Viral Photo: ನಿಮ್ಮ ಕಣ್ಣಿಗೆ ಸವಾಲೊಡ್ಡಬಲ್ಲ ಚಿತ್ರವಿದು, ಇದರಲ್ಲಿ ಹಿಮ ಚಿರತೆಯನ್ನು ಹುಡುಕಿ ನೋಡೋಣ!

ಈ ಚಿತ್ರದಲ್ಲಿ ಚಿತ್ರದಲ್ಲಿ ಹಿಮ ಚಿರತೆಯೊಂದಿದೆ. ಆದರೆ ಎಲ್ಲಿದೆ? ಎಂಬುದನ್ನು ಹುಡುಕುವುದೇ ದೊಡ್ಡ ಸವಾಲಿನ ಕೆಲಸ. ನಿಮ್ಮ ಕಣ್ಣಿಗೆ ಸವಾಲೊಡ್ಡುವ ಈ ಪ್ರಶ್ನೆಗೆ ಉತ್ತರ ಹುಡುಕುವಿರಾ?

Viral Photo: ನಿಮ್ಮ ಕಣ್ಣಿಗೆ ಸವಾಲೊಡ್ಡಬಲ್ಲ ಚಿತ್ರವಿದು, ಇದರಲ್ಲಿ ಹಿಮ ಚಿರತೆಯನ್ನು ಹುಡುಕಿ ನೋಡೋಣ!
ಈ ಚಿತ್ರದಲ್ಲಿರುವ ಹಿಮ ಚಿರತೆಯನ್ನು ಹುಡುಕುವಿರಾ?
Follow us
TV9 Web
| Updated By: shruti hegde

Updated on:Jul 15, 2021 | 2:26 PM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಫೋಟೋಗಳು, ವಿಡಿಯೋಗಳು ಹರಿದಾಡುತ್ತಲೇ ಇರ್ತವೆ. ಅದರಲ್ಲಿಯೂ ಈ ಪ್ರಾಣಿಗಳ ತುಂಟಾಟದ ವಿಡಿಯೋಗಳು ಜನರ ಮನ ಗೆಲ್ಲುವುದು ಹೆಚ್ಚು. ತಮಾಷೆಯ ವಿಡಿಯೋಗಳು ಒಂದು ಕಡೆ ಆದ್ರೆ, ಸವಾಲೊಡ್ಡುವ ಚಾಲೆಂಜ್​ಗಳೂ ಸಹ ನೆಟ್ಟಿಗರಿಗೆ ಕ್ರೇಸ್​ ಉಂಟು ಮಾಡುತ್ತವೆ. ಅಂಥಹದ್ದೇ ಒಂದು ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಚಿತ್ರದಲ್ಲಿ ಹಿಮ ಚಿರತೆಯೊಂದಿದೆ. ಆದರೆ ಎಲ್ಲಿದೆ? ಎಂಬುದನ್ನು ಹುಡುಕುವುದೇ ದೊಡ್ಡ ಸವಾಲಿನ ಕೆಲಸ. ನಿಮ್ಮ ಕಣ್ಣಿಗೆ ಸವಾಲೊಡ್ಡುವ ಈ ಪ್ರಶ್ನೆಗೆ ಉತ್ತರ ಹುಡುಕುವಿರಾ?

