ಮಕ್ಕಳಿಬ್ಬರಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಂದೆ, ಮಾಟ-ಮಂತ್ರಕ್ಕೆ ಬಲಿಯಾದವ ಮುಗ್ಧ ಹೆಣ್ಣು ಮಕ್ಕಳು?

ಬಾಡಿಗೆ ಮನೆಯಲ್ಲಿ ವಾಸವಿದ್ದ ಅನಿಲ್ ಬಾಂದೇಕರ ತನ್ನಿಬ್ಬರು ಹೆಣ್ಣು ಮಕ್ಕಳಾದ ಅಂಜಲಿ(8) ಮತ್ತು ಅನನ್ಯಾ(4)ಗೆ ವಿಷ ನೀಡಿ ಬಳಿಕ ಎಡಗೈ ಕೊಯ್ದುಕೊಂಡು ಮನೆಯ ದೇವರ ಮೂರ್ತಿ ಮೇಲೆ‌ ರಕ್ತ ಸುರಿಸಿ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮಕ್ಕಳಿಬ್ಬರಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಂದೆ, ಮಾಟ-ಮಂತ್ರಕ್ಕೆ ಬಲಿಯಾದವ ಮುಗ್ಧ ಹೆಣ್ಣು ಮಕ್ಕಳು?
ಮಕ್ಕಳಿಬ್ಬರಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಂದೆ
Follow us
TV9 Web
| Updated By: ಆಯೇಷಾ ಬಾನು

Updated on:Jul 15, 2021 | 2:45 PM

ಬೆಳಗಾವಿ: ಹೆಣ್ಣು ಮಕ್ಕಳಿಬ್ಬರಿಗೆ ವಿಷವುಣಿಸಿ ತಂದೆಯೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್ ಗ್ರಾಮದಲ್ಲಿ ನಡೆದಿದೆ. ಆದರೆ ಈ ದುರಂತ ಘಟನೆಗೆ ಅಪರಿಚಿತರು ಮಾಡಿಸಿದ ಮಾಟ-ಮಂತ್ರವೇ ಕಾರಣ ಎಂಬ ಹೇಳಿಕೆಗಳು ಕೇಳಿ ಬಂದಿವೆ. ನಾಲ್ಕು ದಿನಗಳ ಹಿಂದೆ ಮನೆಯ ಮುಂದೆ ಮಾಟ-ಮಂತ್ರ ಮಾಡಿಸಿದ್ದ ವಸ್ತುಗಳು ಸಿಕ್ಕಿದ್ದವು. ಇದಾದ ಬಳಿಕ ಅನಿಲ್ ಖಿನ್ನತೆಗೆ ಒಳಗಾಗಿದ್ದ. ಒಂದು ದಿನ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸವಿದ್ದ ಅನಿಲ್ ಬಾಂದೇಕರ ತನ್ನಿಬ್ಬರು ಹೆಣ್ಣು ಮಕ್ಕಳಾದ ಅಂಜಲಿ(8) ಮತ್ತು ಅನನ್ಯಾ(4)ಗೆ ವಿಷ ನೀಡಿ ಬಳಿಕ ಎಡಗೈ ಕೊಯ್ದುಕೊಂಡು ಮನೆಯ ಶಿವಲಿಂಗ, ಸಾಯಿಬಾಬಾ ಮೂರ್ತಿ ಮೇಲೆ‌ ರಕ್ತ ಸುರಿಸಿ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ಮಕ್ಕಳಿಬ್ಬರೂ ಮನೆಯಲ್ಲೇ ಮೃತಪಟ್ಟಿದ್ದು ಅನಿಲ್ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಘಟನೆ ಹಿನ್ನಲೆ ಜುಲೈ 11ರಂದು ಮಣ್ಣೆತ್ತಿನ ಅಮಾವಾಸ್ಯೆ ದಿನ ಅನಿಲ್ ಮನೆಯ ಮುಂದೆ ಅಪರಿಚಿತರು ಮಾಟ-ಮಂತ್ರ ಮಾಡಿಸಿ ಹೋಗಿದ್ದರಂತೆ. ಎರಡು ನಿಂಬೆಹಣ್ಣು, ಹಸಿರು ಬಳೆಗಳು, ಕುಂಕುಮ, ಮೆಣಸಿನಕಾಯಿ, ಅರಿಶಿಣ, ಗಿಡವೊಂದರ ಬೇರು, ಕೆಂಪು ದಾರ, ಕೆಂಪು ಬಟ್ಟೆ, ಕ್ಯಾರು ಬೀಜ, ಒಂದು ಚೀಟಿ. ಈ ಎಲ್ಲವನ್ನೂ ಒಂದು ಕ್ಯಾರಿ ಬ್ಯಾಗ್ ನಲ್ಲಿಟ್ಟು ಮನೆಯ ಮುಂದೆ ಬೀಸಾಡಿ ಹೋಗಿದ್ದರು. ಇದನ್ನು ಕಂಡು ಅನಿಲ್ ಮತ್ತು ಪತ್ನಿ ಜಯಾ ಬೆಚ್ಚಿ ಬಿದ್ದಿದ್ದರು. ಅನಿಲ್ ಮಾಟ ಮಾಡಿಸಿದ್ದ ಎಲ್ಲಾ ಸಾಮಾಗ್ರಿಗಳನ್ನ ಕೈಯಲ್ಲಿ ಹಿಡಿದು ಸುಟ್ಟು ಹಾಕಿದ್ದ. ಅಂದಿನಿಂದಲೂ ತೀವ್ರ ಒತ್ತಡಕ್ಕೆ ಒಳಗಾಗಿ ವಿಚಿತ್ರವಾಗಿ ಆಡಲು ಶುರುಮಾಡಿದ್ದ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಕೆಸಕ್ಕೆ ಹೋಗದಿರುವುದು. ಯಾರ ಜೊತೆಯೂ ಮಾತನಾಡದಿರುವುದು ಹೀಗೆ ಅವರ ಜೀವನ ಶೈಲಿಯೇ ಬದಲಾಗಿತ್ತಂತೆ. ಭಯ ಆಗ್ತಿದೆ, ನನ್ನ ಜೀವಕ್ಕೆ ಎನಾದ್ರೂ ಆಗುತ್ತೆ ಅಂತಾ ಆಗಾಗ ಹೇಳ್ತಿದ್ದನಂತೆ.

