ನಿಶ್ಚಿತಾರ್ಥದ ದಿನ ಉಂಗುರ ತೊಡಿಸುವಾಗ ಶುರುವಾಯ್ತು ವರನಲ್ಲಿ ನಡುಕ..! ಮುಂದೆಲ್ಲ ಹೆಂಗೆ? ಎಂಬುದು ನೆಟ್ಟಿಗರ ಪ್ರಶ್ನೆ

TV9 Web
| Updated By: Lakshmi Hegde

Updated on:Jul 15, 2021 | 9:25 AM

ಹೀಗೆ ಕೈನಡುಗಿಸಿದ ವರನನ್ನು ನೆಟ್ಟಿಗರು ಸಿಕ್ಕಾಪಟೆ ಟ್ರೋಲ್​ ಮಾಡಿದ್ದಾರೆ. ಯಾಕಿಷ್ಟು ನರ್ವಸ್​ ಆಗಿದ್ದು ಎಂದೂ ಕಾಲೆಳೆಯುತ್ತಿದ್ದಾರೆ. ಹಾಗೇ, ತನಗೆ ಉಂಗುರ ಹಾಕುವಾಗ ಹುಡುಗನ ಕೈ ನಡುಗಿದ್ದನ್ನು ನೋಡಿದ ಮದುಮಗಳೂ ಸಹ ನಾಚುತ್ತ, ನಕ್ಕಿದ್ದಾಳೆ.


ಪ್ರತಿಯೊಬ್ಬರ ಜೀವನದಲ್ಲೂ ನಿಶ್ಚಿತಾರ್ಥ, ಮದುವೆ ಎಂಬುದೆಲ್ಲ ತುಂಬ ವಿಶೇಷ ದಿನಗಳು. ಅಂತಹ ದಿನಗಳಲ್ಲಿ ಎಕ್ಸೈಟ್​ಮೆಂಟ್​, ಉತ್ಸಾಹ, ಏನೋ ಹುರುಪು ತೀರ ಸಹಜ. ನಾವು ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ ಎಂಬ ಸಂತೋಷ ಹುಡುಗ-ಹುಡುಗಿ ಇಬ್ಬರಲ್ಲೂ ಇದ್ದೇ ಇರುತ್ತದೆ. ಅಂಥ ವಿಶೇಷದಿನಗಳಲ್ಲಿ ನಡೆಯುವ ಕೆಲವು ಫನ್ನಿ ಸನ್ನಿವೇಶಗಳು..ವಿಚಿತ್ರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ.

ಹಾಗೇ ಈಗೊಂದು ನಿಶ್ಚಿತಾರ್ಥದ ವಿಡಿಯೋ ವೈರಲ್​ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು..ಅಯ್ಯೋ..ಈಗಲೇ ಹಿಂಗೆ, ಇನ್ನೆ ಮುಂದೆಲ್ಲ ಹೇಗೋ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂದರೆ, ಅಲ್ಲೊಂದು ನಿಶ್ಚಿತಾರ್ಥ ನಡೆಯುತ್ತಿದೆ. ಹುಡುಗ-ಹುಡುಗಿ ಇಬ್ಬರೂ ಭರ್ಜರಿ ರೆಡಿ ಆಗಿದ್ದಾರೆ. ಅವರ ಮನೆಯವರೂ ಅಲ್ಲಿದ್ದಾರೆ. ಇನ್ನೇನು ಉಂಗುರ ತೊಡಿಸುವ ಕಾರ್ಯಕ್ರಮ ಶುರುವಾಯಿತು. ಆದರೆ ಹುಡುಗನ ಕೈ ನಡುಗಲು ಪ್ರಾರಂಭಿಸಿದ್ದೇ ವಿಡಿಯೋ ವೈರಲ್​ ಆಗಲು ಕಾರಣ. ಉಂಗುರ ತೊಡಿಸಲು ಪ್ರಯತ್ನಿಸಿದ ಮದುಮಗನ ಕೈ ಗಡಗಡನೇ ನಡುಗಿದ್ದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಅದನ್ನು ನೋಡಿದ ನೆಟ್ಟಿಗರು, ಇಷ್ಟೊಂದು ಎಕ್ಸೈಟ್​ಮೆಂಟಾ ಎಂದು ಪ್ರಶ್ನಿಸಿದ್ದಾರೆ.  ಉಂಗುರು ತೊಡಿಸಲು ಅದ್ಯಾಕೆ ಅಷ್ಟು ನರ್ವಸ್ ಆಗಿದ್ದೇಕೆ ಎಂದೂ ಕಾಲೆಳೆದಿದ್ದಾರೆ. ತನಗೆ ಉಂಗುರ ಹಾಕುವಾಗ ಹುಡುಗನ ಕೈ ನಡುಗಿದ್ದನ್ನು ನೋಡಿದ ಮದುಮಗಳೂ ಸಹ ನಾಚುತ್ತ, ನಕ್ಕಿದ್ದಾಳೆ.

ಇದನ್ನೂ ಓದಿ: ಜಿಟಿ ಜಿಟಿ ಮಳೆಯಲ್ಲೂ ಎಸಿಬಿ ಅಧಿಕಾರಿಗಳ ಭರ್ಜರಿ ಬೇಟೆ, ಬೆಂಗಳೂರಿನಲ್ಲಿ ನಾಲ್ಕು ಕಡೆ ದಾಳಿ

Published on: Jul 15, 2021 09:22 AM