AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಈ ಚಿತ್ರದಲ್ಲಿ ಎಷ್ಟು ಚಿರತೆಗಳಿವೆ ಹೇಳಬಲ್ಲಿರಾ? ನಿಮ್ಮ ಕಣ್ಣಿಗೆ ಸವಾಲೊಡ್ಡುವ ಚಿತ್ರ

ರೆಂಬೆಯೊಂದರ ಮೇಲೆ ಆರಾಮಾಗಿ ಕುಳಿತ ಚಿರತೆ ಮುಂದಿನ ಎರಡು ಕಾಲನ್ನು ಚಾಚಿಕೊಂಡು, ಹಿಂಬದಿ ಕಾಲುಗಳನ್ನು ಇಳಿಬಿಟ್ಟುಕೊಂಡು ವಿಶ್ರಾಂತಿ ಪಡೆಯುತ್ತಿದೆ. ಆದರೆ, ಇನ್ನೊಮ್ಮೆ ನೋಡಿದರೆ ಅದರ ಮುಖದ ಕೆಳಭಾಗದಲ್ಲಿ ಮತ್ತೊಂದು ಚಿರತೆಯ ಬಾಲವೂ ಕಾಣಿಸುತ್ತದೆ. ಹಾಗಂತ, ಅದರ ಮುಖ ಎಲ್ಲಿದೆ ಎಂದು ಹುಡುಕುವುದು ಮಾತ್ರ ಸುಲಭವಿಲ್ಲ.

Viral Photo: ಈ ಚಿತ್ರದಲ್ಲಿ ಎಷ್ಟು ಚಿರತೆಗಳಿವೆ ಹೇಳಬಲ್ಲಿರಾ? ನಿಮ್ಮ ಕಣ್ಣಿಗೆ ಸವಾಲೊಡ್ಡುವ ಚಿತ್ರ
ಈ ಚಿತ್ರದಲ್ಲಿರುವ ಚಿರತೆ ಮರಿಯನ್ನು ಹುಡುಕಿ
TV9 Web
| Edited By: |

Updated on: Jun 26, 2021 | 2:09 PM

Share

ಸಾಮಾಜಿಕ ಜಾಲತಾಣಗಳಲ್ಲಿ ಗಲಾಟೆ, ಘರ್ಷಣೆ, ಕಿತ್ತಾಟಗಳಿಗೆ ಸಂಬಂಧಿಸಿದ ಸುದ್ದಿ ಎಷ್ಟೇ ಇರಲಿ. ಅವೆಲ್ಲವನ್ನೂ ಮರೆಸಲು, ಮನಸ್ಸನ್ನು ಹಗುರಾಗಿಸಲು ಕೆಲವು ಚಿತ್ರಗಳು ಕಣ್ಣಿಗೆ ಬಿದ್ದರೆ ಸಾಕು. ಅದರಲ್ಲೂ ಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿದ ಸುದ್ದಿಗಳೇನಾದರೂ ಇದ್ದರಂತೂ ಅವು ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತವೆ. ಆ ಪೈಕಿ ಕೆಲ ಛಾಯಾಗ್ರಾಹಕರು ತೆಗೆಯುವ ಅದ್ಭುತ ಚಿತ್ರಗಳು ಮನಸ್ಸಿಗೆ ಮುದ ನೀಡುವ ಜತೆಗೆ ತಲೆಗೆ ಹುಳ ಬಿಟ್ಟು ಕಣ್ಣು, ಮೆದುಳಿಗೆ ಕೆಲಸವನ್ನೂ ಕೊಡುತ್ತವೆ. ನಿಮ್ಮ ಕಣ್ಣು ಎಷ್ಟೇ ಸೂಕ್ಷ್ಮ ಎಂದುಕೊಂಡರೂ ಕೆಲವು ಚಿತ್ರಗಳು ಭಾರೀ ಆಟವಾಡಿಸಿಬಿಡುತ್ತವೆ. ಇದೀಗ ಅಂಥದ್ದೇ ಒಂದು ವೈರಲ್​ ಚಿತ್ರವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರವೀಣ್ ಕಾಸ್ವಾನ್​ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಈ ಚಿತ್ರ ಎಲ್ಲರ ದೃಷ್ಟಿ ಕದ್ದಿದೆ. ಮರದ ಮೇಲೆ ಚಿರತೆಯೊಂದು ಕಾಲು ಚಾಚಿಕೊಂಡು ಕುಳಿತ ಚಿತ್ರವನ್ನು ಹಂಚಿಕೊಂಡ ಅವರು ಇದರಲ್ಲಿ ಎಷ್ಟು ಚಿರತೆಗಳಿವೆ ಎಂದು ಕೇಳಿದ್ದಾರೆ. ಮೋಹನ್​ ಥಾಮಸ್ ಎಂಬುವವರ ಟ್ವೀಟನ್ನು ರೀಟ್ವೀಟ್ ಮಾಡಿದ ಪ್ರವೀಣ್ ಕುಮಾರ್ ತಮ್ಮ ಹಿಂಬಾಲಕರಿಗೆ ಈ ಪ್ರಶ್ನೆಯನ್ನು ಎಸೆದಿದ್ದಾರೆ.

