AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳು ಪೌಂಡ್ ತೂಕ ಇಳಿಸಿಕೊಂಡ್ರೆ ಚೆನ್ನಾಗಿರುತ್ತೆ ಎಂದವನಿಗೆ ಖಡಕ್ ಉತ್ತರ ಕೊಟ್ಟ ಯುವತಿ!

ಒಬ್ಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಪ್ರತಿಕ್ರಿಯಿಸುತ್ತಾ, ನೀವು ದೇಹದ ತೂಕ ಕಡಿಮೆ ಮಾಡಿದರೆ ಪರ್ಫೆಕ್ಟ್ ಪರ್ಸನ್ ಆಗುತ್ತಿರಿ ಎಂದಿದ್ದಾನೆ. ಅದಕ್ಕೂ ಮೀರಿ, ಸುಮಾರು ಏಳು ಪೌಂಡ್ ಕಳೆದುಕೊಂಡರೆ ನೀವು ಸರಿಯಾಗಿ ಕಾಣುತ್ತೀರಿ ಎಂದು ಹೇಳಿದ್ದಾನೆ. ಅದಕ್ಕೆ ಯುವತಿಯು ವ್ಯಂಗ್ಯವಾಗಿ ಉತ್ತರಿಸಿದ್ದಾಳೆ.

ಏಳು ಪೌಂಡ್ ತೂಕ ಇಳಿಸಿಕೊಂಡ್ರೆ ಚೆನ್ನಾಗಿರುತ್ತೆ ಎಂದವನಿಗೆ ಖಡಕ್ ಉತ್ತರ ಕೊಟ್ಟ ಯುವತಿ!
ವೈರಲ್ ಪೋಸ್ಟ್
TV9 Web
| Edited By: |

Updated on: Jun 25, 2021 | 7:49 PM

Share

ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವುದು ಇದ್ದೇ ಇರುತ್ತದೆ. ಕೆಲವೊಮ್ಮೆ ಅದೇ ಗುಣ ಅತಿರೇಕಕ್ಕೆ ಹೋಗುವುದೂ ಆಗುತ್ತದೆ. ಪರಿಚಯದ ಗೆಳೆಯರನ್ನು, ಆಪ್ತರನ್ನು ಕಿಚಾಯಿಸುವುದು ಒಂದು ವಿಧವಾದರೆ, ಅಪರಿಚಿತರ ಮೇಲೆ ಕಮೆಂಟ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅನಾವಶ್ಯಕ ಅಭಿಪ್ರಾಯ ತಿಳಿಸಲು ಹೋದರೆ, ಬೈಗುಳ ಕೇಳಬೇಕಾಗಿ ಬರುತ್ತದೆ. ಇಲ್ಲಿ ಅಂತದ್ದೇ ಒಂದು ಘಟನೆ ನಡೆದಿದೆ. ಮಹಿಳೆಯೊಬ್ಬಳು ಖಡಕ್ ಪ್ರತಿಕ್ರಿಯೆ ನೀಡಿದ್ದಾಳೆ.

ಒಬ್ಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಪ್ರತಿಕ್ರಿಯಿಸುತ್ತಾ, ನೀವು ದೇಹದ ತೂಕ ಕಡಿಮೆ ಮಾಡಿದರೆ ಪರ್ಫೆಕ್ಟ್ ಪರ್ಸನ್ ಆಗುತ್ತಿರಿ ಎಂದಿದ್ದಾನೆ. ಅದಕ್ಕೂ ಮೀರಿ, ಸುಮಾರು ಏಳು ಪೌಂಡ್ ಕಳೆದುಕೊಂಡರೆ ನೀವು ಸರಿಯಾಗಿ ಕಾಣುತ್ತೀರಿ ಎಂದು ಹೇಳಿದ್ದಾನೆ. ಅದಕ್ಕೆ ಯುವತಿಯು ವ್ಯಂಗ್ಯವಾಗಿ ಉತ್ತರಿಸಿದ್ದಾಳೆ.

ಕ್ಯಾಟಿ ಲೇಸಿ ಎಂಬಾಕೆ ಸಾಮಾಜಿಕ ಜಾಲತಾಣದಲ್ಲೇ ಆತನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ನೀವು ಏಳು ಪೌಂಡ್ ತೂಕ ಕಡಿಮೆ ಮಾಡಿಕೊಂಡರೆ ಪರ್ಫೆಕ್ಟ್ ಆಗಿರುತ್ತೀರಿ ಎಂದು ಆತ ಹೇಳಿದ್ದಾನೆ. ಮುಂದುವರಿದು ತನ್ನ ಮಾತು ತಪ್ಪಾಯ್ತು ಎಂದುಕೊಂಡ ಆತ, ಹೇಳಿಕೆ ತೇಪೆ ಹಚ್ಚಲು ಪ್ರಯತ್ನಿಸಿದ್ದಾನೆ. ನೀವು ತುಂಬಾ ಸುಂದರಾವಗಿದ್ದೀರ ಎಂದೂ ನಂತರ ಹೇಳಿದ್ದಾನೆ.

ಅದಕ್ಕೆ ಪ್ರತಿಯಾಗಿ ಆಕೆ ‘ಏನು?’ ಎಂಬ ಪ್ರಶ್ನೆಯಷ್ಟೇ ಮುಂದಿಟ್ಟಿದ್ದಾಳೆ. ಮುಜುಗರ ತಪ್ಪಿಸಿಕೊಳ್ಳಲು ಹೊರಟ ಆ ಯುವಕ ನಾನು ಪರ್ಸನಲ್ ಟ್ರೈನರ್ ಆಗಿದ್ದೇನೆ. ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಪ್ರತಿಕ್ರಿಯಿಸಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ಆಕೆ ಮೊನಚಾಗಿ ಮಾತನಾಡಿ, ಆತನನ್ನು ಕೆಡವಿ ಹಾಕಿದ್ದಾಳೆ. ನೀವು ಪರ್ಸನಲ್ ಟ್ರೈನರ್ ಆಗಿದ್ದು ಹೀಗೆಲ್ಲಾ ಮಾತನಾಡಲು ಅಧಿಕಾರ ಇದೆ ಎಂಬಂತೆ ಹೇಳುವ ಮೊದಲು ನಾನು ತಪ್ಪಾಗಿಯೇ ತಿಳಿದುಕೊಂಡಿದ್ದೆ ಎಂದಿದ್ದಾಳೆ.

ಏನಾಗುತ್ತಿದೆ ಎಂದೇ ಅರ್ಥಮಾಡಿಕೊಳ್ಳಲು ಆಗದೆ ಆತ, ಹೌದು ನಿಜ. ನಾವಿಬ್ಬರೂ ಒಂದೇ ಸ್ಥಿತಿಯಲ್ಲಿ ಇದ್ದೇವೆ ಎಂದು ಬರೆದುಕೊಂಡಿದ್ದಾನೆ. ಆಗ ಯುವತಿ ಆತನಿಗೆ ಖಡಕ್ ಆಗಿಯೇ ಉತ್ತರಿಸಿದ್ದಾಳೆ. ನೀನು ಬೇರೆಯದೇ ವ್ಯಕ್ತಿ ಆಗಿದ್ದರೆ ಚೆನ್ನಾಗಿತ್ತು. ಪರ್ಫೆಕ್ಟ್ ಆಗಿರುತ್ತಿತ್ತು ಎಂದು ಆತನ ಹೇಳಿಕೆಗಳನ್ನು ಸಂಪೂರ್ಣ ನಿರಾಕರಿಸಿದ್ದಾಳೆ.

ಅಷ್ಟಕ್ಕೇ ನಿಲ್ಲಿಸದೆ, ನಾನು ಥೆರಪಿಸ್ಟ್ ಆಗಿದ್ದೇನೆ. ನನಗೆ ವ್ಯಕ್ತಿಯ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಬರುತ್ತದೆ ಎಂದು ಹೇಳಿದ್ದಾಳೆ. ನಾನು ಇಲ್ಲಿ ಒಬ್ಬ ಹುಡುಗನನ್ನು ನೋಡಿದೆ ಎಂದು ಅಣಕವಾಡಿ ಬೈ ಅಂದಿದ್ದಾಳೆ. ಈ ಘಟನೆಯನ್ನು ನಿರ್ವಹಿಸಿದ ರೀತಿಗೆ ಲೇಸಿ ಎಂಬಾಕೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಆತ ಇನ್ನೆಂದೂ ಹೀಗೆ ಮಾತಾಡಬಾರದು ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ಟೀ ಎಸ್ಟೇಟ್​ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ;​ ವಿಡಿಯೋ ವೈರಲ್

ಯಾರೋ ಹಾದು ಹೋದಂತೆ ಅನ್ನಿಸುತ್ತಿದೆ! ನಿಜವಾಗಿಯೂ ದೆವ್ವ ಓಡಾಡುತ್ತಿದೆಯೇ? ವಿಡಿಯೋ ವೈರಲ್