ಹಾಲ್ ಟಿಕೆಟ್ ಪಡೆದು ಮನೆಗೆ ವಾಪಸಾಗುವಾಗ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿನಿ ಸಾವು
SSLC 2021: ಜುಲೈ 19 ರಂದು ಪರೀಕ್ಷೆ ಬರೆಯಬೇಕಿದ್ದ ಪುಟಪಾಕ ಗ್ರಾಮದ ನಿಶಿತಾ ಫಾತಿಮಾ(16) ಸಾವಿಗೀಡಾದ ದುರ್ದೈವಿ. ನಿಶಿತಾ ಫಾತಿಮಾ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ. ಗ್ರಾಮಕ್ಕೆ ವಾಪಸ್ ಹೋಗಲು ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಳೆ.
ಯಾದಗಿರಿ: ಜಿಲ್ಲೆಯಲ್ಲಿ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಮತ್ತೊಂದು ಆಕಸ್ಮಿಕ ಘಟನೆ ನಡೆದಿದೆ. ಹಾಲ್ ಟಿಕೆಟ್ ತರಲು ಶಾಲೆಗೆ ಹೋದಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಮಂಜುನಾಥ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದ. ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಬಳಿ ಈ ದುರ್ಘಟನೆ ನಡೆದಿತ್ತು. ಇದೀಗ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಯಾದಗಿರಿ ಜಿಲ್ಲೆ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಎಸ್‌ಎಸ್ಎಲ್‌ಸಿ ಪರೀಕ್ಷೆಗೆಂದು ಹಾಲ್ ಟಿಕೆಟ್ ಪಡೆದು ಮನೆಗೆ ವಾಪಸ್ ಬರುವಾಗ ಸಾವು ಸಂಭವಿಸಿದೆ.
ಜುಲೈ 19 ರಂದು ಪರೀಕ್ಷೆ ಬರೆಯಬೇಕಿದ್ದ (SSLC 2021) ಪುಟಪಾಕ ಗ್ರಾಮದ ನಿಶಿತಾ ಫಾತಿಮಾ (16) ಸಾವಿಗೀಡಾದ ದುರ್ದೈವಿ. ನಿಶಿತಾ ಫಾತಿಮಾ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ. ಗ್ರಾಮಕ್ಕೆ ವಾಪಸ್ ಹೋಗಲು ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಳೆ.
ಅಂದು ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದಿತ್ತು:
ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಮಂಜುನಾಥ್ ಎಂಬ ವಿದ್ಯಾರ್ಥಿ ಅಸುನೀಗಿದ್ದ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಬಳಿ ದುರ್ಘಟನೆ ನಡೆದಿತ್ತು. ಹಾಲ್ ಟಿಕೆಟ್ ತರಲು ಮನೆಯಿಂದ ಶಾಲೆಗೆ ಹೋದಾಗ ಈ ದುರ್ಘಟನೆ ನಡೆದಿತ್ತು. ಮಂಜುನಾಥ್ (16), ಹಾಲ್ ಟಿಕೆಟ್ ತರಲು ಹೋಗಿ ಮೃತಪಟ್ಟ ವಿದ್ಯಾರ್ಥಿ.
ದಾರಿಯಲ್ಲಿ ಹೋಗುವಾಗ ಟ್ರ್ಯಾಕ್ಟರ್ ಚಾಲಕ ಶಾಲೆವರೆಗೆ ಬಿಡೋದಾಗಿ ಮಂಜುನಾಥನನ್ನು ತನ್ನ ಟ್ರ್ಯಾಕ್ಟರ್ನಲ್ಲಿ ಕೂರಿಸಿಕೊಂಡು ಹೋಗಿದ್ದ. ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ಈ ಆಕಸ್ಮಿಕ ನಡೆದಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಪಲ್ಟಿ: ಹಾಲ್ ಟಿಕೆಟ್ ತರಲು ಹೋಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು
(sslc girl student died due to heart attack in gurmitkal in yadgir)