ಆರ್​ಟಿ ನಗರದಿಂದ ಬಂದ ದೆವ್ವಗಳು.. ಮತ್ತಿಕೆರೆಯಲ್ಲಿ ಹುಚ್ಚಾಟ: ಆತಂಕ, ಅರೆಸ್ಟ್

sadhu srinath

sadhu srinath |

Updated on: Nov 11, 2019 | 2:59 PM

ಬೆಂಗಳೂರು: ಮತ್ತಿಕೆರೆಯ ಬಳಿ ಯುವಕರ ಗುಂಪೊಂದು ನಡುರಾತ್ರಿ ದೆವ್ವಗಳಂತೆ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದು, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ನಡುರಾತ್ರಿ 2 ಗಂಟೆ ಸುಮಾರಿಗೆ ಡೆವಿಲ್ ಮುಖವಾಡ ಧರಿಸಿ ಯುವಕರು ಹುಚ್ಚಾಟ ನಡೆಸಿ, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಮತ್ತಿಕೆರೆ ಡೆವಿಲ್ಸ್​ ಅರೆಸ್ಟ್​: ಯಶವಂತಪುರ ಠಾಣಾ ಪೊಲೀಸರು ಪ್ರಾಂಕ್ ಮಾಡುತ್ತಿದ್ದ 7 ಜನ ಯುವಕರನ್ನ ವಶಕ್ಕೆ ಪಡೆದಿದ್ದಾರೆ.ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮೆರಾ, ಸಾಮಗ್ರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ದೆವ್ವಗಳು ಆರ್​ಟಿ ನಗರದಿಂದ ಬಂದವು: ಮನೋರಂಜನೆಗಾಗಿ […]

ಆರ್​ಟಿ ನಗರದಿಂದ ಬಂದ ದೆವ್ವಗಳು.. ಮತ್ತಿಕೆರೆಯಲ್ಲಿ ಹುಚ್ಚಾಟ: ಆತಂಕ, ಅರೆಸ್ಟ್

ಬೆಂಗಳೂರು: ಮತ್ತಿಕೆರೆಯ ಬಳಿ ಯುವಕರ ಗುಂಪೊಂದು ನಡುರಾತ್ರಿ ದೆವ್ವಗಳಂತೆ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದು, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ.

ನಡುರಾತ್ರಿ 2 ಗಂಟೆ ಸುಮಾರಿಗೆ ಡೆವಿಲ್ ಮುಖವಾಡ ಧರಿಸಿ ಯುವಕರು ಹುಚ್ಚಾಟ ನಡೆಸಿ, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ.

ಮತ್ತಿಕೆರೆ ಡೆವಿಲ್ಸ್​ ಅರೆಸ್ಟ್​: ಯಶವಂತಪುರ ಠಾಣಾ ಪೊಲೀಸರು ಪ್ರಾಂಕ್ ಮಾಡುತ್ತಿದ್ದ 7 ಜನ ಯುವಕರನ್ನ ವಶಕ್ಕೆ ಪಡೆದಿದ್ದಾರೆ.ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮೆರಾ, ಸಾಮಗ್ರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ದೆವ್ವಗಳು ಆರ್​ಟಿ ನಗರದಿಂದ ಬಂದವು: ಮನೋರಂಜನೆಗಾಗಿ ಪ್ರಾಂಕ್ ಮಾಡ್ತಿದ್ದ ಯುವಕರು, ಕೂಕೀ ಪೀಡಿಯಾ ಎಂಬ ಯೂಟ್ಯೂಬ್ ಪೇಜ್ ಹೊಂದಿದ್ದರು. ಹೀಗಾಗಿ ಇಂತಹ ಸಾಹಸಕ್ಕೆ ಮುಂದಾಗಿದ್ದರು. ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಪ್ರಾಂಕ್ ಮಾಡಿ ತೆರಳಿದ್ದರು. ಆದರೆ ಓರ್ವ ಯುವಕ ಮಾತ್ರ ಸ್ಥಳದಲ್ಲಿ ಬಿಟ್ಟಿದ್ದ ಸ್ಪೀಕರ್ ಹುಡುಕುತ್ತಿದ್ದ ಈ ವೇಳೆ ಪೊಲೀಸರು ಅವನನ್ನು ವಶಕ್ಕೆ ಪಡೆದು ಇನ್ನುಳಿದ 7 ಜನರನ್ನ ಕರೆಸಿಕೊಂಡಿದ್ದಾರೆ. ಶಾನ್ ಮಲಿಕ್ , ನವೀದ್, ಸಜಿಲ್ ಮಹಮದ್, ಮಹಮದ್ ಅಕ್ಯೂಬ್, ಸಾಕೀಬ್, ಸೈಯದ್ ನಬೀಲ್ ಹಾಗೂ ಯೂಸುಫ್ ಅಹಮದ್ ಬಂಧಿತರು ಇವರು ಇಂಜಿನಿಯರಿಂಗ್, ಬಿಬಿಎಂ ವಿದ್ಯಾರ್ಥಿಗಳಾಗಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada