AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಟಿ ಜಿಟಿ ಮಳೆಯಲ್ಲೂ ಎಸಿಬಿ ಅಧಿಕಾರಿಗಳ ಭರ್ಜರಿ ಬೇಟೆ, ಬೆಂಗಳೂರಿನಲ್ಲಿ ನಾಲ್ಕು ಕಡೆ ದಾಳಿ

ರಾಜಾಜಿನಗರ ಸ್ಟರ್ಲಿಂಗ್ ಅಪಾರ್ಟ್ಮೆಂಟ್ ನಿವಾಸ, ಜಯನಗರ ಗೋಕುಲ ಅಪಾರ್ಟ್ಮೆಂಟ್ನಲ್ಲಿರುವ ನಿವಾಸ ಸೇರಿದಂತೆ 4 ಕಡೆ ಎಸಿಬಿ ದಾಳಿ ನಡೆದಿದೆ. ಸದ್ಯ 4 ತಂಡಗಳಿಂದ ದಾಳಿ ಮುಂದುವರೆದಿದೆ.

ಜಿಟಿ ಜಿಟಿ ಮಳೆಯಲ್ಲೂ ಎಸಿಬಿ ಅಧಿಕಾರಿಗಳ ಭರ್ಜರಿ ಬೇಟೆ, ಬೆಂಗಳೂರಿನಲ್ಲಿ ನಾಲ್ಕು ಕಡೆ ದಾಳಿ
ಎ.ಕೃಷ್ಣಮೂರ್ತಿ
TV9 Web
| Edited By: |

Updated on:Jul 15, 2021 | 11:20 AM

Share

ಬೆಂಗಳೂರು: ಜಿಟಿ ಜಿಟಿ ಮಳೆಯ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಟ್ಟು 4 ಕಡೆ ಎಸಿಬಿ ದಾಳಿ ನಡೆದಿದೆ. ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಎ.ಕೃಷ್ಣಮೂರ್ತಿ ಸಂಬಂಧಿಸಿದ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಾಗೂ KRIDCL ಮುಖ್ಯ ಇಂಜಿನಿಯರ್ ಆರ್.ಪಿ.ಕುಲಕರ್ಣಿ ಮನೆ ಮೇಲೂ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ರಾಜಾಜಿನಗರ ಸ್ಟರ್ಲಿಂಗ್ ಅಪಾರ್ಟ್ಮೆಂಟ್ ನಿವಾಸ, ಜಯನಗರ ಗೋಕುಲ ಅಪಾರ್ಟ್ಮೆಂಟ್ನಲ್ಲಿರುವ ನಿವಾಸ ಸೇರಿದಂತೆ 4 ಕಡೆ ದಾಳಿ ನಡೆದಿದೆ. ಸದ್ಯ 4 ತಂಡಗಳಿಂದ ದಾಳಿ ಮುಂದುವರೆದಿದೆ. ಬೇರೆ ಕಡೆ ಆಸ್ತಿಗಳಿಸಿರೋದು ಕಂಡು ಬಂದರೆ ಅಲ್ಲೂ ದಾಳಿ ನಡೆಸಲು ಸಿದ್ಧತೆ ನಡೆದಿದೆ.

ಕುಲಕರ್ಣಿ ಐದಾರು ಐಷಾರಾಮಿ ಅಪಾರ್ಟ್ಮೆಂಟ್​ನಲ್ಲಿ ಫ್ಲಾಟ್ ಹೊಂದಿದ್ದರು. ಇವರು ಕೆಲ ಅಪಾರ್ಟ್ಮೆಂಟ್ ಖರೀದಿಸಿ ಬಾಡಿಗೆಗೆ ನೀಡಿದ್ರು. ಮಗನ ಹೆಸರಲ್ಲಿ ಕಂಪನಿ ಕೂಡ ತೆರೆದಿದ್ದರು. ಎರಡು ಕೋಟಿ ರೂಪಾಯಿ ಇನ್ಶುರೆನ್ಸ್ ಕೂಡ ಹೊಂದಿದ್ದಾರೆ. ಸಂಬಂಧಿಕರ ಹೆಸರಲ್ಲೂ ಆಸ್ತಿ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ದಾಳಿ ನಡೆದಿದೆ.

