ಐಪಿಎಲ್ 2020: ಎಮ್ ಎಸ್ ಧೋನಿಯ ಕಾಮೆಂಟ್ಗಳನ್ನು ಸಂಪೂರ್ಣವಾಗಿ ಅಪಾರ್ಥ ಮಾಡಿಕೊಳ್ಳಲಾಗಿದೆ: ಜಗದೀಶನ್
ಸಿಎಸ್ಕೆ ತಂಡದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಎನ್ ಜಗದೀಶನ್ ಅವರು, ಧೋನಿ ಹೇಳಿದ್ದನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ‘ಧೋನಿ ಹೇಳಿದ್ದನ್ನು ಮಾಧ್ಯಮದವರು ಸಂಪೂರ್ಣವಾಗಿ ಅಪಾರ್ಥ ಮಾಡಿಕೊಂಡಿದ್ದ್ದಾರೆ,’ ಎಂದು ಕಳೆದ ಬಾರಿಯ ಆವೃತ್ತಿಯಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಜಗದೀಶನ್ ಕ್ರೀಡಾ ವೆಬ್ಸೈಟೊಂದರ ಜೊತೆ ಮಾತಾಡುವಾಗ ಹೇಳಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತ್ತು ಚೆನೈ ಸೂಪರ್ ಕಿಂಗ್ಸ್ ತಂಡಕ್ಕೆ ಬದಲಾಗದ ನಾಯಕ ಮಹೇಂದ್ರಸಿಂಗ್ ಧೋನಿ ನಾಯಕತ್ವ ನಿಸ್ಸಂದೇಹವಾಗಿ ಇತರ ನಾಯಕರಿಗಿಂತ ಭಿನ್ನವಾದದ್ದು. ಮೂರು ಸಲ ಐಸಿಸಿ ಟ್ರೋಫಿ, ಸಿಎಸ್ಕೆಗೆ ಅಷ್ಟೇ ಸಲ ಐಪಿಎಲ್ ಪ್ರಶಸ್ತಿಯ ಜೊತೆ ಟೀಮ್ ಇಂಡಿಯಾಗೆ ಹಲವಾರು ಟೂರ್ನಿ ಮತ್ತು ಸರಣಿಗಳನ್ನು ಅವರು ಗೆದ್ದಿದ್ದಾರೆ. ಅವರ ನಾಯತ್ವದಲ್ಲಿ ಎದ್ದು ಕಾಣುವ ಅಂಶವೆಂದರೆ ಯುವ ಆಟಗಾರರನ್ನು ಅವರು ನಡೆಸಿಕೊಳ್ಳುವ ಮತ್ತು ಅವರಲ್ಲಿರುವ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ರೀತಿ. ಅವರನ್ನು ಸದಾ ಬೆಂಬಲಿಸುವ ಧೋನಿ ಸಮಯ ಬಂದಾಗ ಹಿರಿಯಣ್ಣನಂತೆ ಗದರುತ್ತಾರೆ, ಆದರೆ ಯಾವತ್ತೂ ಬಹಿರಂಗವಾಗಿ ಅಲ್ಲ. ಈ ಹಿನ್ನೆಲೆಯಲ್ಲಿ ಧೋನಿ ಕಳೆದ ವರ್ಷ ಯುಎಈ ಯಲ್ಲಿ ನಡೆದ 13 ನೇ ಐಪಿಎಲ್ ಆವೃತ್ತಿಯಲ್ಲಿ ಸಿಎಸ್ಕೆ ತಂಡದ ಕಳಪೆ ಪ್ರದರ್ಶನಕ್ಕೆ ಯುವ ಆಟಗಾರರರನ್ನು ಮಾಧ್ಯಮದವರೊಂದಿಗೆ ಮಾತಾಡುವಾಗ ದೂರಿದ್ದು ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿತ್ತು.
ಸಿಎಸ್ಕೆ ತಂಡದ ಯುವ ಆಟಗಾರರರಲ್ಲಿ ಗೆಲ್ಲಬೇಕೆಂಬ ಛಲ ಇಲ್ಲದೇ ಹೋಗಿದ್ದು ಸಿಎಸ್ಕೆಯ ಹೀನಾಯ ಪ್ರದರ್ಶನಕ್ಕೆ ಪ್ರಮುಖ ಕಾರಣವಾಯಿತೆಂದು ಧೋನಿ ಹೇಳಿದ್ದರು. ‘ಯುವ ಆಟಗಾರರಿಗೆ ನಾವು ಕೆಲ ಅವಕಾಶಗಳನ್ನು ಕಲ್ಪಿಸದೆವು. ಆದರೆ, ಅವರಲ್ಲಿ ಛಲದ ಕೊರತೆ ಎದ್ದು ಕಂಡಿತು. ಓಕೆ, ಯುವಕರು ತಮಗೆ ಗೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸೀನಿಯರ್ಗಳಿಗೆ ತಮ್ಮ ಸ್ಥಾನಗಳ ಬಗ್ಗೆ ಅಭದ್ರತೆ ಹುಟ್ಟಿಸಲಿದ್ದಾರೆ ಆಂತ ನಾವಂದುಕೊಂಡಿದ್ದು ಸುಳ್ಳಾಯಿತು,’ ಎಂದು ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ 7 ವಿಕೆಟ್ಗಳ ಪರಾಭವ ಅನುಭವಿಸಿದ ನಂತರ ದೋನಿ ಹೇಳಿದ್ದರು.
