ಮಾಟ-ಮಂತ್ರ ಎಂದು ಜನರಿಗೆ ಮೋಸ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ

ದೇವರ ಪವಾಡವೆಂದು ಜನ್ರ ಮೈಂಡ್ ವಾಶ್ ಮಾಡಿ ಜನರಿಗೆ ಮಂಕುಬೂದಿ ಎರಚಿದ್ದ. ಡೋಂಗಿ ಬಾಬಾನ ಅಸಲಿ ಮುಖವಾಡ ಗೊತ್ತಾಗುತ್ತಿದ್ದಂತೆ ನಂಬಿ ಮೋಸ ಹೋದ ಜನ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಾಟ-ಮಂತ್ರ ಎಂದು ಜನರಿಗೆ ಮೋಸ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ
ಡೋಂಗಿ ಬಾಬಾನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ
Follow us
TV9 Web
| Updated By: Digi Tech Desk

Updated on:Jul 12, 2021 | 1:40 PM

ಗದಗ: ಕಷ್ಟಪಟ್ಟು ಮೈ ಬಗ್ಗಿಸಿ ದುಡಿಯದೇ ಆರಾಮಾಗಿ ಹಣ ಮಾಡಲು ಮುಂದಾಗಿದ್ದ, ಜನರನ್ನು ನಂಬಿಸಿ ಹಣ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಡೋಂಗಿ ಬಾಬಾ ಅಲಿಯಾಸ್ ಆಸೀಫ್ ಜಾಗಿರದಾರ್ ಎಂಬುವ ವ್ಯಕ್ತಿ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ. ಸದ್ಯ ಈತನ ಕೃತ್ಯ ಬಯಲಾಗಿದ್ದು ಸ್ಥಳೀಯರು ಡೋಂಗಿ ಬಾಬಾನಿಗೆ ತಕ್ಕ ಪಾಠ ಕಲಿಸಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯವನಾಗಿದ್ದ ಡೋಂಗಿ ಬಾಬಾ ಅನೇಕ ದಿನಗಳಿಂದ ದೇವರ ಹೆಸರಲ್ಲಿ ಮಾಟ, ಮಂತ್ರ ಮಾಡುತ್ತ ಹಣ ಮಾಡುತ್ತಿದ್ದ. ಕುದಿಯೋ ಎಣ್ಣೆ ಹಾಗೂ ಸುಡುವ ತುಪ್ಪದಲ್ಲಿ ಕೈ ಹಾಕುವುದು. ಅದರಿಂದ ಬೋಂಡ, ಬಜ್ಜಿ ತೆಗೆಯುವುದು. ಏಕಾಏಕಿ ಮೈಮೇಲೆ ದೇವರು ಬಂದಂತೆ ನಟಿಸಿ ಜನರನ್ನ ನಂಬಿಸಿ. ನಿಂಬೆಹಣ್ಣು, ಬೂದಿ ಕೊಟ್ಟು ಜನರಿಗೆ ಮೋಸ ಮಾಡುತ್ತಿದ್ದ. ದೇವರ ಪವಾಡವೆಂದು ಜನ್ರ ಮೈಂಡ್ ವಾಶ್ ಮಾಡಿ ಜನರಿಗೆ ಮಂಕುಬೂದಿ ಎರಚಿದ್ದ. ಡೋಂಗಿ ಬಾಬಾನ ಅಸಲಿ ಮುಖವಾಡ ಗೊತ್ತಾಗುತ್ತಿದ್ದಂತೆ ನಂಬಿ ಮೋಸ ಹೋದ ಜನ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮುಖ ಮೂತಿ ನೋಡದೇ ಮನಸೋ ಇಚ್ಛೆ ಚಚ್ಚಿದ್ದಾರೆ. ಬಳಿಕ ಪೊಲಿಸರಿಗೆ ಒಪ್ಪಿಸಿದ್ದಾರೆ. ಸ್ಥಳೀಯರಿಂದ ಏಟು ತಿಂದ ಬಳಿಕ ಡೋಂಗಿ ಬಾಬಾ ನಾನು ಮಾಡಿದ್ದು ಮೋಸ.. ತಪ್ಪಾಗಿದೆ ಕ್ಷಮಿಸಿ ನನ್ನನ್ನು ಬಿಟ್ಟುಬಿಡಿ ಎಂದು ಕೈ ಕಾಲು ಹಿಡಿದು ಬೇಡಿಕೊಂಡಿದ್ದಾನೆ. ಆದ್ರೆ ಇವನ ಮಾತಿಗೆ ಮರಳಾಗದ ಜನ ಆತನಿಗೆ ತಕ್ಕ ಶಿಕ್ಷೆ ಸಿಗುವಂತೆ ಮಾಡಿದ್ದಾರೆ. ಅದರಲ್ಲೂ ಓರ್ವ ಮಹಿಳೆ ಬಾಬಾನಿಗೆ ಮನಸ್ಸೋ ಇಚ್ಚೇ ಗೂಸ ಕೊಟ್ಟಿದ್ದಾಳೆ. ಇದೀಗ ಆರೋಪಿ ಬಾಬಾನನ್ನು ಸ್ಥಳೀಯರು ಗದಗ ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಎಸ್​​ಐ ಹುದ್ದೆ ಕೊಡಿಸುವುದಾಗಿ 1 ಕೋಟಿ ರೂಪಾಯಿ ವಂಚಿಸಿದ್ದ ವ್ಯಕ್ತಿ ಪೊಲೀಸರ ವಶಕ್ಕೆ; ಕೆಪಿಎಸ್​ಸಿ ಹೆಸರಿನಲ್ಲಿ ಮೋಸ

(people beat dhongi baba and surrenders to police in gadag)

Published On - 12:44 pm, Mon, 12 July 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