AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಮತ್ತೆ ಏರಿಕೆಯತ್ತ ಸಾಗಿದ ಪೆಟ್ರೋಲ್​, ಡೀಸೆಲ್​ ಬೆಲೆ! ಎಲ್ಲೆಲ್ಲಿ ಎಷ್ಟೆಷ್ಟು? ವಿವರ ಇಲ್ಲಿದೆ

Petrol Diesel Rate Today: ಇಂದು ಲೀಟರ್​ ಪೆಟ್ರೋಲ್​ ದರದಲ್ಲಿ 34 ರಿಂದ 35 ಪೈಸೆ ಹೆಚ್ಚಳವಾಗಿದೆ. ಅದೇ ರೀತಿ ಲೀಟರ್​ ಡೀಸೆಲ್​ ರದಲ್ಲಿಯೂ 15 ರಿಂದ 16 ಪೈಸೆ ಹೆಚ್ಚಳ ಮಾಡಲಾಗಿದೆ. ಆ ಮೂಲಕ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 101.54 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 89.87 ರೂಪಾಯಿ ಆಗಿದೆ.

Petrol Price Today: ಮತ್ತೆ ಏರಿಕೆಯತ್ತ ಸಾಗಿದ ಪೆಟ್ರೋಲ್​, ಡೀಸೆಲ್​ ಬೆಲೆ! ಎಲ್ಲೆಲ್ಲಿ ಎಷ್ಟೆಷ್ಟು? ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 15, 2021 | 10:03 AM

Share

Petrol Diesel Price Today | ದೆಹಲಿ: ಪೆಟ್ರೊಲ್​ ಮತ್ತು ಡೀಸೆಲ್​ ಬೆಲೆ ಇಂದು( ಜುಲೈ 15, ಗುರವಾರ) ಮತ್ತೆ ಏರಿಕೆಯಾಗಿದೆ. ಎರಡು ದಿನಗಳ ಕಾಲ ಸ್ಥಿರತೆಯಲ್ಲಿತ್ತು. ಎರಡು ದಿನಗಳ ಹಿಂದೆ ಡೀಸೆಲ್​ ದರವನ್ನು(Diesel Price) ಕೊಂಚ ಇಳಿಕೆಯೂ ಮಾಡಲಾಗಿತ್ತು. ಹಾಗಾಗಿ ಇನ್ನಾದರೂ ಇಂಧನ ದರ(Fuel Price) ಕಡಿಮೆ ಆಗಬಹುದು ಎಂಬ ನಿರೀಕ್ಷೆ ವಾಹನ ಸವಾರರಿಗಿತ್ತು. ಆದರೆ ಇಂದು ಮತ್ತೆ ಪೆಟ್ರೋಲ್​ (Petrol Price) ಮತ್ತು ಡೀಸೆಲ್​ ಬೆಲೆಗಳೆರಡೂ ಸಹ ಹೆಚ್ಚಳವಾಗಿದೆ. ಮೇ 4ರಿಂದ ಏರಿಕೆ ಕಾಣುತ್ತಿರುವ ಪೆಟ್ರೊಲ್​ ಮತ್ತು ಡೀಸೆಲ್​ ದರ ಇಲ್ಲಿಯವರೆಗೆ 40 ಬಾರಿ ಹೆಚ್ಚಳ ಮಾಡಲಾಗಿದೆ. ಎಲ್ಲಾ ಪ್ರಮುಖ ಮೆಟ್ರೋ ನಗರಗಳು ಲೀಟರ್​ ಪೆಟ್ರೋಲ್​ ದರದಲ್ಲಿ ಶತಕ ಬಾರಿಸಿ ಮುನ್ನುಗ್ಗುತ್ತಿದೆ. ಹಾಗೆಯೇ ಡೀಸೆಲ್​ ದರವೂ ಸಹ ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿದೆ.

ಇಂದು ಲೀಟರ್​ ಪೆಟ್ರೋಲ್​ ದರದಲ್ಲಿ 34 ರಿಂದ 35 ಪೈಸೆ ಹೆಚ್ಚಳವಾಗಿದೆ. ಅದೇ ರೀತಿ ಲೀಟರ್​ ಡೀಸೆಲ್​ ರದಲ್ಲಿಯೂ 15 ರಿಂದ 16 ಪೈಸೆ ಹೆಚ್ಚಳ ಮಾಡಲಾಗಿದೆ. ಆ ಮೂಲಕ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 101.54 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 89.87 ರೂಪಾಯಿ ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 107.54 ರೂಪಾಯಿ ಇದ್ದರೆ ಲೀಟರ್​ ಡೀಸೆಲ್​ ದರ 97.45 ರೂಪಾಯಿಗೆ ಏರಿಕೆಯಾಗಿದೆ.

ಚೆನ್ನೈನಲ್ಲಿ ಲೀಟರ್ ಪೆಟ್ರೋಲ್​ ದರ 102.23 ರೂಪಾಯಿ ಆಗಿದೆ. ಲೀಟರ್​ ಡೀಸೆಲ್​ ದರ 94.39 ರೂಪಾಯಿ ಆಗಿದೆ. ಇನ್ನು ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ಗೆ 101.74 ರೂಪಾಯಿ ನಿಗದಿಯಾಗಿದ್ದರೆ, ಲೀಟರ್​ ಡೀಸೆಲ್​ ದರದಲ್ಲಿ 93.02 ರೂಪಾಯಿ ದಾಖಲಾಗಿದೆ.

ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 104.94 ರೂಪಾಯಿಗೆ ಹೆಚ್ಚಳವಾಗಿದೆ. ಅದೇ ರೀತಿ ಲೀಟರ್ ಡೀಸೆಲ್​ ದರ 95.26 ರೂಪಾಯಿಗೆ ಏರಿಕೆಯಾಗಿದೆ. ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್​ ದರ 105.52 ರೂಪಾಯಿ ಆಗಿದೆ ಹಾಗೆಯೇ ಲೀಟರ್​ ಡೀಸೆಲ್​ ದರ 97.96 ರೂಪಾಯಿಗೆ ಏರಿಕೆಯಾಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ: ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Published On - 9:51 am, Thu, 15 July 21

ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು