ಏರ್ ಇಂಡಿಯಾ ವಿಮಾನದಲ್ಲಿ ಏಕಾಂಗಿ ಪ್ರಯಾಣ; ಮಹಾರಾಜನಂತೆ ಅನಿಸಿತು ಎಂದು ಅನುಭವ ಹಂಚಿಕೊಂಡ ವ್ಯಕ್ತಿ!
ಇದೊಂದು ಜೀವನದಲ್ಲೇ ಮೊದಲ ಮತ್ತು ಬಹುಶಃ ಕೊನೆಯ ಅನುಭವ. ಲೈಫ್ ಟೈಮ್ ಎಕ್ಸ್ಪೀರಿಯನ್ಸ್ ಎಂದು ಹೇಳಬಹುದು ಎಂದು ಹೇಳಿದ್ದಾರೆ. ಬಳಿಕ, ನಿಮಗೆ ಇಂತದ್ದೇ ಅವಕಾಶ ಇನ್ನೊಮ್ಮೆ ಸಿಕ್ಕಿದರೆ ನೀವು ಏಕಾಂಗಿಯಾಗಿ ವಿಮಾನಯಾನ ಮಾಡುತ್ತೀರಾ ಎಂದು ಕೇಳಿದಾಗ, ಇಲ್ಲ ಎಂದು ಉತ್ತರಿಸಿದ್ದಾರೆ.
ನಾವೆಲ್ಲರೂ ವಿಶೇಷ ಆತಿಥ್ಯವನ್ನು ಖಂಡಿತಾ ಇಷ್ಟಪಡುತ್ತೇವೆ. ನಮ್ಮನ್ನು ವಿಜೃಂಭಣೆಯಿಂದ ಸತ್ಕರಿಸಿದರೆ ನಾವು ಬೇಡ ಅನ್ನುತ್ತೇವೆಯೇ? ನಮಗೆ ಖುಷಿ ಆಗಿಯೇ ಆಗುತ್ತದೆ. ಅಂತಾದ್ದರಲ್ಲಿ, ಒಂದು ಇಡೀ ವಿಮಾನದಲ್ಲಿ ನೀವೊಬ್ಬರೇ ಇದ್ದೀರಿ ಅಂತಾದರೆ ಹೇಗಾಗಬಹದು! ನಿಮಗೊಬ್ಬರಿಗೇ ವಿಮಾನ. ನೀವು ಏಕೈಕ ಪ್ರಯಾಣಿಕರು. ನಿಮ್ಮನ್ನು ಹೊತ್ತು ವಿಮಾನ ಹಾರುತ್ತದೆ. ಹೌದು. ಯುಎಇ ಮೂಲದ ಬ್ಯುಸಿನೆಸ್ಮ್ಯಾನ್ ಒಬ್ಬರಿಗೆ ಇದೇ ಪರಿಸ್ಥಿತಿ ಎದುರಾಗಿದೆ. ಅಮೃತಸರದಿಂದ ದುಬೈಗೆ ಅವರು ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಒಬ್ಬರೇ ಪ್ರಯಾಣಿಸಿದ್ದಾರೆ.
ಬ್ಯುಸಿನೆಸ್ಮ್ಯಾನ್ ಹಾಗೂ ಫಿಲಾಂತ್ರಫಿಸ್ಟ್ ಆಗಿರುವ ಎಸ್.ಪಿ ಸಿಂಗ್ ಒಬೆರಾಯ್ ಎಂಬವರು ಬುಧವಾರ ಅಮೃತಸರದಿಂದ ದುಬೈಗೆ ಪ್ರಯಾಣಿಸಿದ್ದಾರೆ. ಆ ವಿಮಾನದಲ್ಲಿ ತಾವೊಬ್ಬರೇ ಪ್ರಯಾಣಿಕ ಎಂದು ಅವರು ಟಿಕೆಟ್ ಬುಕ್ ಮಾಡಿ, ವಿಮಾನಯಾನಕ್ಕೆ ಸಿದ್ಧರಾದಮೇಲೆಯೇ ಅವರಿಗೆ ತಿಳಿದುಬಂದಿದೆ. ಈ ವಿಶೇಷ ಅನುಭವವನ್ನು ಎಸ್.ಪಿ. ಸಿಂಗ್ ಹಂಚಿಕೊಂಡಿದ್ದಾರೆ.
