿಮೆಗಳನ್ನು ತಯಾರಿಸಲು ಬಯಸಿದ್ದೇನೆ. ಇದರಲ್ಲಿ ಒಂದು ರೂಪಾಯಿ ನಾಣ್ಯದಿಂದ ಹಿಡಿದು ನೋಟುಗಳನ್ನು ಸಹ ಸಂಗ್ರಹಿಸಿ ಇಡಬಹುದು. 1 ಲಕ್ಷದವರೆಗೆ ಹಣ ಸಂಗ್ರಹಣೆ ಮಾಡಬಹುದು. ಸಣ್ಣದಾದ ಮನಿ ಬ್ಯಾಂಕ್ಆಗಿ ರೂಪಿಸಲು ಇದನ್ನು ತಯಾರಿಸಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
Bihar: Muzaffarpur-based sculptor Jai Prakash carved statue of PM Narendra Modi to be used as money storage bank
I got idea of making this when PM announced Janata Curfew last year. He has been making efforts to save country. I decided to make it to save money:He said y’day(1/2) pic.twitter.com/iKTzwUUgLJ
— ANI (@ANI) July 13, 2021
ಕೆಲವು ಪ್ರತಿಮೆಗಳು ಮಾತ್ರ ನನ್ನ ಬಳಿ ಇವೆ. ಇನ್ನು ಮುಂದೆ ಇನ್ನಷ್ಟು ಪ್ರತಿಮೆಗಳನ್ನು ತಯಾರಿಸಿ ಹಣ ಸಂಗ್ರಹಣಾ ಹುಂಡಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಮೋದಿಯವರಂತೆ ಆಗಲು ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಶಿಲ್ಪಗಳನ್ನು ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಕೆಲಸಕ್ಕೆ ಯಾರ ಬಳಿಯಲ್ಲಿಯೂ ಆರ್ಥಿಕ ನೆರವನ್ನು ಪಡೆದಿಲ್ಲ. ಇದವರೆಗೂ ಈ ಶಿಲ್ಪಕಲೆಯಿಂದ ಆರ್ಥಿಕ ಲಾಭವನ್ನು ಪಡೆದಿಲ್ಲ. ಲಾಭ ಪಡೆಯುವ ಉದ್ದೇಶದಿಂದ ನಾನು ಪ್ರತಿಮೆಗಳನ್ನು ತಯಾರಿಸಲು ಮುಂದಾಗಲಿಲ್ಲ. ಈ ಕೆಲಸಕ್ಕೆ ನನಗೆ ಹಣಕಾಸಿನ ಅವಶ್ಯಕತೆ ಇದೆ. ಸಾಲ ಮಾಡಿ ನನ್ನ ಕೆಲಸವನ್ನು ಮುಂದುವರೆಸುತ್ತೆನೆ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Modi in Varanasi Today: ವಾರಾಣಸಿ ತಲುಪಿದ ಪ್ರಧಾನಿ ಮೋದಿಗೆ ಸಿಎಂ ಯೋಗಿ ಆದಿತ್ಯನಾಥ್ರಿಂದ ಸ್ವಾಗತ
Published On - 1:31 pm, Thu, 15 July 21