ತಾವೇ ಮುಂದೆ ನಿಂತು ತಾಯಿ ಸಮಾಧಿ ಕಟ್ಟಿಸಿದ ದುನಿಯಾ ವಿಜಯ್
ನಾರಾಯಣಮ್ಮ ಅವರ ಅಂತಿಮ ಸಂಸ್ಕಾರದಲ್ಲಿ ದುನಿಯಾ ವಿಜಯ್ ಹಾಗೂ ಕುಟುಂಬದ ಇತರೆ ಸದಸ್ಯರು ಭಾಗಿ ಆಗಿದ್ದರು. ಕೆಲವೇ ದಿನಗಳ ಹಿಂದೆ ನಾರಾಯಣಮ್ಮ ಅವರು ಕೊವಿಡ್ನಿಂದ ಚೇತರಿಸಿಕೊಂಡಿದ್ದರು.
ಖ್ಯಾತ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಅವರ ಅಂತ್ಯ ಸಂಸ್ಕಾರವನ್ನು ಶುಕ್ರವಾರ (ಜು.9) ನೆರವೇರಿಸಲಾಯಿಗಿತ್ತು. ಆನೇಕಲ್ನ ಕುಂಬಾರನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈಗ ದುನಿಯಾ ವಿಜಯ್ ಅವರು ಸಮಾಧಿ ಕಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾರಾಯಣಮ್ಮ ಅವರ ಅಂತಿಮ ಸಂಸ್ಕಾರದಲ್ಲಿ ದುನಿಯಾ ವಿಜಯ್ ಹಾಗೂ ಕುಟುಂಬದ ಇತರೆ ಸದಸ್ಯರು ಭಾಗಿ ಆಗಿದ್ದರು. ಕೆಲವೇ ದಿನಗಳ ಹಿಂದೆ ನಾರಾಯಣಮ್ಮ ಅವರು ಕೊವಿಡ್ನಿಂದ ಚೇತರಿಸಿಕೊಂಡಿದ್ದರು. ಬಳಿಕ ಅವರಿಗೆ ಮತ್ತೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಬ್ರೇನ್ ಸ್ಟ್ರೋಕ್ ಆದ ಪರಿಣಾಮ ಪರಿಸ್ಥಿತಿ ಚಿಂತಾಜನಕ ಆಗಿತ್ತು. ಆದರೂ ಅವರಿಗೆ ಆಸ್ಪತ್ರೆಗೆ ಹೋಗಲು ಇಷ್ಟ ಇರಲಿಲ್ಲ. ಹಾಗಾಗಿ ಮನೆಯಲ್ಲಿಯೇ ವಿಜಯ್ ಅವರು ತಾಯಿಯ ಆರೈಕೆ ಮಾಡುತ್ತಿದ್ದರು. ಆದರೂ ಚಿಕಿತ್ಸೆ ಫಲಕಾರಿ ಆಗದೇ ಅವರು ಗುರುವಾರ (ಜು.8) ಕೊನೆಯುಸಿರು ಎಳೆದರು.
ಇದನ್ನೂ ಓದಿ: ಆನೇಕಲ್ನ ಕುಂಬಾರನಹಳ್ಳಿಯಲ್ಲಿ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಅಂತ್ಯಕ್ರಿಯೆ
Latest Videos