AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಚಿತ್ರವನ್ನು ಹಾಡಿಹೊಗಳಿದ ಕಿಯಾರಾ ಅಡ್ವಾಣಿ; ಹೆಚ್ಚಿತು ನಿರೀಕ್ಷೆ

ಕಿಯಾರಾ ಅಡ್ವಾಣಿ 'ಟಾಕ್ಸಿಕ್' ಚಿತ್ರದ ಕುರಿತು ಮಾತನಾಡಿ, ಅದು ಸಂಬಂಧಗಳ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸುತ್ತದೆ ಎಂದಿದ್ದಾರೆ. ಯಶ್ ನಟನೆಯ ಈ ಸಿನಿಮಾದ ದ್ವಿಭಾಷಾ (ಕನ್ನಡ-ಇಂಗ್ಲಿಷ್) ಚಿತ್ರೀಕರಣ ತಮಗೆ ಸವಾಲಾಗಿತ್ತೆಂದು ಅವರು ವಿವರಿಸಿದರು. ತಮ್ಮ ವೃತ್ತಿಪರತೆಯಿಂದ ಕನ್ನಡ ಸಂಭಾಷಣೆಗಳನ್ನು ಕಂಠಪಾಠ ಮಾಡಿದ ಅನುಭವ ಹಂಚಿಕೊಂಡ ಕಿಯಾರಾ, 'ಟಾಕ್ಸಿಕ್' ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

‘ಟಾಕ್ಸಿಕ್’ ಚಿತ್ರವನ್ನು ಹಾಡಿಹೊಗಳಿದ ಕಿಯಾರಾ ಅಡ್ವಾಣಿ; ಹೆಚ್ಚಿತು ನಿರೀಕ್ಷೆ
ಕಿಯಾರಾ
ರಾಜೇಶ್ ದುಗ್ಗುಮನೆ
|

Updated on: May 29, 2026 | 7:40 AM

Share

ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ (Toxic) ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಆದರೆ, ಇತ್ತೀಚೆಗೆ ಈ ಸಿನಿಮಾದ ರಿಲೀಸ್ ದಿನಾಂಕ ಪದೇ ಪದೇ ಮುಂದಕ್ಕೆ ಹೋಗುತ್ತಿರುವುದಕ್ಕೆ ನೆಗೆಟಿವ್ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಎಲ್ಲಾ ಗೊಂದಲಗಳ ನಡುವೆ, ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರು ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಅನುಭವವನ್ನು ಹಂಚಿಕೊಳ್ಳುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಕಿಯಾರಾ, ‘ನೀವು ಗಂಡು ಮತ್ತು ಹೆಣ್ಣಿನ ನಡುವಿನ ಸಂಬಂಧವನ್ನು ನೋಡುವ ರೀತಿಯನ್ನು ಟಾಕ್ಸಿಕ್ ಸಿನಿಮಾ ಸಂಪೂರ್ಣವಾಗಿ ಬದಲಾಯಿಸುತ್ತದೆ. ಸ್ವತಃ ನನಗೂ ಕೂಡ, ನಿರ್ದೇಶಕಿ ಗೀತು ಅವರು ಈ ಕಥೆಯನ್ನು ವಿವರಿಸಿದಾಗ ಓಹ್, ಈ ರೀತಿಯೂ ಇರಲು ಸಾಧ್ಯವೇ? ಎಂದು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು’ ಎಂದಿದ್ದಾರೆ.

‘ಯಾವಾಗ ಅವರು ನನಗೆ ನಾಡಿಯಾ ಪಾತ್ರದ ಬಗ್ಗೆ ವಿವರಿಸಿದರೋ, ಆಗ ನನಗೆ ಅನಿಸಿದ್ದು— ವಾಹ್, ನಾನು ಕೂಡ ನನ್ನ ಸ್ವಂತ ಆಲೋಚನೆಗಳಲ್ಲಿ ಹಾಗೂ ಬದುಕುವ ರೀತಿಯಲ್ಲಿ ಇಷ್ಟೊಂದು ನಿರ್ಲಿಪ್ತವಾಗಿ ಮತ್ತು ಸ್ವತಂತ್ರವಾಗಿರಲು ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದುಕೊಂಡೆ’ ಎಂದು ಕಿಯಾರಾ ವಿವರಿಸಿದರು.

