Viral Video: ಸೀರೆಯುಟ್ಟು ಸ್ಟೈಲಾಗಿ ಸೊಂಟ ಬಳುಕಿಸುತ್ತಿರುವ ಮಹಿಳೆ ನೋಡಿ ನೆಟ್ಟಿಗರು ಫಿದಾ!
ಈ ವಿಡಿಯೋ ನೋಡಿದ ನೆಟ್ಟಿಗರೋರ್ವರು, ಓಹ್.. ಮೈಂಡ್ ಬ್ಲೋಯಿಂಗ್..! ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಸಕತ್ ಡಾನ್ಸ್ ಮಾಡ್ತೀರಾ ಎಂದು ಶ್ಲಾಘಿಸಿದಾರೆ.
ಪ್ರತಿ ನಿತ್ಯವೂ ನೃತ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತದೆ. ತಾಳಕ್ಕೆ ತಕ್ಕಂತೆ ಹೆಜ್ಜೆಯಿಡ ಬೇಕು, ಜತೆಗೆ ಹಾಡಿನ ಭಾವಕ್ಕೆ ತಕ್ಕಂತೆ ಮುಖದಲ್ಲಿ ಭಾವನೆ ವ್ಯಕ್ತವಾಗಬೇಕು.. ಜಾನಪದದಿಂದ ಹಿಡಿದು ಬ್ರೇಕ್ ಡಾನ್ಸ್ವರೆಗೆ ವಿವಿಧ ತರಹದ ಡಾನ್ಸ್ಗಳು ಜನಪ್ರಿಯತೆ ಪಡೆದಿದೆ. ಇದೀಗ ಮಹಿಳೆಯು ಡಿಫರೆಂಟ್ ಮ್ಯೂಸಿಕ್ ಜತೆ ಸಕತ್ ಆಗಿ ಸ್ಟೆಪ್ ಹಾಕಿದ ವಿಡಿಯೋ ನೋಡುಗರಿಗೆ ಇಷ್ಟವಾಗುವಂತಿದೆ.
ನೃತ್ಯ ಮಾಡುವುದು ಸುಭದ ಮಾತಲ್ಲಾ. ಅದರಲ್ಲಿಯೂ ಚಲನ ಚಿತ್ರಗೀತೆಯಲ್ಲಿ ನಟ-ನಟಿಮಣಿಯರು ನೃತ್ಯ ಮಾಡಿದಂತೆಯೇ ನಕಲಿಸುವುದಂತೂ ಮತ್ತೂ ಕಷ್ಟ. ಹಾಡಿನ ಭಾವನೆಗೆ ತಕ್ಕಂತೆ ನಿಮ್ಮ ಮುಖದ ಭಾವನೆಯೂ ಬದಲಾಗಬೇಕು. ಹಾಡಿನ ಭಾವಾರ್ಥದ ಜತೆಗೆ ಪರಕಾಯ ಪ್ರವೇಶ ಮಾಡಬೇಕು. ಅಂದಾದಾಗ ಮಾತ್ರ ನೃತ್ಯ ಚೆನ್ನಾಗಿ ಮೂಡಿಬರುತ್ತದೆ.
ಎಷ್ಟೋ ಜನರು ಡಾನ್ಸ್ ಮಾಡುವ ಮೂಲಕ ತಮ್ಮ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ದೂರ ಮಾಡಿಕೊಳ್ಳುತ್ತಾರೆ. ತುಂಬಾ ಖುಷಿಯಾದಾಗಲೂ, ನೋವಾದಾಗಲೂ ಕೂಡಾ ವಿಭಿನ್ನ ರೀತಿಯ ನೃತ್ಯ ಮಾಡಿ ಖುಷಿ ಪಡುತ್ತಾರೆ. ಇನ್ನು ಕೆಲವರಿಗೆ ಡಾನ್ಸ್ ಮಾಡುವುದು ಹವ್ಯಾಸ.
View this post on Instagram
ವಿಡಿಯೋದಲ್ಲಿ ಗಮನಿಸುವಂತೆ, ಮಹಿಳೆ ಪ್ರಸಿದ್ಧತೆ ಪಡೆದ ಮಖ್ಣಾ ಹಾಡಿಗೆ ಸ್ಟೆಪ್ ಹಾಕಿದ್ದಾಳೆ. ಜತೆಗೆ ನಟ ಗೋವಿಂದ ಅವರ ನೃತ್ಯದ ಶೈಲಿಯಲ್ಲಿಯೇ ತಾನೂ ಕೂಡಾ ಸ್ಟೆಪ್ ಹಾಕಿದ್ದಾಳೆ. ಸೊಂಟ ಬಳುಕಿಸುತ್ತಾ ಮುಖದ ಭಾವನೆ ಕೂಡಾ ಅದ್ಭುತವಾಗಿ ವ್ಯಕ್ತವಾಗಿದೆ.
ಕೆಲವು ಮೋಜಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತಿರುತ್ತದೆ. ತಮಾಷೆಯ ಜತೆಗೆ ಸ್ಪೂರ್ತಿ ತುಂಬುವ ಕೆಲವು ವಿಡಿಯೋಗಳು ಹಾಗೂ ಆಶ್ಚರ್ಯವೆನಿಸುವ ಸಾಹಸಗಳ ವಿಡಿಯೋಗಳು ಜನರ ಮನ ಗೆಲ್ಲುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರೋರ್ವರು, ಓಹ್.. ಮೈಂಡ್ ಬ್ಲೋಯಿಂಗ್..! ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಸಕತ್ ಡಾನ್ಸ್ ಮಾಡ್ತೀರಾ ಎಂದು ಶ್ಲಾಘಿಸಿದಾರೆ.
ಇದನ್ನೂ ಓದಿ:
Viral Video: ಡಾನ್ಸ್ ಮಾಡ್ತಾ ಮಾಡ್ತಾ ವರನನ್ನು ಬೀಳಿಸಿಯೇ ಬಿಟ್ಟನಲ್ಲಾ ಪುಣ್ಯಾತ್ಮ!
Shilpa Shetty: ಡಾನ್ಸ್ ಮಾಡುವಾಗಲೇ ಎಡವಿದ ಶಿಲ್ಪಾ ಶೆಟ್ಟಿ; ಜರಾ ದೇಖ್ ಕೆ ಚಲೋ ಎಂದ ವಿಡಿಯೋ ವೈರಲ್
Published On - 10:50 am, Thu, 24 June 21