ಉಪ ಚುನಾವಣೆಗೆ ವಾಟಾಳ್ ನಾಗರಾಜ್ ಸಿದ್ಧ, ಎಲ್ಲಿಂದ ಗೊತ್ತಾ?
ಮೈಸೂರು: ಡಿಸೆಂಬರ್ 5ರಂದು ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ವಾಟಾಳ್ ನಾಗರಾಜ್ ಅವರಿಗೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರಂತೆ. ನಿಮ್ಮಂತಹವರು ವಿಧಾನಸಭೆಯಲ್ಲಿ ಇರಬೇಕು, ಸ್ಪರ್ಧೆ ಮಾಡಿ ಎಂದು ಕನ್ನಡಪರ ಹೋರಾಟಗಾರರೊಬ್ಬರು ವಾಟಾಳ್ ನಾಗರಾಜ್ ಅವರನ್ನು ಉಪಚುನಾವಣೆಗೆ ಸ್ಪರ್ಧಿಸಲು ಒತ್ತಾಯ ಮಾಡಿದ್ದಾರಂತೆ. ಆದರೆ ಈಗ ರಾಜಕೀಯ ಹೊಲಸು ವ್ಯಾಪಾರವಾಗಿದೆ. ನಾಮಪತ್ರ ಸಲ್ಲಿಕೆಯ ಕೊನೇ ದಿನದವರೆಗೂ ಚಿಂತನೆ ಮಾಡಿ, ಕೊನೇ ದಿನ ಬೇಕಾದರೆ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ಮೈಸೂರಿನಲ್ಲಿ […]

ಮೈಸೂರು: ಡಿಸೆಂಬರ್ 5ರಂದು ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ವಾಟಾಳ್ ನಾಗರಾಜ್ ಅವರಿಗೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರಂತೆ.
ನಿಮ್ಮಂತಹವರು ವಿಧಾನಸಭೆಯಲ್ಲಿ ಇರಬೇಕು, ಸ್ಪರ್ಧೆ ಮಾಡಿ ಎಂದು ಕನ್ನಡಪರ ಹೋರಾಟಗಾರರೊಬ್ಬರು ವಾಟಾಳ್ ನಾಗರಾಜ್ ಅವರನ್ನು ಉಪಚುನಾವಣೆಗೆ ಸ್ಪರ್ಧಿಸಲು ಒತ್ತಾಯ ಮಾಡಿದ್ದಾರಂತೆ. ಆದರೆ ಈಗ ರಾಜಕೀಯ ಹೊಲಸು ವ್ಯಾಪಾರವಾಗಿದೆ. ನಾಮಪತ್ರ ಸಲ್ಲಿಕೆಯ ಕೊನೇ ದಿನದವರೆಗೂ ಚಿಂತನೆ ಮಾಡಿ, ಕೊನೇ ದಿನ ಬೇಕಾದರೆ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಹೇಳಿದ್ದಾರೆ.
Published On - 3:24 pm, Mon, 11 November 19