ಯಾರೋ ಹಾದು ಹೋದಂತೆ ಅನ್ನಿಸುತ್ತಿದೆ! ನಿಜವಾಗಿಯೂ ದೆವ್ವ ಓಡಾಡುತ್ತಿದೆಯೇ? ವಿಡಿಯೋ ವೈರಲ್

ವಿಡಿಯೋದಲ್ಲಿ ಗಮನಿಸುವಂತೆ ಓರ್ವ ವ್ಯಕ್ತಿಯು ಮನೆಯ ಮೆಟ್ಟಿಲುಗಳನ್ನು ಹತ್ತುವಾಗ ವಿಡಿಯೋ ಮಾಡುತ್ತಿರುತ್ತಾನೆ. ಅದೇ ಸಂದರ್ಭದಲ್ಲಿ ಕತ್ತಲೆಯಾದ ಆ ಮನೆಯಲ್ಲಿ ಪಕ್ಕದಲ್ಲಿರುವ ಕಿಟಕಿಯಲ್ಲಿ ಯಾವುದೋ ಕಪ್ಪು ನೆರಳು ಹಾದು ಹೋಗುವಂತೆ ಭಾಸವಾಗುತ್ತದೆ.

ಯಾರೋ ಹಾದು ಹೋದಂತೆ ಅನ್ನಿಸುತ್ತಿದೆ! ನಿಜವಾಗಿಯೂ ದೆವ್ವ ಓಡಾಡುತ್ತಿದೆಯೇ? ವಿಡಿಯೋ ವೈರಲ್
ಯಾರೋ ಹಾದು ಹೋದಂತೆ ಅನ್ನಿಸುತ್ತಿದೆ!
Follow us
TV9 Web
| Updated By: shruti hegde

Updated on: Jun 25, 2021 | 11:53 AM

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋವೊಂದು ನೆಟ್ಟಿಗರ ನಿದ್ದೆಗೆಡಿಸಿದೆ. ಕ್ಯಾಮರಾದಲ್ಲಿ ದೆವ್ವ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ ಎಂದು ವಿಡಿಯೋ ಹಂಚಿಕೊಳ್ಳಲಾಗಿದ್ದು ಕೆಲವರಿಗೆ ಸಂಶಯ ಮೂಡಿಸಿದೆ. ಕೆಲವರು ಇದು ದೆವ್ವವೇ ಎಂದು ಪ್ರತಿಕ್ರಿಯೆ ನೀಡುತ್ತಿದ್ದರೆ, ಇನ್ನು ಕೆಲವರು ವನುಷ್ಯರ ನೆರಳು ಎಂದು ಉತ್ತರಿಸಿದ್ದಾರೆ.

ಸಾಮಾನ್ಯವಾಗಿ ಭೂತ ಬಂಗಲೆಗಳ ಹೆಸರನ್ನು ಕೇಳಿಯೇ ಇರ್ತೇವೆ. ಕೆಲವು ಸ್ಥಳಗಳು ನೋಡಲು ಭಯಂಕರ ಅನಿಸುತ್ತವೆ. ಅದು ಭೂತಗಳು ವಾಸಿಸುವ ಜಾಗ ಎಂದು ಹೇಳುತ್ತಾರೆ. ಅವರಿಗೆ ಅನುಭವ ಆಗಿರಲೂ ಬಹುದು. ಇಲ್ಲವೇ, ನಮ್ಮಂತೆಯೇ ಅವರೂ ಭಯಗೊಂಡು ಭೂತದ ಭಂಗಲೆ ಎಂದು ನಂಬಿರಬಹುದು. ಆದರೆ ಇಂತಹ ಮಾತುಗಳು ಒಂದು ಕ್ಷಣ ಭಯವನ್ನು ಹುಟ್ಟಿಸುವದಂತೂ ನಿಜ. ಕೆಲವು ಭೂತದ ವಿಷಯಗಳಂತೂ ಅಂತೆ-ಕಂತೆ ಅನ್ನುತ್ತಲೇ ಪ್ರಚಾರಕ್ಕೆ ಬಂದು ಬಿಡುತ್ತವೆ. ಯಾವುದು ಸತ್ಯ ಯಾವುದು ಮಿಥ್ಯ ಅನ್ನುವುದೇ ಹೆಚ್ಚು ಗೊಂದಲವನ್ನು ಸೃಷ್ಟಿ ಮಾಡುವಂಥದ್ದು.

ಕತ್ತಲೆಯಲ್ಲಿ ಹೆದರುವುದು ಸಾಮಾನ್ಯ. ನಮ್ಮ ನೆರಳನ್ನೇ ಕಂಡು ಹಲವು ಬಾರಿ ಹೆದರಿದ್ದೂ ಇದೆ. ಹೀಗಿರುವಾಗ ಮನೆಯ ಮೆಟ್ಟಿನ ಮೇಲೆ ಯಾರೋ ನಡೆದು ಹೋದಂತೆ ವಿಡಿಯೋದಲ್ಲಿ ಗೋಚರವಾಗುತ್ತಿದೆ. ಕೆಲವರು ಅದು ದೆವ್ವವೇ? ಎಂದು ಪ್ರಶ್ನಿಸಿದರೆ ಇನ್ನು ಕೆಲವರು ಮನುಷ್ಯರ ನೆರಳು ಅದು ಎಂದು ಹೇಳುತ್ತಿದ್ದಾರೆ.

ವಿಡಿಯೋದಲ್ಲಿ ಗಮನಿಸುವಂತೆ ಓರ್ವ ವ್ಯಕ್ತಿಯು ಮನೆಯ ಮೆಟ್ಟಿಲುಗಳನ್ನು ಹತ್ತುವಾಗ ವಿಡಿಯೋ ಮಾಡುತ್ತಿರುತ್ತಾನೆ. ಅದೇ ಸಂದರ್ಭದಲ್ಲಿ ಕತ್ತಲೆಯಾದ ಆ ಮನೆಯಲ್ಲಿ ಪಕ್ಕದಲ್ಲಿರುವ ಕಿಟಕಿಯಲ್ಲಿ ಯಾವುದೋ ಕಪ್ಪು ನೆರಳು ಹಾದು ಹೋಗುವಂತೆ ಭಾಸವಾಗುತ್ತದೆ. ಭಯಾನಕ ಕ್ಷಣವಿದು ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯವನ್ನು ಆಂಗ್ಲ ಮಾಧ್ಯಮ ದಿ ಸನ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಕಟ್ಟಡವನ್ನು ನೋಡಲು ಓರ್ವರು ಬಂದಾಗ ಈ ವಿಡಿಯೋವನ್ನು ಮಾಡಲಾಗಿದೆ.

ಇದನ್ನೂ ಓದಿ:

ನಡುರಸ್ತೆಯಲ್ಲಿ ಯುವತಿಯ ತಲೆಗೂದಲು ಹಿಡಿದು ದೆವ್ವ ಬಿಡಿಸಿದ ಜನ

ಆರ್​ಟಿ ನಗರದಿಂದ ಬಂದ ದೆವ್ವಗಳು.. ಮತ್ತಿಕೆರೆಯಲ್ಲಿ ಹುಚ್ಚಾಟ: ಆತಂಕ, ಅರೆಸ್ಟ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