ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಫೀಲ್ಡ್​ಗಿಳಿದ ಎಸಿಬಿ ಅಧಿಕಾರಿಗಳು, ಹಲವು ಕಡೆ ಮನೆ-ಕಚೇರಿಗಳ ಮೇಲೆ ದಾಳಿ

ಹೆಚ್.ಆರ್.ಕೃಷ್ಣಪ್ಪನವರ ಸ್ವ ಗ್ರಾಮವಾದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರಹಳ್ಳಿಯ ಮನೆ, ಕೋಲಾರ ಜಿಲ್ಲೆಯ ಮಾಲೂರಿನ ಮನೆ, ಬೆಂಗಳೂರು, ಶಿವಮೊಗ್ಗದ ಮನೆ ಮತ್ತು ಕಚೇರಿ ಸೇರಿ ಸುಮಾರು ಐದು ಕಡೆ ಏಕಕಾಲಕ್ಕೆ ಎಸಿಬಿ ದಾಳಿ ನಡೆಸಿದೆ

ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಫೀಲ್ಡ್​ಗಿಳಿದ ಎಸಿಬಿ ಅಧಿಕಾರಿಗಳು, ಹಲವು ಕಡೆ ಮನೆ-ಕಚೇರಿಗಳ ಮೇಲೆ ದಾಳಿ
ಹೆಚ್.ಆರ್.ಕೃಷ್ಣಪ್ಪ ಮನೆ, ಕಚೇರಿಯ ಮೇಲೆ ಎಸಿಬಿ ದಾಳಿ
Follow us
TV9 Web
| Updated By: ಆಯೇಷಾ ಬಾನು

Updated on:Jul 15, 2021 | 8:50 AM

ದಾವಣಗೆರೆ: ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ಜೋರಾಗಿದೆ.9 ಅಧಿಕಾರಿಗಳಿಗೆ ಸಂಬಂಧಿಸಿದ 40 ಕಡೆ ಏಕಕಾಲಕ್ಕೆ ದಾಳಿ ನಡೆದಿದೆ. ಜಿಲ್ಲಾ ನಗರಾಭಿವೃದ್ಧಿ ಸೆಲ್‌ನ ಇಇ ಜಿ.ಶ್ರೀಧರ್ ಕಚೇರಿ, ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ದಕ್ಷಿಣ ಕನ್ನಡ ಡಿಸಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಸೆಲ್‌ ಇಇ ಕೃಷ್ಣ ಎಸ್. ಹೆಬ್ಸೂರ್, ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿ., ಉಡುಪಿ KRIDCL ಮುಖ್ಯ ಇಂಜಿನಿಯರ್ ಆರ್.ಪಿ.ಕುಲಕರ್ಣಿ, ಮಾಲೂರು ನಗರ ಯೋಜನೆ ಸಹಾಯಕ ನಿರ್ದೇಶಕ ಹೆಚ್.ಆರ್.ಕೃಷ್ಣಪ್ಪಗೂ ಎಸಿಬಿ ಶಾಕ್ ಕೊಟ್ಟದೆ. ಬೀದರ್‌ ಪಂಚಾಯತ್ ರಾಜ್ ಇಲಾಖೆ ಜೆಇ ಸುರೇಶ್ ಮೊಹ್ರೆ, ಮಂಡ್ಯ ಸಾಮಾಜಿಕ ಅರಣ್ಯ ಇಲಾಖೆ ಡಿಸಿಎಫ್ ಟಿ.ವೆಂಕಟೇಶ್, ವಿಜಯಪುರ ಹೆಸ್ಕಾಂ ಎಇಇ ಸಿದ್ದರಾಮ ಮಲ್ಲಿಕಾರ್ಜುನ, ಇನ್ಸ್‌ಪೆಕ್ಟರ್ ಎ.ಕೃಷ್ಣಮೂರ್ತಿ, ಬಳ್ಳಾರಿಯ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ A.N.ವಿಜಯ್‌ಕುಮಾರ್ ಸೇರಿ 9 ಅಧಿಕಾರಿಗಳಿಗೆ ಸೇರಿದ 40 ಕಡೆ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ನಗರಸಭೆ ಯೋಜನಾ ನಿರ್ದೇಶಕ‌ ಹೆಚ್.ಆರ್.ಕೃಷ್ಣಪ್ಪ ಮನೆ, ಕಚೇರಿಯ ಮೇಲೆ ಎಸಿಬಿ ದಾಳಿ ನಡೆಸಿದ್ದು ದಾಖಲೆ ಹಾಗೂ ಆಸ್ತಿಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಹೆಚ್.ಆರ್.ಕೃಷ್ಣಪ್ಪನವರ ಸ್ವ ಗ್ರಾಮವಾದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರಹಳ್ಳಿಯ ಮನೆ, ಕೋಲಾರ ಜಿಲ್ಲೆಯ ಮಾಲೂರಿನ ಮನೆ, ಬೆಂಗಳೂರು, ಶಿವಮೊಗ್ಗದ ಮನೆ ಮತ್ತು ಕಚೇರಿ ಸೇರಿ ಸುಮಾರು ಐದು ಕಡೆ ಏಕಕಾಲಕ್ಕೆ ಎಸಿಬಿ ದಾಳಿ ನಡೆಸಿದೆ. ದಾವಣಗೆರೆ ಎಸಿಬಿ ಎಸ್‌ಪಿ ಜಯಪ್ರಕಾಶ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಬೇರೆ, ಬೇರೆ ಕಡೆ ಅಡಕೆ ತೋಟ, ಮನೆ ಹೊಂದಿರುವುದು ಪತ್ತೆಯಾಗಿದೆ. 5 ಕಡೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆ, ಆಸ್ತಿಪತ್ರ ಪರಿಶೀಲಿಸಿದ್ದಾರೆ.

