ಹಿರಿಯ ಕನ್ನಡ ಕಟ್ಟಾಳು, ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ವಿಧಿವಶ
Dharwad Karnataka Vidyavardhaka Sangha: ಕೃಷ್ಣ ಜೋಶಿ ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ ಧಾರವಾಡ ಕಾರ್ಗಿಲ್ ಸ್ತೂಪದ ಬಳಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಕಾರ್ಗಿಲ್ ಸ್ತೂಪದ ಬಳಿ ಅಂತಿಮ ನಮನ ಸಲ್ಲಿಕೆಯಾಗಲಿದೆ. ಆ ಬಳಿಕ ಬೆಳಗ್ಗೆ 10ರಿಂದ 11ರವರೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಧಾರವಾಡ: ನಾಡಿನ ಹಿರಿಯ ಕನ್ನಡ ಕಟ್ಟಾಳು, ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಅವರು ವಿಧಿವಶರಾಗಿದ್ದಾರೆ. ಹಿರಿಯ ಕನ್ನಡಪರ ಚಿಂತಕ, ಧಾರವಾಡದ ಕೃಷ್ಣ ಜೋಶಿ (76) ಅವರು ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ರಚನೆಯಲ್ಲಿ ಪ್ರಮುಖ ಪಾತ್ರವಾಹಿಸಿದ್ದ ಕೃಷ್ಣ ಜೋಶಿ ಅವರು ದೇಶದ ಮೊದಲ ಕಾರ್ಗಿಲ್ ಸ್ತೂಪ ಸ್ಥಾಪನೆಯ ರೂವಾರಿಯಾಗಿದ್ದರು.
ಕೃಷ್ಣ ಜೋಶಿ ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ ಧಾರವಾಡ ಕಾರ್ಗಿಲ್ ಸ್ತೂಪದ ಬಳಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಕಾರ್ಗಿಲ್ ಸ್ತೂಪದ ಬಳಿ ಅಂತಿಮ ನಮನ ಸಲ್ಲಿಕೆಯಾಗಲಿದೆ. ಆ ಬಳಿಕ ಬೆಳಗ್ಗೆ 10ರಿಂದ 11ರವರೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಹೊಸ ಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೆರಲಿದೆ ಎಂದು ತಿಳಿದುಬಂದಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ
(Dharwad Karnataka Vidyavardhaka Sangha treasurer krishna joshi died in goa)
Published On - 9:58 am, Wed, 7 July 21