ವಿಮಾನದಲ್ಲಿ ಒಬ್ಬನೇ ಪ್ರಯಾಣಿಸಿದ ಬಗ್ಗೆ ಹೇಳಿರುವ ಅವರು, ಮಹಾರಾಜನಂತೆ ಅನುಭವ ಆಯ್ತು. ಮೂರು ಗಂಟೆಗಳ ವಿಮಾನಯಾನವನ್ನು ಬಹಳಷ್ಟು ಎಂಜಾಯ್ ಮಾಡಿದೆ. ಏರ್ ಇಂಡಿಯಾ, ಎಐ-929 ವಿಮಾನದಲ್ಲಿ ಜೂನ್ 23ರಂದು ಬೆಳಗ್ಗೆ ಸುಮಾರು 4 ಗಂಟೆಗೆ ವಿಮಾನಯಾನ ಮಾಡಿದೆ. ಇಡೀ ವಿಮಾನದಲ್ಲಿ ನಾನೊಬ್ಬನೇ ಇದ್ದೆ. ನನಗೆ ಅತ್ಯುತ್ತಮ ಸೇವೆ ಲಭ್ಯವಾಗಿದೆ. ವಿಮಾನದ ಸಿಬ್ಬಂದಿ ಹಾಗೂ ಪೈಲಟ್ಗಳ ಜೊತೆಗೆ ಫೋಟೊ ತೆಗೆಸಿಕೊಂಡೆ ಎಂದು ಎಎನ್ಐ ಜೊತೆ ತಮ್ಮ ಅನುಭವ ವಿವರಿಸಿದ್ದಾರೆ.
ಇದೊಂದು ಜೀವನದಲ್ಲೇ ಮೊದಲ ಮತ್ತು ಬಹುಶಃ ಕೊನೆಯ ಅನುಭವ. ಲೈಫ್ ಟೈಮ್ ಎಕ್ಸ್ಪೀರಿಯನ್ಸ್ ಎಂದು ಹೇಳಬಹುದು ಎಂದು ಹೇಳಿದ್ದಾರೆ. ಬಳಿಕ, ನಿಮಗೆ ಇಂತದ್ದೇ ಅವಕಾಶ ಇನ್ನೊಮ್ಮೆ ಸಿಕ್ಕಿದರೆ ನೀವು ಏಕಾಂಗಿಯಾಗಿ ವಿಮಾನಯಾನ ಮಾಡುತ್ತೀರಾ ಎಂದು ಕೇಳಿದಾಗ, ಇಲ್ಲ ಎಂದು ಉತ್ತರಿಸಿದ್ದಾರೆ.
ಏಕಾಂಗಿಯಾಗಿ ಪ್ರಯಾಣಿಸುವ ವೇಳೆ, ವಿಮಾನದಲ್ಲಿ ಎಷ್ಟು ಸೀಟ್ಗಳಿವೆ, ಎಷ್ಟು ಕಿಟಕಿಗಳಿವೆ ಎಂದೂ ಲೆಕ್ಕ ಹಾಕಿದ್ದಿದೆ. ಸಮಯ ಕಳೆಯಲು ಹಾಗೆಲ್ಲಾ ಮಾಡಿದ್ದೇನೆ. ಮುಂದಿನ ಬಾರಿ ಒಬ್ಬಂಟಿಯಾಗಿ ಪ್ರಯಾಣಿಸುವ ಅವಕಾಶ ಸಿಕ್ಕರೆ ಬೇಡ ಅನ್ನುತ್ತೇನೆ. ಏಕೆಂದರೆ ಇದು ತುಂಬಾ ಬೋರಿಂಗ್ ಆಗಿರುತ್ತದೆ. ಜೀವನದಲ್ಲಿ ಒಮ್ಮೆ ಈ ಅನುಭವ ಪಡೆಯಬಹುದಷ್ಟೇ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಏಳು ಪೌಂಡ್ ತೂಕ ಇಳಿಸಿಕೊಂಡ್ರೆ ಚೆನ್ನಾಗಿರುತ್ತೆ ಎಂದವನಿಗೆ ಖಡಕ್ ಉತ್ತರ ಕೊಟ್ಟ ಯುವತಿ!