ದೇಸಿ ಬೀಡಿ ಪ್ರಚಾರಕ್ಕಿಳಿದ್ರಾ ಫುಟ್​ಬಾಲ್​ ಆಟಗಾರ ಲಿಯೋನೆಲ್ ಮೆಸ್ಸಿ?

ಇದೀಗ ಭಾರೀ ಸುದ್ದಿಯಲ್ಲಿರುವ ವಿಷಯ ಏನಂದ್ರೆ.. ಮೆಸ್ಸಿ ಬೀಡಿ ಪ್ಯಾಕೆಟ್​. ತಂಬಾಕು ಉತ್ಪನ್ನದ ಪ್ಯಾಕೆಟ್​ನಲ್ಲಿರುವ ಮೆಸ್ಸಿ ಅವರ ಫೋಟೋ ಫುಲ್​ ವೈರಲ್​ ಆಗುತ್ತಿದೆ.

TV9kannada Web Team

| Edited By: Apurva Kumar Balegere

Jul 15, 2021 | 11:14 AM

ದಕ್ಷಿಣ ಅಮೆರಿಕಾ ತಂಡ ಬ್ರೆಜಿಲ್​ಅನ್ನು ಸೋಲಿಸಿ ಕೋಪಾ ಅಮೇರಿಕಾ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ, ಅರ್ಜೆಂಟೀನಾದ ಫುಟ್​ಬಾಲ್​ ಆಟಗಾರ ಲಿಯೋನೆಲ್​ ಮೆಸ್ಸಿ. ಇದೀಗ ಭಾರೀ ಸುದ್ದಿಯಲ್ಲಿರುವ ವಿಷಯ ಏನಂದ್ರೆ.. ಮೆಸ್ಸಿ ಬಿಡಿ ಪ್ಯಾಕೆಟ್​. ತಂಬಾಕು ಉತ್ಪನ್ನದ ಪ್ಯಾಕೆಟ್​ನಲ್ಲಿರುವ ಮೆಸ್ಸಿ ಅವರ ಫೋಟೋ ಫುಲ್​ ವೈರಲ್​ ಆಗುತ್ತಿದೆ. ಹಳದಿ ಬಣ್ಣದ ಬಾಕ್ಸ್​ ಒಳಗೆ ಮೆಸ್ಸಿ ಅವರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬೀಡಿ, ತಂಬಾಕು ಪದರಗಳಿಂದ ತುಂಬಿದ ತೆಳುವಾದ ಸಿಗರೇಟ್​ ಮತ್ತು ಸಾಮಾನ್ಯವಾಗಿ ಟೆಂಡು ಎಲೆಗಳಿಂದ ಸುತ್ತಿಕೊಂಡಿರುತ್ತದೆ. ಇದೀಗ ತಂಬಾಕು ಪ್ಯಾಕೆಟ್​ ಮೇಲಿರುವ 34 ವರ್ಷದ ಆಟಗಾರ ಮೆಸ್ಸಿ ಫೋಟೋ ವೈರಲ್​ ಆಗಿದೆ. ಭಾರತದಲ್ಲಿ ಮೆಸ್ಸಿಯ ಮೊದಲ ಅನುಮೋದನೆ ಎಂಬ ಶೀರ್ಷಿಕೆಯೊಂದಿಗೆ ಫೋಟೋ ಸುದ್ದಿಯಲ್ಲಿದೆ. ಫೋಟೋ ಇದೀಗ ಸಖತ್​ ವೈರಲ್​ ಆಗಿದ್ದು, ನೆಟ್ಟಿಗರು ಟ್ರೋಲ್​ ಮಾಡುತ್ತಾ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ಭಾರತದಲ್ಲಿ ಬೀಡಿ ಪ್ರಚಾರಕ್ಕಿಳಿದ್ರಾ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ! ಫೋಟೋ ನೋಡಿ ನಿಮಗೂ ನಿಜವೆನ್ನಿಸಬಹುದು

Follow us on

Click on your DTH Provider to Add TV9 Kannada