ಆದರೆ, ಸಿಎಸ್ಕೆ ತಂಡದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಎನ್ ಜಗದೀಶನ್ ಅವರು, ಧೋನಿ ಹೇಳಿದ್ದನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ‘ಧೋನಿ ಹೇಳಿದ್ದನ್ನು ಮಾಧ್ಯಮದವರು ಸಂಪೂರ್ಣವಾಗಿ ಅಪಾರ್ಥ ಮಾಡಿಕೊಂಡಿದ್ದ್ದಾರೆ,’ ಎಂದು ಕಳೆದ ಬಾರಿಯ ಆವೃತ್ತಿಯಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಜಗದೀಶನ್ ಕ್ರೀಡಾ ವೆಬ್ಸೈಟೊಂದರ ಜೊತೆ ಮಾತಾಡುವಾಗ ಹೇಳಿದ್ದಾರೆ.
ಆರಂಭ ಆಟಗಾರ ಋತುರಾಜ ಗಾಯಕ್ವಾಡ್ ಅವರೊಂದಿಗೆ ಸಿಎಸ್ಕೆ ಟೀಮಿನ ಭವಿಷ್ಯದ ಸ್ಟಾರ್ಗಳೆನಿಸಿಕೊಂಡಿರುವ ಜಗದೀಶನ್ ಅವರು ಧೋನಿಯ ಅವರ ಕಾಮೆಂಟ್ ಇಡೀ ತಂಡದ ಸ್ಥೈರ್ಯವನ್ನು ಹೆಚ್ಚಿಸಿತು ಎಂದಿದ್ದಾರೆ.
‘ಅವರು ಅಸಲಿಗೆ ಹೇಳಿದ್ದು ಯುವ ಆಟಗಾರರ ಬಗ್ಗೆ ಅಲ್ಲವೇ ಅಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಮತ್ತು ಋತು ಉತ್ತಮ ಪ್ರದರ್ಶನಗಳನ್ನು ನೀಡಿದ್ದೆವು. ಜನ ಅರ್ಥ ಮಾಡಿಕೊಳ್ಳದೆ ಹೋದ ಸಂಗತಿಯೇನೆಂದರೆ, ಸೀನಿಯರ್ಸ್ ಸೇರಿದಂತೆ ಅವರು ಇಡೀ ತಂಡದ ಸ್ಥೈರ್ಯವನ್ನು ಹೆಚ್ಚಿಸಲು ಪ್ರಯತ್ನಸಿದ್ದು. ಅವರಂಥ ಒಬ್ಬ ಲೆಜೆಂಡ್ ಪ್ರತಿಯೊಬ್ಬ ಆಟಗಾರನ ನ್ಯೂನತೆಗಳನ್ನು ಬೊಟ್ಟು ಮಾಡಿ ತೋರಿಸಲಾರ. ಸೀನಿಯರ್ ಆಟಗಾರರನ್ನು ಹುರಿದುಂಬಿಸಲು ಒಂದು ವಿಧಾನ ಬೇಕಾಗುತ್ತದೆ. ಅವರ ಸ್ಥೈರ್ಯವನ್ನು ಹೆಚ್ಚಿಸಲು ಧೋನಿ ಏನನ್ನಾದರೂ ಮಾಡಲೇಬೇಕಿತ್ತು. ಅವರ ಕಾಮೆಂಟ್ ನಂತರ ಟೀಮ್ ಉತ್ತಮ ಪ್ರದರ್ಶನಗಳನ್ನು ನೀಡಿತು,’ ಎಂದು ಜಗದೀಶನ್ ಹೇಳಿದ್ದಾರೆ. ಇವರು ಕಳೆದ ಸೀಸನ್ನಲ್ಲಿ ಸಿಎಸ್ಕೆಗೆ ಐದು ಪಂದ್ಯಗಳನ್ನಾಡಿದರು.
2020ರಲ್ಲಿ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇ ಆಫ್ ಹಂತ ತಲುಪಲು ಸಿಎಸ್ಕೆ ವಿಫಲವಾಯಿತಾದರೂ ತನ್ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು ಮಾನ ಉಳಿಸಿಕೊಂಡಿತ್ತು. ಋತುರಾಜ್ ಸತತವಾಗಿ ಮೂರು ಅರ್ಧ ಶತಕಗಳನ್ನು ಬಾರಿಸಿ ತಮ್ಮ ಸಾಮರ್ಥ್ಯದ ಪದರ್ಶನ ನೀಡಿದ್ದರು.
2021 ರ ಸೀಸನ್ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಡುವ ಮೊದಲು ತಾನಾಡಿದ7 ಪಂದ್ಯಗಳಲ್ಲಿ 5 ಅನ್ನು ಗೆದ್ದ ಸಿಎಸ್ಕೆ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಕೊವಿಡ್ ಪ್ರಕರಣಗಳ ಸಂಖ್ಯೆ ದಿಢೀರನೆ ಹೆಚ್ಚಾಗಲಾರಂಭಿಸದ ನಂತರ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಕೆಲ ಅಟಗಾರರು ಮತ್ತು ಸಪೋರ್ಟ್ ಸ್ಟಾಫ್ ಸಹ ಸೋಂಕಿಗೊಳಗಾಗಿದ್ದರು.
ಇದನ್ನೂ ಓದಿ: IPL 2021: ಉಳಿದ ಐಪಿಎಲ್ ಪಂದ್ಯಗಳನ್ನು ಇಂಗ್ಲೆಂಡ್ನಲ್ಲಿ ಆಯೋಜಿಸುವುದು ಬೇಡ; ಇಂಗ್ಲೆಂಡ್ ಮಾಜಿ ಕ್ರಿಕೆಟಿಗನ ವಿರೋಧ