‘ಟಾಕ್ಸಿಕ್’ ತಮಗೆ ಅತ್ಯಂತ ಸವಾಲಿನ ಸಿನಿಮಾ ಎಂದಿದ್ದಾರೆ. ‘ಮೊದಲ ಬಾರಿಗೆ ನಾವು ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟ್ ಮಾಡಿದ್ದೇವೆ. ಒಂದು ಸೀನ್ ಅನ್ನು ಮೊದಲು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಿ, ಅದು ಓಕೆ ಆದ ನಂತರ ಅದೇ ಸೀನ್ ಅನ್ನು ಮತ್ತೆ ಕನ್ನಡದಲ್ಲಿ ಶೂಟ್ ಮಾಡಲಾಗಿದೆ’ ಎಂದು ಚಿತ್ರದ ಮೇಕಿಂಗ್ ಶೈಲಿಯನ್ನು ಬಿಚ್ಚಿಟ್ಟಿದ್ದಾರೆ.

ಕನ್ನಡ ತಮಗೆ ಹೊಸ ಭಾಷೆಯಾಗಿರುವುದರಿಂದ ಡೈಲಾಗ್ಸ್ ಹೇಳುವುದು ಸುಲಭವಲ್ಲ ಎಂದಿರುವ ಕಿಯಾರಾ, ‘ನಾನು ಶೂಟಿಂಗ್‌ಗೆ ಮುನ್ನಾದಿನ ರಾತ್ರಿಯೇ ಕನ್ನಡದ ಡೈಲಾಗ್‌ಗಳನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡುತ್ತಿದ್ದೆ. ಶಾಲೆಯಲ್ಲಿದ್ದಾಗ ಮಾಡುತ್ತಿದ್ದ ಈ ಬಾಯಿಪಾಠದ ಅಭ್ಯಾಸ ಈಗ ನನಗೆ ಬೇರೆ ಭಾಷೆಯ ಸಿನಿಮಾಗಳನ್ನು ಮಾಡುವಾಗ ಸಹಾಯಕ್ಕೆ ಬರುತ್ತಿದೆ’ ಎಂದು ನಕ್ಕಿದ್ದಾರೆ.

ಇದನ್ನೂ ಓದಿ: ಮಗ ಯಶ್ ಪರ ನಿಂತ ಯಶ್ ತಾಯಿ ಪುಷ್ಪಾ: ಟಾಕ್ಸಿಕ್ ಬಗ್ಗೆ ಹೇಳಿದ್ದಿಷ್ಟು

‘ನಾನು ಶಾಲೆಯಲ್ಲಿ ಯಾವಾಗಲೂ ಫ್ರಂಟ್ ಬೆಂಚ್ ಸ್ಟೂಡೆಂಟ್ ಆಗಿದ್ದವಳು. ಹಾಗಾಗಿ ಸೆಟ್‌ಗೆ ಹೋಗುವ ಮುನ್ನ ನನ್ನ ಡೈಲಾಗ್ಸ್ ಮಾತ್ರವಲ್ಲದೆ, ಎದುರಿಗಿರುವ ಸಹ ನಟರ ಡೈಲಾಗ್‌ಗಳನ್ನೂ ಕೇಳಿಕೊಂಡು ಪಕ್ಕಾ ಪ್ರಿಪರೇಷನ್‌ನೊಂದಿಗೆ ಹೋಗುತ್ತೇನೆ. ಡೈಲಾಗ್‌ಗಳು ನಮ್ಮ ತಲೆಯಲ್ಲಿ ಸಂಪೂರ್ಣವಾಗಿ ಅಚ್ಚಾಗಿದ್ದರೆ ಮಾತ್ರ ಸೆಟ್‌ನಲ್ಲಿ ಯಾವುದೇ ಗೊಂದಲವಿಲ್ಲದೆ ಅತ್ಯುತ್ತಮವಾಗಿ ಎಮೋಷನ್ಸ್ ಮತ್ತು ನಟನೆಯನ್ನು ಹೊರಹಾಕಲು ಸಾಧ್ಯ’ ಎಂದು ಕಿಯಾರಾ ತಮ್ಮ ವೃತ್ತಿಪರತೆಯನ್ನು ಹಂಚಿಕೊಂಡಿದ್ದಾರೆ. ಕಿಯಾರಾ ಅವರ ಈ ಮಾತುಗಳು ‘ಟಾಕ್ಸಿಕ್’ ಸಿನಿಮಾ ಪ್ರೇಕ್ಷಕರಿಗೆ ಕಂಟೆಂಟ್ ವಿಷಯದಲ್ಲಿ ಹೊಸ ಥ್ರಿಲ್ ನೀಡಲಿದೆ ಎಂಬುದನ್ನು ಸಾಬೀತುಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್