Viral Photo: ಈ ಚಿತ್ರದಲ್ಲಿ ಎಷ್ಟು ಚಿರತೆಗಳಿವೆ? ಅವು ಎಲ್ಲಿವೆ? ಎಂದು ಗುರುತಿಸುವುದೇ ನಿಮ್ಮ ಸವಾಲು
ಆ ದಟ್ಟ ಅರಣ್ಯದ ನಡುವೆ ಚಿರತೆ ಎಲ್ಲಿದೆ ಎಂದು ಹುಡುಕುವುದೇ ದೊಡ್ಡ ಸವಾಲ್! ಚಿರತೆ ಎಲ್ಲಿ ಕುಳಿತಿದೆ ಎಂದು ನೀವು ಗುರುತಿಸಬಲ್ಲಿರಾ?
ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೋಗಳು ಸಾಮಾನ್ಯವಾಗಿ ಹರಿದಾಡುತ್ತಿರುತ್ತದೆ. ಅದೆಷ್ಟೋ ಮಾನಸಿಕ ಒತ್ತಡದ ನಡುವೆ ಪ್ರಾಣಿಗಳ ತುಂಟಾಟ, ಆಟಗಳೆಲ್ಲ ಮನಸ್ಸಿಗೆ ಖುಷಿ ನೀಡುತ್ತವೆ. ಅವುಗಳ ಮಧ್ಯೆ ಕಣ್ಣಿಗೆ ಸವಾಲೊಡ್ಡುವ , ಜತೆಗೆ ಚಾಲೆಂಜಿಂಗ್ ಆಟಗಳೂ ಸಹ ನಡೆಯುತ್ತಿರುತ್ತವೆ. ಇದೀಗ ವೈರಲ್ ಆದ ಫೋಟೋ ಕೂಡಾ ಅಂಥದ್ದೇ! ಕಷ್ಟದ್ದೇನಲ್ಲಾ.. ಚಿತ್ರರದಲ್ಲಿ ಚಿರತೆಯನ್ನು ಹುಡುಕಬೇಕು. ಚಿತ್ರದಲ್ಲಿರುವ ಕಾಡಿನ ರಾಜನಂತೆ ಕುಳಿತಿದೆ. ಆದರೆ ಆ ದಟ್ಟ ಅರಣ್ಯದ ನಡುವೆ ಚಿರತೆ ಎಲ್ಲಿದೆ ಎಂದು ಹುಡುಕುವುದೇ ದೊಡ್ಡ ಸವಾಲ್! ಚಿರತೆ ಎಲ್ಲಿ ಕುಳಿತಿದೆ ಎಂದು ನೀವು ಗುರುತಿಸಬಲ್ಲಿರಾ?
ಕೆಲವು ಚಿತ್ರಗಳ ನಮ್ಮ ಕಣ್ಣಿಗೇ ಸವಾಲು ಹಾಕುತ್ತವೆ. ಎದುರೇ ಇದ್ದರೂ ಸಹ ನಮಗೆ ಗೋಚರವಾಗುವುದಿಲ್ಲ. ಇಂತಹ ಹುಡುಕಾಟಗಳು ಮನಸ್ಸಿಗೆ ಖುಷಿ ನೀಡುವುದಂತೂ ಸತ್ಯ. ಅದರಲ್ಲಿಯೂ ಸವಾಲ್ ಅಂದಾಕ್ಷಣ ಎದುರಿಸದೇ ಇರಲು ಮನಸ್ಸೇ ಬರುವುದಿಲ್ಲ. ಇದೀಹ ಹರಿದಾಡುತ್ತಿರುವ ಫೋಟೋ ಕೂಡಾ ಅಂಥದ್ದೇ! ದಟ್ಟವಾದ ಕಾನನದ ಮಧ್ಯೆ ಅಡಗಿರುವ ಚಿರತೆಯನ್ನು ಹುಡುಕಿದರೆ ನಿಜವಾಗಿಯೂ ನಿಮ್ಮ ಕಣ್ಣು ಅತ್ಯಂತ ಸೂಕ್ಷ್ಮವಾಗಿದೆ ಎಂದೇ ಅರ್ಥ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆಯೇ ಜನರು ಚಿತ್ರದಲ್ಲಿರುವ ಚಿರತೆಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಹಚ್ಚಹಸಿರಿನ ಕಾಡಿನ ಮಧ್ಯೆ ಚಿರತೆ ಅಷ್ಟು ಬೇಗ ಕಾಣಿಸುವುದಿಲ್ಲ. ಸೂಕ್ಷ್ಮವಾಗಿ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ ಹುಡುಕಲೇಬೇಕು. ಹುಡುಕಲು ಸಮಯ ನೀಡಲೇಬೇಕು.
ಒಂದೇ ನೋಟದಲ್ಲಿಯೇ ಚಿರತೆಯನ್ನು ಕಂಡುಹಿಡಿದಜನರೂ ಇದ್ದಾರೆ. ಗೋಚರವಾಗುತ್ತಿಲ್ಲ… ಎಲ್ಲಿದೆ ಚಿರತೆ? ಎಂದು ಪ್ರಶ್ನಿಸಿದವರೂ ಇದ್ದಾರೆ. ಆದರೆ ಇಲ್ಲಿ ಚಿರತೆ ಇರುವುದಂತೂ ಸತ್ಯ.
View this post on Instagram
ಚಿತ್ರ ಹುಡಿಕಿದ ಕೆಲವರು ಕಾಮೆಂಟ್ ಮಾಡಿದ್ದಾರೆ. ನಾನು ಚಿರತೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಚಿತ್ರದಲ್ಲಿ ಚಿರತೆಯನ್ನು ಹುಡುಕುತ್ತಲೇ ಇದ್ದಾರೆ. ಹುಡುಕಲು ಸಾಧ್ಯವಾಗುತ್ತಿಲ್ಲ.. ಎಂದು ಬೇಸರದ ಎಮೋಜಿಗಳನ್ನು ಕಳುಹಿಸಿ ಸವಾಲಿಗೆ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದನ್ನೂ ಓದಿ:
Viral Photo: ಈ ಚಿತ್ರದಲ್ಲಿ ಎಷ್ಟು ಚಿರತೆಗಳಿವೆ ಹೇಳಬಲ್ಲಿರಾ? ನಿಮ್ಮ ಕಣ್ಣಿಗೆ ಸವಾಲೊಡ್ಡುವ ಚಿತ್ರ
Published On - 12:20 pm, Tue, 6 July 21