ಅಂದಹಾಗೆ, ಆ ಚಿತ್ರವನ್ನು ತಕ್ಷಣ ನೋಡಿದರೆ ಕೇವಲ ಒಂದೇ ಚಿರತೆ ಕಣ್ಣಿಗೆ ಬೀಳುತ್ತದೆ. ಹಬ್ಬಿದ ರೆಂಬೆಯೊಂದರ ಮೇಲೆ ಆರಾಮಾಗಿ ಕುಳಿತ ಚಿರತೆ ಮುಂದಿನ ಎರಡು ಕಾಲನ್ನು ಚಾಚಿಕೊಂಡು, ಹಿಂಬದಿ ಕಾಲುಗಳನ್ನು ಇಳಿಬಿಟ್ಟುಕೊಂಡು ವಿಶ್ರಾಂತಿ ಪಡೆಯುತ್ತಿದೆ. ಆದರೆ, ಇನ್ನೊಮ್ಮೆ ನೋಡಿದರೆ ಅದರ ಮುಖದ ಕೆಳಭಾಗದಲ್ಲಿ ಮತ್ತೊಂದು ಚಿರತೆಯ ಬಾಲವೂ ಕಾಣಿಸುತ್ತದೆ. ಹಾಗಂತ, ಅದರ ಮುಖ ಎಲ್ಲಿದೆ ಎಂದು ಹುಡುಕುವುದು ಮಾತ್ರ ಸುಲಭವಿಲ್ಲ.

ಅಸಲಿಗೆ ಆ ಮನಮೋಹಕ ಚಿತ್ರದಲ್ಲಿ ತಾಯಿ ಚಿರತೆಯ ಜತೆಗೆ ಮರದ ಮೇಲೆ ಮರಿಯೂ ಕುಳಿತುಕೊಂಡಿದೆ. ಅತ್ಯಂತ ಸೂಕ್ಷ್ಮವಾಗಿ ದೃಷ್ಟಿ ನೆಟ್ಟರೆ ಮಾತ್ರ ಅದನ್ನು ಪತ್ತೆಹಚ್ಚಬಹುದು. ಮರದ ತೊಗಟೆಯ ಬಣ್ಣ ಹಾಗೂ ಚಿರತೆ ಮರಿಯ ಮುಖದ ಬಣ್ಣಕ್ಕೆ ಸಾಮ್ಯತೆ ಇರುವ ಕಾರಣ ಅದು ಅಷ್ಟು ಸುಲಭಕ್ಕೆ ಕಣ್ಣಿಗೆ ಬೀಳದೆ ಆಟವಾಡಿಸುತ್ತದೆ. ಬೇಕಿದ್ದರೆ ನೀವು ಇನ್ನೊಮ್ಮೆ ಆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.

ಇಷ್ಟಾದರೂ ಅದು ನಿಮ್ಮ ಕಣ್ಣಿಗೆ ಬಿದ್ದಿಲ್ಲವೆಂದರೆ ಇದು ನಿಜಕ್ಕೂ ನಿಮ್ಮ ದೃಷ್ಟಿಗೆ ದೊಡ್ಡ ಸವಾಲೇ ಸರಿ. ಪ್ರಕೃತಿ ತನ್ನಲ್ಲಿನ ಪ್ರಾಣಿಗಳಿಗೆ ಸ್ವಾಭಾವಿಕ ರಕ್ಷಣೆ ಕಲ್ಪಿಸಲು, ಆಹಾರ ಪತ್ತೆಗೆ ಅನುಕೂಲ ಮಾಡಿಕೊಡಲು ಹೇಗೆಲ್ಲಾ ಸಹಕಾರ ಕೊಡುತ್ತದೆ ಎನ್ನುವುದಕ್ಕೆ ಈ ಚಿತ್ರವೊಂದು ಸಾಕ್ಷಿ. ಒಂದುವೇಳೆ ಎಷ್ಟು ಹೊತ್ತು ಹುಡುಕಿದರೂ ನಿಮಗೆ ಚಿರತೆ ಮರಿ ಕಂಡಿಲ್ಲವೆಂದರೆ ಕೆಳಗಿನ ಚಿತ್ರದಲ್ಲಿ ಅದನ್ನು ನೋಡಬಹುದು.

ಇದನ್ನೂ ಓದಿ: ಗುಜರಾತ್​ನ ನರ್ಮದಾ ನದಿಯಲ್ಲಿ ಮೊಸಳೆಗಳಿಗೆ ಆಹಾರವಾದ ವ್ಯಕ್ತಿಯ ಶವ: ವಿಡಿಯೋ ವೈರಲ್ 

ಟೀ ಎಸ್ಟೇಟ್​ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ;​ ವಿಡಿಯೋ ವೈರಲ್

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