ಆರ್ಡರ್ ಬಿಲ್ಗಿಂತ 400 ಪಟ್ಟು ಹೆಚ್ಚು ಟಿಪ್ಸ್ ನೀಡಿದ ಗ್ರಾಹಕ! ರೆಸ್ಟೋರೆಂಟ್ ಸಿಬ್ಬಂದಿಯಿಂದ ಶ್ಲಾಘನೆ
ಇದು ಕ್ರೆಡಿಟ್ ಕಾರ್ಡ್ನ ರೂಪದಲ್ಲಿತ್ತು. ಆದ್ದರಿಂದ ಹಣ ಎಷ್ಟಿದೆ ಎಂಬುದನ್ನು ಕೆಲಸಗಾರ ಮೊದಲು ನೋಡಿರಲಿಲ್ಲ. ಹೋಟೆಲ್ ಮಾಲೀಕನಿಗೆ ಬಿಲ್ ಮತ್ತು ಹಣವನ್ನು ಕೊಟ್ಟಾಗ ಆಶ್ಚರ್ಯರಾದರು.
ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಲಾಕ್ ಆಗಿದ್ದ ಅಂಗಡಿಗಳೆಲ್ಲಾ ತೆರೆಯಲ್ಪಡುತ್ತಿವೆ. ರೆಸ್ಟೋರೆಂಟ್ಗಳೆಲ್ಲ ಆನ್ಲೈನ್ ಡೆಲಿವರಿ ಮೂಲಕ ಮನೆ ಬಾಗಿಲಿಗೇ ತಿಂಡಿಗಳನ್ನು ಸಪ್ಲೈ ಮಾಡುತ್ತಿವೆ. ಹೀಗಿರುವಾಗ ತಾವು ಖರೀದಿಸಿದ ತಿಂಡಿಯ ಬಿಲ್ಗಿಂತ 400 ಪಟ್ಟು ಹೆಚ್ಚು ಹಣ ನೀಡಿದ ವ್ಯಕ್ತಿಯೋರ್ವರ ಮನೋಭಾವವನ್ನು ಮೆಚ್ಚಿ ನೆಟ್ಟಿಗರು ಪ್ರಶಂಸೆ ನೀಡುತ್ತಿದ್ದಾರೆ. ಜತೆಗೆ ರೆಸ್ಟೋರೆಂಟ್ ಸಿಬ್ಬಂದಿಯೂ ಸಹ ಕೃತಜ್ಞತೆಯನ್ನುಸಲ್ಲಿಸಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲೂ ಸಹ ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುವವರು, ಜನರು ಆನ್ಲೈನ್ ಮೂಲಕ ಬುಕ್ ಮಾಡಿದ ತಿಂಡಿಗಳನ್ನು ಮನೆಬಾಗಿಲಿಗೆ ತಂದು ಕೊಟ್ಟು ಹೋಗುತ್ತಿದ್ದಾರೆ. ಈ ಸಮಯದಲ್ಲಿ ಕೆಲಸಗಾರರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಇಲ್ಲೋರ್ವರು ತಾವು ಬಿಲ್ ಮಾಡಿದ ಹಣಕ್ಕಿಂತ 400 ಪಟ್ಟು ಹೆಚ್ಚು ಹಣವನ್ನು ನೀಡಿದ್ದಾರೆ. ಘಟನೆ ಅಮೆರಿಕದಲ್ಲಿ ನಡೆದಿದೆ.
ಗ್ರಾಹಕರೋರ್ವರು ನ್ಯೂ ಹ್ಯಾಂಪ್ಶೈರ್ನ ಲಂಡನ್ಡೇರಿಯ ಸ್ಟಂಬಲ್ ಇನ್ಬಾರ್ ಮತ್ತು ಗ್ರಿಲ್ನಲ್ಲಿ ಹುರಿದ ಉಪ್ಪಿನಕಾಯಿ, ಚಿಲಿ ಡಾಗ್ಸ್ ಮತ್ತು ಕೆಲವು ವಿಧದ ಜ್ಯೂಸ್ ಹಾಗೂ ಪಾನೀಯಗಳನ್ನು ಆರ್ಡ್ ಮಾಡಿದ್ದರು. ಇದರ ಮೊತ್ತ ಒಟ್ಟು 2,812.44 ರೂಪಾಯಿ ಆಗಿತ್ತು. ಆದರೆ ಗ್ರಾಹಕರು ಒಟ್ಟು 11,869,936 ರೂಪಯಿಯನ್ನು ನೀಡಿದ್ದಾರೆ. ರೆಸ್ಟೋರೆಂಟ್ನವರು ಕೇಳಿದರೆ, ನಿಮಗೆ ಸಹಾಯ ಮಾಡಲೆಂದೇ ಕಳುಹಿಸಿದ್ದಾಗಿ ಹೇಳಿದ್ದಾರೆ. ಇದೀಗ ಜನರು ಇವರನ್ನು ಮೆಚ್ಚಿಕೊಂಡಿದ್ದು ಕೊವಿಡ್ ಸಮಯದಲ್ಲಿ ಸಹಾಯ ಮಾಡಿದ್ದಕ್ಕಾಗಿ ಶ್ಲಾಘಿಸಿದ್ದಾರೆ.
ಇದು ಕ್ರೆಡಿಟ್ ಕಾರ್ಡ್ನ ರೂಪದಲ್ಲಿತ್ತು. ಆದ್ದರಿಂದ ಹಣ ಎಷ್ಟಿದೆ ಎಂಬುದನ್ನು ಕೆಲಸಗಾರ ಮೊದಲು ನೋಡಿರಲಿಲ್ಲ. ಹೋಟೆಲ್ ಮಾಲೀಕನಿಗೆ ಬಿಲ್ ಮತ್ತು ಹಣವನ್ನು ಕೊಟ್ಟಾಗ ಆಶ್ಚರ್ಯರಾದರು. ಮತ್ತು ರಶೀದಿಯನ್ನು ಹಿಂತಿರುಗಿಸಿದಾಗ ಇದು ನಿಮಗೆಂದೇ ಕೊಟ್ಟ ಟಿಪ್ಸ್. ಕಷ್ಟ ಕಾಲದಲ್ಲಿ ನೀವು ಕಷ್ಪಟ್ಟು ಕೆಲಸ ಮಾಡುತ್ತಿದ್ದೀರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ ವೇಳೆ ಅಷ್ಟೂ ಹಣವನ್ನು ಖಾಲಿ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಇವರ ಈ ಮನೋಭಾವಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ:
Viral Video : ಆಹಾರ ಹುಡುಕುತ್ತಾ ಬಂದ ಆನೆ ಗೋಡೆಯಿಂದ ಮನೆಯೊಳಗೆ ನುಗಿತ್ತು!
Viral Video: ಸೀರೆಯುಟ್ಟು ಸ್ಟೈಲಾಗಿ ಸೊಂಟ ಬಳುಕಿಸುತ್ತಿರುವ ಮಹಿಳೆ ನೋಡಿ ನೆಟ್ಟಿಗರು ಫಿದಾ!