ಟ್ರ್ಯಾಕ್ಟರ್ ಪಲ್ಟಿ: ಹಾಲ್‌ ಟಿಕೆಟ್‌ ತರಲು ಹೋಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು‌

ಟ್ರ್ಯಾಕ್ಟರ್ ಪಲ್ಟಿ: ಹಾಲ್‌ ಟಿಕೆಟ್‌ ತರಲು ಹೋಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು‌
ಟ್ರ್ಯಾಕ್ಟರ್ ಪಲ್ಟಿ,: ಹಾಲ್‌ ಟಿಕೆಟ್‌ ತರಲು ಹೋಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು‌

SSLC student died: ಮನೆಯಿಂದ‌ ಶಾಲೆಗೆ ಹಾಲ್ ಟಿಕೆಟ್ ತರಲು ಹೋದಾಗ ನಿನ್ನೆ ಮಂಗಳವಾರ ಈ ‌ದುರ್ಘಟನೆ ನಡೆದಿದೆ. ಮಂಜುನಾಥ್ (16), ಹಾಲ್‌ ಟಿಕೆಟ್‌ ತರಲು ಹೋಗಿ ಮೃತಪಟ್ಟ ವಿದ್ಯಾರ್ಥಿ.  ದಾರಿಯಲ್ಲಿ ಹೋಗುವಾಗ ಟ್ರ್ಯಾಕ್ಟರ್ ಚಾಲಕ ಶಾಲೆ‌ವರೆಗೆ ಬಿಡೋದಾಗಿ ಮಂಜುನಾಥನನ್ನು ತನ್ನ ಟ್ರ್ಯಾಕ್ಟರ್​ನಲ್ಲಿ ಕೂರಿಸಿಕೊಂಡು ಹೋಗಿದ್ದ.

TV9kannada Web Team

| Edited By: sadhu srinath

Jul 07, 2021 | 10:51 AM

ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದು ವಿದ್ಯಾರ್ಥಿಯೊಬ್ಬ ಅಸುನೀಗಿರುವ ದುರ್ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಬಳಿ ನಡೆದಿದೆ.  ಚಿಕ್ಕನಹಳ್ಳಿಯಲ್ಲಿ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿ ಮಂಜುನಾಥ್ ಸಾವಿಗೀಡಾದ ದುರ್ದೈವಿ. 

ಮನೆಯಿಂದ‌ ಶಾಲೆಗೆ ಹಾಲ್ ಟಿಕೆಟ್ ತರಲು ಹೋದಾಗ ನಿನ್ನೆ ಮಂಗಳವಾರ ಈ ‌ದುರ್ಘಟನೆ ನಡೆದಿದೆ. ಮಂಜುನಾಥ್ (16), ಹಾಲ್‌ ಟಿಕೆಟ್‌ ತರಲು ಹೋಗಿ ಮೃತಪಟ್ಟ ವಿದ್ಯಾರ್ಥಿ.  ದಾರಿಯಲ್ಲಿ ಹೋಗುವಾಗ ಟ್ರ್ಯಾಕ್ಟರ್ ಚಾಲಕ ಶಾಲೆ‌ವರೆಗೆ ಬಿಡೋದಾಗಿ ಮಂಜುನಾಥನನ್ನು ತನ್ನ ಟ್ರ್ಯಾಕ್ಟರ್​ನಲ್ಲಿ ಕೂರಿಸಿಕೊಂಡು ಹೋಗಿದ್ದ. ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ಈ ಆಕಸ್ಮಿಕ ನಡೆದಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯ ಕನ್ನಡ ಕಟ್ಟಾಳು, ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ವಿಧಿವಶ

(Tractor overturns sslc student manjunath died in surapura taluk yadgir)

Follow us on

Related Stories

Most Read Stories

Click on your DTH Provider to Add TV9 Kannada