ಸಾಮಾನ್ಯವಾಗಿ ಒಗಟುಗಳನ್ನು ಬಿಡಿಸಿ ಆಟವನ್ನು ಆಡುತ್ತಲೇ ಇರುತ್ತೇವೆ. ಅದು ನಿಮ್ಮ ಬುದ್ಧಿ ಶಕ್ತಿಗೆ ಸವಾಲು​ವೊಡ್ಡಿದರೆ, ಇಂತಹ ಚಿತ್ರಪಟಗಳಲ್ಲಿ ಕಾಣದೇ ಇರುವುದನ್ನು ಹುಡುಕುವುದು ನಿಮ್ಮ ಕಣ್ಣಿಗೆ ಸವಾಲೊಡ್ಡುತ್ತವೆ. ಸವಾಲು ಅಂದಾಕ್ಷಣ ಸುಮ್ಮನಿರೋಕಾಗತ್ಯೇ? ಹುಡುಕಿಯೇ ಹುಡುಕ್ತೇನೆ.. ಎಂದು ಚಾಲೆಂಜ್​ಆಗಿ ಸ್ವೀಕರಿಸಿದವರೂ ಇದ್ದಾರೆ. ಕೆಲವರು ಹಿಮ ಚಿರತೆಯನ್ನು ಹುಡುಕಲು ಯಶಸ್ವಿಯಾದ್ರೆ ಇನ್ನು ಕೆಲವರು ಡೊಡ್ಡ ಬಂಡೆಗಳನ್ನು ಗುರುತಿಸಿ ಹಿಮ ಚಿರತೆ ಇದೆ.. ಎಂದು ತಪ್ಪಾಗಿ ಹೇಳಿದವರೂ ಇದ್ದಾರೆ. ನೀವು ಚಿರತೆಯನ್ನು ಹುಡುಕ ಬಲ್ಲಿರಾ?

ಡೊಡ್ಡದಾದ ಬಂಡೆಗಳ ಪರ್ವತ. ಈ ಮಧ್ಯೆ ಅಲ್ಲೆಲ್ಲೋ ಹಿಮ ಚಿರತೆ ಅಡಗಿ ಕುಳಿತಿದೆ. ಆದರೆ ಚಿರತೆ ಇರುವುದಂತೂ ಸತ್ಯ. ಆದರೆ ಎಲ್ಲಿದೆ? ಇದೇ ಸವಾಲು. ಕಷ್ಟವನ್ನು ಇಷ್ಪಟ್ಟು ಮಾಡಲು ಮುಂದಾದ ಜನರಲ್ಲಿ ಕೆಲವರು ಸೋತಿದ್ದಾರೆ. ಇನ್ನು ಕೆಲವರು ಗೆದ್ದಿದ್ದಾರೆ. ನಿಮಗೆ ಸವಾಲಾದರೆ ನೀವು ಸೋಲುತ್ತೀರೋ? ಗೆಲ್ಲುತ್ತೀರೋ?

ನೆಟ್ಟಿಗರಂತೂ ಚಿತ್ರವನ್ನು ಉಲ್ಟಾ-ಪಲ್ಟಾ ತಿರುಗಿಸಿಯೆಲ್ಲಾ ನೋಡಿದ್ದಾಗಿದೆ. ಕೆಲವರು ಚಿರತೆಯನ್ನು ಕಂಡು ಹಿಡಿದೇ ಬಿಟ್ರು! ಇನ್ನು ಕೆಲವರು ಹರಸಾಹಸ ಪಡುತ್ತಿದ್ದಾರೆ. ಈ ಪ್ರಾಣಿಯನ್ನು ಪ್ಯಾಂಟಮ್​ ಕ್ಯಾಟ್​ ಎಂದೂ ಕರೆಯುತ್ತಾರೆ. ಟ್ವಿಟರ್​ನಲ್ಲಿ ಐಎಫ್​ಎಸ್​ ಅಧಿಕಾರಿ ರಮೇಶ್​​ ಪಾಂಡೆ ಅವರು ಹಂಚಿಕೊಂಡ ಫೋಟೋ ಇದೀಗ ಫುಲ್​ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ಚಿರತೆಯನ್ನು ಮೂರ್ಖನನ್ನಾಗಿ ಮಾಡಿದ ಮೊಸಳೆ.. ಆಮೇಲ್​ ಏನಾಯ್ತು?​

Viral Photo: ಈ ಚಿತ್ರದಲ್ಲಿ ಎಷ್ಟು ಚಿರತೆಗಳಿವೆ? ಅವು ಎಲ್ಲಿವೆ? ಎಂದು ಗುರುತಿಸುವುದೇ ನಿಮ್ಮ ಸವಾಲು

Published On - 2:22 pm, Thu, 15 July 21

ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್