ಜಯನಗರ ಹಾಗೂ ಬನಶಂಕರಿ ಅಪಾರ್ಟ್ಮೆಂಟ್​ನಲ್ಲಿ ಕುಲಕರ್ಣಿ ಹಾಗೂ ಆತನ ಮಗ ವಾಸವಾಗಿದ್ದು ಕುಲಕರ್ಣಿ ಮೂರು ಅಪಾರ್ಟ್ಮೆಂಟ್​ಗಳನ್ನ ಬಾಡಿಗೆ ನೀಡಿದ್ದರು. ರಾಜಾಜಿನಗರದ ಅಪಾರ್ಟ್ಮೆಂಟ್ ನಲ್ಲಿ 1, ಹಾಗೂ ಮೈಸೂರಿನ ಯಾದವನಗರದ 1 ಮನೆ ಬಾಡಿಗೆಗೆ ನೀಡಿದ್ದರು. ಸದ್ಯ 15 ಕೋಟಿಯ ದಾಖಲೆಪತ್ರ ವಶಪಡಿಸಿಕೊಳ್ಳಲಾಗಿದೆ. ಮಾಯಾ ದೇವಿ ಆಂಡ್ ಕೋ ಹಾಗೂ ಕೆಮ್ ಟೆಕ್ ಹೆಸರಿನ ಕಂಪನಿ ಮಗನ ಹೆಸರಲ್ಲಿದೆ. ಕೋಟ್ಯಾಂತರ ರೂ ಇನ್ಶುರೆನ್ಸ್ ಮಾಡಿಸಿರುವ ದಾಖಲೆಗಳು ಎಸಿಬಿಗೆ ಲಭ್ಯವಾಗಿದೆ.

ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ಜೋರಾಗಿದೆ.9 ಅಧಿಕಾರಿಗಳಿಗೆ ಸಂಬಂಧಿಸಿದ 40 ಕಡೆ ಏಕಕಾಲಕ್ಕೆ ದಾಳಿ ನಡೆದಿದೆ. ಜಿಲ್ಲಾ ನಗರಾಭಿವೃದ್ಧಿ ಸೆಲ್‌ನ ಇಇ ಜಿ.ಶ್ರೀಧರ್ ಕಚೇರಿ, ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ದಕ್ಷಿಣ ಕನ್ನಡ ಡಿಸಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಸೆಲ್‌ ಇಇ ಕೃಷ್ಣ ಎಸ್. ಹೆಬ್ಸೂರ್, ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿ., ಉಡುಪಿ KRIDCL ಮುಖ್ಯ ಇಂಜಿನಿಯರ್ ಆರ್.ಪಿ.ಕುಲಕರ್ಣಿ, ಮಾಲೂರು ನಗರ ಯೋಜನೆ ಸಹಾಯಕ ನಿರ್ದೇಶಕ ಹೆಚ್.ಆರ್.ಕೃಷ್ಣಪ್ಪಗೂ ಎಸಿಬಿ ಶಾಕ್ ಕೊಟ್ಟದೆ. ಬೀದರ್‌ ಪಂಚಾಯತ್ ರಾಜ್ ಇಲಾಖೆ ಜೆಇ ಸುರೇಶ್ ಮೊಹ್ರೆ, ಮಂಡ್ಯ ಸಾಮಾಜಿಕ ಅರಣ್ಯ ಇಲಾಖೆ ಡಿಸಿಎಫ್ ಟಿ.ವೆಂಕಟೇಶ್, ವಿಜಯಪುರ ಹೆಸ್ಕಾಂ ಎಇಇ ಸಿದ್ದರಾಮ ಮಲ್ಲಿಕಾರ್ಜುನ, ಇನ್ಸ್‌ಪೆಕ್ಟರ್ ಎ.ಕೃಷ್ಣಮೂರ್ತಿ, ಬಳ್ಳಾರಿಯ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ A.N.ವಿಜಯ್‌ಕುಮಾರ್ ಸೇರಿ 9 ಅಧಿಕಾರಿಗಳಿಗೆ ಸೇರಿದ 40 ಕಡೆ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಫೀಲ್ಡ್​ಗಿಳಿದ ಎಸಿಬಿ ಅಧಿಕಾರಿಗಳು, ಹಲವು ಕಡೆ ಮನೆ-ಕಚೇರಿಗಳ ಮೇಲೆ ದಾಳಿ

Published On - 9:05 am, Thu, 15 July 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್