ಅನಿಲ್ ಕೆ.ಹೆಚ್. ಕಂಗ್ರಾಳಿ ಗ್ರಾಮದಲ್ಲಿ ತನ್ನ ಮೂವರಿ ಮಕ್ಕಳು ಹಾಗೂ ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿದ್ದ. ಮಕ್ಕಳ ಕೊಲೆಯಾದ ದಿನ ಪತ್ನಿ ಜಯಶ್ರೀ ತನ್ನ ಪುತ್ರನ ಜೊತೆಗೆ ವಿಜಯನಗರದ ತಾಯಿ ಮನೆಗೆ ತೆರಳಿದ್ದಳು. ಈ ವೇಳೆ ಬೆಡ್ ರೂಂ ಬಾಗಿಲು ಹಾಕಿಕೊಂಡು ಅನಿಲ್ ಈ ಕೃತ್ಯ ಎಸಗಿದ್ದಾನೆ. ಮಾಟ-ಮಂತ್ರಕ್ಕೆ ಎರಡು ಮುಗ್ದ ಜೀವಗಳು ಬಲಿಯಾಗಿವೆ.

ಅಲ್ಲದೆ ಟೈಲ್ಸ್ ಜೋಡಣೆ ಕೆಲಸ ಮಾಡ್ತಿದ್ದ ಅನಿಲ್ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ‌ ಮನೆಯಲ್ಲಿದ್ದ. ಮನೆಯಲ್ಲಿದ್ದಿದ್ದಕ್ಕೆ ಕೈಯಲ್ಲಿ ದುಡ್ಡು ಇಲ್ಲದೆ ತೀವ್ರ ಒತ್ತಡ ಅನುಭವಿಸುತ್ತಿದ್ದ. ಹೆಂಡತಿ ತವರು ಮನೆ ಸೇರಿದ್ದಕ್ಕೆ ಅಲ್ಲೇ ಹೋಗಿ ಗಂಡ ಅನಿಲ್ ಊಟ ಮಾಡಿಕೊಂಡು ಬರ್ತಿದ್ದ. ಕೆಲಸವಿಲ್ಲ, ಕೈಯಲ್ಲಿ ದುಡ್ಡಿಲ್ಲದ್ದಕ್ಕೆ ಹೆಂಡತಿ ಮಕ್ಕಳನ್ನ ಸಾಕಲು ಆಗಲ್ಲಾ ಅನ್ನುವ ನಿರ್ಧಾರಕ್ಕೆ ಬಂದು ಈ ರೀತಿ ಮಾಡಿಕೊಂಡನಾ ಎಂಬ ಅನುಮಾನ ಸಹ ವ್ಯಕ್ತವಾಗಿದೆ. ಸಾಕಲು ಆಗದೇ ಈ ರೀತಿ ಮಕ್ಕಳನ್ನ ಕೊಂದು ತಾನೂ ಸಾಯಲು ಯತ್ನಿಸಿದ್ನಾ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರ ತನಿಖೆಯಿಂದ‌ ಎರಡು ಮುಗ್ದ ಮಕ್ಕಳ ಸಾವಿನ‌ ರಹಸ್ಯ ಹೊರ ಬರಬೇಕಿದೆ‌. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಟ ಮಂತ್ರ ಮಾಡಿದವರ ಹಿಂದೆ ಬಿದ್ದ ಖಾಕಿ ಸದ್ಯ ಈಗ ಪ್ರಕರಣ ಸಂಬಂಧ ದಂಪತಿ ದೂರು ದಾಖಲಿಸಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು ಪೊಲೀಸರು ಮಾಟ-ಮಂತ್ರ ಮಾಡಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಾಟ-ಮಂತ್ರ ಎಂದು ಜನರಿಗೆ ಮೋಸ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ

Published On - 8:19 am, Thu, 15 July 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