ಮಂಗಳೂರಿನಲ್ಲೂ ಬೆಳ್ಳಂಬೆಳಗ್ಗೆ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಜಿ.ಶ್ರೀಧರ್ ನಿವಾಸ ‌ಮತ್ತು ಕಚೇರಿಯಲ್ಲಿ ಹುಡುಕಾಟ ನಡೆದಿದೆ. ಖಚಿತ ದೂರಿ‌ನ ಹಿನ್ನೆಲೆಯಲ್ಲಿ ಮಂಗಳೂರು ಎಸಿಪಿ ಎಸ್ಪಿ ಮತ್ತು ತಂಡದಿಂದ ದಾಖಲೆ ಪತ್ರ ಸಂಗ್ರಹ ಮಾಡಲಾಗುತ್ತಿದೆ.

ಬಳ್ಳಾರಿಯಲ್ಲೂ ಎಸಿಬಿ ದಾಳಿ ಅಕ್ರಮ ಆಸ್ತಿ ಆರೋಪ ಹಿನ್ನೆಲೆ ಬಳ್ಳಾರಿಯ ಹವಂಭಾವಿ ಪ್ರದೇಶದಲ್ಲಿರುವ ಜೆಸ್ಕಾಂ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಎ.ಎನ್. ವಿಜಯ್ ಕುಮಾರ್​ರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ಧಾರೆ. ಡಿವೈಎಸ್ಪಿ ಸೂರ್ಯನಾರಾಯಣ್ ನೇತೃತ್ವದಲ್ಲಿ ಮೂವರು ಎಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದೆ. ದಾಳಿ ವೇಳೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

bly raid

ಬಳ್ಳಾರಿಯಲ್ಲೂ ಎಸಿಬಿ ದಾಳಿ

ಮಂಡ್ಯದಲ್ಲೂ ಎಸಿಬಿ ದಾಳಿ ಮಂಡ್ಯ ಸಾಮಾಜಿಕ ಅರಣ್ಯ ಇಲಾಖೆ ಡಿಸಿಎಫ್‌ ಟಿ.ವೆಂಕಟೇಶ್‌ಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ಕೊಟ್ಟಿದೆ. ಮಂಡ್ಯದ ಸುಭಾಷ್ ನಗರದಲ್ಲಿರುವ ಡಿಸಿಎಫ್‌ ಟಿ.ವೆಂಕಟೇಶ್‌ ಮನೆಯ ಮೇಲೆ ಮಂಡ್ಯ ಎಸಿಬಿ DySP ಧರ್ಮೇಂದ್ರ ನೇತೃತ್ವದ ತಂಡ ರೇಡ್ ಮಾಡಿದೆ. ಹಾಗೂ ವಿಜಯಪುರ ಜಿಲ್ಲೆಯಲ್ಲಿಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯಪುರ ನಗರದ ಸುಕೂನ್ ಲೇಔಟ್​ನಲ್ಲಿರುವ ಕೆಪಿಟಿಸಿಎಲ್ ಕಚೇರಿಯ ಎಇಇ ಸಿದ್ದರಾಮ ಮಲ್ಲಿಕಾರ್ಜುನ್ ಬಿರಾದಾರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿರುವ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಬೀದರ್‌ ಪಂಚಾಯತ್​ ರಾಜ್ ಇಲಾಖೆ ಜೆಇ ಸುರೇಶ್ ಮೊಹ್ರೆ ಮನೆ ಮೇಲೆ ಕೂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್ ಜಿಲ್ಲೆ ಬಸವಕಲ್ಯಾಣದ ಶಿವಾಜಿನಗರದಲ್ಲಿನ ಮನೆ, ಭಾಲ್ಕಿ ತಾಲೂಕಿನ ಮೋಹಕರ ಗ್ರಾಮದ ಮನೆ, ಜೆಇ ಸುರೇಶ್ ಮೊಹ್ರೆ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪೊಲೀಸ್ ಠಾಣೆಯ ಮೇಲೆ ಎಸಿಬಿ ದಾಳಿ; ಲಂಚ ಪಡೆಯುತ್ತಿದ್ದ ಪಿಎಸ್‌ಐ, ಇಬ್ಬರು ಪಿಸಿಗಳು ವಶಕ್ಕೆ

Published On - 7:47 am, Thu, 15 July 21