ಎಮ್ ಎಸ್ ಧೋನಿಯನ್ನು ತಬ್ಬಿ ನಿಂತ ಮಗಳು; ಕ್ಯಾಮರಾ ಮುಂದೆ ಝೀವಾ ಕೊಟ್ಟ ಸ್ಮೈಲ್ ನೋಡಿ
MS Dhoni- Ziva: ಝೀವ ತನ್ನ ತಂದೆ ಧೋನಿ ಅವರನ್ನು ತಬ್ಬಿಕೊಂಡು, ಫೊಟೋಕ್ಕಾಗಿ ಸುಂದರವಾಗಿ ಸ್ಮೈಲ್ ಮಾಡುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಭಾರತದ ಮಾಜಿ ಕ್ರಿಕೆಟಿಗ ಎಮ್.ಎಸ್ ಧೋನಿ ಅವರು ಅಪಾರವಾದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಹಾಗಿರುವಾಗ ಅವರು ವೈಯಕ್ತಿಕ ಜೀವನದಲ್ಲಿ ಹೇಗಿರುತ್ತಾರೆ, ಅವರ ಕುಟುಂಬ ಹೇಗಿದೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಕೆರಳುವುದು ಸಹಜ. ತಮ್ಮ ಮಗಳು ಝೀವಾ ಜತೆ ನಿಂತಿರುವ ಮುದ್ದಾದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧೋನಿ ಬಳಗದವರೂ ಸಹ ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಎಮ್ಎಸ್ ಧೋನಿ ಮಗಳು ಝೀವಾ ಫೋಟೋಗಳನ್ನು ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಧೋನಿ ಮತ್ತು ಸಾಕ್ಷಿ ಸಿಂಗ್ ಧೋನಿ ಅವರ ಮುದ್ದಾದ ಮಗಳು ಝೀವಾ ಹೆಸರಿನಲ್ಲಿಯೇ ಇನ್ಸ್ಟಾಗ್ರಾಮ್ ಖಾತೆಯನ್ನು ತೆರಯಲಾಗಿದೆ. ಝೀವಾ ಹೆಸರಿನ ಖಾತೆಯನ್ನು ತಂದೆ-ತಾಯಿ ನೋಡಿಕೊಳ್ಳುತ್ತಿದ್ದಾರೆ.
ತಮ್ಮ ಕುಟುಂಬದವರೊಡನೆ ಅಮೂಲ್ಯ ಕ್ಷಣಗಳಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ, ಝೀವ ತನ್ನ ತಂದೆ ಧೋನಿ ಅವರನ್ನು ತಬ್ಬಿಕೊಂಡು, ಫೊಟೋಕ್ಕಾಗಿ ಸುಂದರವಾಗಿ ಸ್ಮೈಲ್ ಮಾಡುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಆರಾಧ್ಯ ದೃಶ್ಯವನ್ನು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡಾ ಇಷ್ಟಪಟ್ಟಿದ್ದಾರೆ. ಎರಡು ದಿನದ ಹಿಂದೆ ಈ ದೃಶ್ಯವನ್ನು ಪೋಸ್ಟ್ ಮಾಡಲಾಗಿದ್ದು, 4.4 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ.
View this post on Instagram
ಇತ್ತೀಚೆಗಷ್ಟೆ ಹಂಚಿಕೊಂಡ ಫೋಟೋದಲ್ಲಿ ಝೀವ, ತಾನು ಇಷ್ಟಪಡುವ ನಾಯಿಯ ಪಕ್ಕ ಕುಳಿತಿರುವ ಸುಂದರ ಫೋಟೋ ನೆಟ್ಟಗರ ಮನ ಗೆದ್ದಿತ್ತು. ಈ ಫೋಟೋ ಕೂಡಾ ಸಾವಿರಕ್ಕಿಂತಲೂ ಹೆಚ್ಚಿನ ಲೈಕ್ಸ್ಗಳನ್ನು ಪಡೆದುಕೊಂಡಿತ್ತು.
View this post on Instagram
ಇದನ್ನೂ ಓದಿ:
ಐಪಿಎಲ್ 2020: ಎಮ್ ಎಸ್ ಧೋನಿಯ ಕಾಮೆಂಟ್ಗಳನ್ನು ಸಂಪೂರ್ಣವಾಗಿ ಅಪಾರ್ಥ ಮಾಡಿಕೊಳ್ಳಲಾಗಿದೆ: ಜಗದೀಶನ್
IPL 2021, MS Dhoni: ನನಗೆ ವಯಸ್ಸಾಗಿದೆ ಅನಿಸುತ್ತಿದೆ: 200ನೇ ಪಂದ್ಯ ಗೆದ್ದ ಬಳಿಕ ಧೋನಿ ಮಾತು