Modi in Varanasi Today: ವಾರಾಣಸಿ ತಲುಪಿದ ಪ್ರಧಾನಿ ಮೋದಿಗೆ ಸಿಎಂ ಯೋಗಿ ಆದಿತ್ಯನಾಥ್ರಿಂದ ಸ್ವಾಗತ
ಪ್ರಧಾನಿ ನರೇಂದ್ರ ಮೋದಿಯವರು ಇಂದು ಸ್ವಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಅದರೊಂದಿಗೆ ಮುಖ್ಯವಾಗಿ ಜಪಾನಿನ ನೆರವಿನೊಂದಿಗೆ ನಿರ್ಮಾಣ ಮಾಡಲಾಗುತ್ತಿರುವ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ ರುದ್ರಾಕ್ಷ್ನ್ನು ಮಧ್ಯಾಹ್ನ 12.15ಕ್ಕೆ ಉದ್ಘಾಟಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ವಾರಾಣಸಿಯಲ್ಲಿ 1500 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದು, ಈಗಾಗಲೇ ಅವರು ವಾರಾಣಸಿಯನ್ನು ತಲುಪಿದ್ದಾರೆ. ವಾರಾಣಸಿಯ ಏರ್ಪೋರ್ಟ್ನಲ್ಲಿ ಇಳಿದ ನರೇಂದ್ರ ಮೋದಿಯವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ವಾಗತಿಸಿದ್ದಾರೆ. ಅಲ್ಲಿಂದ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಿಶು ಮತ್ತು ತಾಯಂದಿರ ಆರೋಗ್ಯ ಕೇಂದ್ರ ಉದ್ಘಾಟಿಸಲು ತೆರಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಸ್ವಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಅದರೊಂದಿಗೆ ಮುಖ್ಯವಾಗಿ ಜಪಾನಿನ ನೆರವಿನೊಂದಿಗೆ ನಿರ್ಮಾಣ ಮಾಡಲಾಗುತ್ತಿರುವ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ ರುದ್ರಾಕ್ಷ್ನ್ನು ಮಧ್ಯಾಹ್ನ 12.15ಕ್ಕೆ ಉದ್ಘಾಟಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿ ತಲುಪಿದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ಟ್ವೀಟ್ ಮಾಡಿ, ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಇಂದು ನರೇಂದ್ರ ಮೋದಿಯವರು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜನಿಯರಿಂಗ್ ಮತ್ತು ತಂತ್ರಜ್ಞಾನದ ಕೌಶಲ್ಯ ಮತ್ತು ತಾಂತ್ರಿಕ ಸಹಕಾರ ಕೇಂದ್ರ, ಜಲಜೀವನ ಮಿಶನ್ನಡಿ 143 ಗ್ರಾಮೀಣ ಯೋಜನೆಗಳು, ಕಾರ್ಖಿಯಾನ್ವ್ನಲ್ಲಿ ಒಂದು ಮಾವು ಮತ್ತು ತರಕಾರಿ ಪ್ಯಾಕ್ಹೌಸ್ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪಿಸಲಿದ್ದಾರೆ.
#WATCH Prime Minister Narendra Modi arrives at Varanasi, to inaugurate and lay the foundation stone of multiple development projects including maternal & child health unit at Banaras Hindu University and International Cooperation and Convention Centre, ‘Rudraksh’ pic.twitter.com/rTQiW8NaPs
— ANI UP (@ANINewsUP) July 15, 2021
(Prime Minister Narendra Modi arrives at Varanasi )
Published On - 11:25 am, Thu, 15 July 21