ಪ್ರೇಯಸಿಯ ಬರ್ಬರ ಹತ್ಯೆ; ಒಲಂಪಿಕ್ ಪದಕ ವಿಜೇತ ಆರೋಪಿಗೆ ವಿಧಿಸಿದ್ದ ಘೋರ ಮರಣದಂಡನೆ ಹೇಗಿತ್ತು ಗೊತ್ತಾ?
James Snook: ಸ್ನೂಕ್ ತನ್ನ ಪ್ರೇಯಸಿ ತಲೆಗೆ ಸುತ್ತಿಗೆಯಿಂದ ಹಲವಾರು ಬಾರಿ ಹೊಡೆದಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದ. ಇದರ ನಂತರ, ಜುಗುಲಾರ್ ರಕ್ತನಾಳವನ್ನು ಚಾಕುವಿನಿಂದ ಕತ್ತರಿಸಿದ್ದ.
ಭಾರತ ಪರ ಎರಡು ಬಾರಿ ಒಲಿಂಪಿಕ್ ಪದಕ ಗೆದ್ದ ಕುಸ್ತಿಪಟು ಸುಶೀಲ್ ಕುಮಾರ್ ಜೈಲಿನಲ್ಲಿದ್ದಾರೆ. ಉದಯೋನ್ಮುಖ ಕುಸ್ತಿಪಟುವನ್ನು ಕೊಂದ ಆರೋಪ ಅವರ ಮೇಲಿದೆ. ಸುಶೀಲ್ ಪ್ರಸ್ತುತ ಏಕೈಕ ಆರೋಪಿಯಾಗಿದ್ದರೂ, ಕೊಲೆ, ಅತ್ಯಾಚಾರದಂತಹ ಘೋರ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಇಂತಹ ಅನೇಕ ಆಟಗಾರರು ಇತಿಹಾಸದ ಪುಟದಲ್ಲಿ ದಾಖಲಾಗಿದ್ದಾರೆ. ಅವರಿಗೂ ಶಿಕ್ಷೆಯಾಗಿದೆ. ಅಂತಹ ಒಂದು ಪ್ರಕರಣವೆಂದರೆ ಯುಎಸ್ ಶೂಟರ್ ಜೇಮ್ಸ್ ಸ್ನೂಕ್ ಪತ್ನಿ ಹತ್ಯೆ ಪ್ರಕರಣ. ಜೇಮ್ಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದ ಅಟಗಾರರಾಗಿದ್ದರು. ಆದರೆ ನಂತರ ಆತನನ್ನು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಯಿತು ಮತ್ತು ವಿದ್ಯುತ್ ಕುರ್ಚಿಯ ಮೇಲೆ ಕೂರಿಸಿ ಮರಣದಂಡನೆ ವಿಧಿಸಲಾಯಿತು. ಜೇಮ್ಸ್ ಸ್ನೂಕ್ ಕೊಲೆಗಾರನೆಂದು ಸಾಬೀತಾದ ನಂತರವೂ ಒಲಿಂಪಿಕ್ ಪದಕ ವಿಜೇತರಾಗಿದ್ದರು. ಇಂದಿಗೂ ಅವರ ಹೆಸರಿನಲ್ಲಿ ಎರಡು ಚಿನ್ನದ ಪದಕಗಳನ್ನು ನೋಂದಾಯಿಸಲಾಗಿದೆ.
ಜೇಮ್ಸ್ ಸ್ನೂಕ್ ಅಮೆರಿಕದ ಓಹಿಯೋ ಪಶುವೈದ್ಯಕೀಯ ಶಾಲೆಯಲ್ಲಿ ಪದವೀಧರರಾಗಿದ್ದರು. ನಂತರ 1920 ರಲ್ಲಿ ಅವರು ಇಲ್ಲಿ ಪಶುವೈದ್ಯಕೀಯ ಔಷಧ ಪ್ರಾಧ್ಯಾಪಕರಾದರು. ಅಂದರೆ, ಪ್ರಾಣಿ ಕಾಯಿಲೆಗಳಿಗೆ ಸಂಬಂಧಿಸಿದ ಔಷಧಿಗಳ ಬಗ್ಗೆ ಕಲಿಸಲು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಶೂಟಿಂಗ್ ಅಭ್ಯಾಸ ಕೂಡ ಮಾಡುತ್ತಿದ್ದರು. ಇದನ್ನು ಕರಗತ ಮಾಡಿಕೊಂಡ ಅವರು 1920 ರಲ್ಲಿ ಬೆಲ್ಜಿಯಂನ ಆಂಟ್ವೆರ್ಪ್ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಮೆರಿಕಕ್ಕೆ ಪದಕ ಗೆದ್ದರು. ಮಿಲಿಟರಿ ಪಿಸ್ತೂಲ್ ಮತ್ತು ಫ್ರೀ ಪಿಸ್ತೂಲ್ 50 ಮೀ ತಂಡದ ಸ್ಪರ್ಧೆಗಳಲ್ಲಿ ಅವರು ಎರಡು ಚಿನ್ನ ಗೆದ್ದರು. ಒಂಬತ್ತು ವರ್ಷಗಳ ನಂತರ, ಅವರು ಓಹಿಯೋ ಪಶುವೈದ್ಯಕೀಯ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದಾಗ, ಥಿಯೋರಾ ಹಿಕ್ಸ್ ಎಂಬ ವೈದ್ಯಕೀಯ ವಿದ್ಯಾರ್ಥಿಯ ಕೊಲೆಗೆ ಸಂಬಂಧಿಸಿದಂತೆ ಬಂಧನಕೊಳಪಟ್ಟರು.
ಸುತ್ತಿಗೆಯಿಂದ ಬಡಿದು, ಕುತ್ತಿಗೆ ಕತ್ತರಿಸಿ ಕೊಲೆ ಈ ಪ್ರಕರಣದ ತನಿಖೆಯಲ್ಲಿ ಸ್ನೂಕ್ ಮತ್ತು ಹಿಕ್ಸ್ ಮೂರು ವರ್ಷಗಳಿಂದ ಶಾಲಾ ಆವರಣದಲ್ಲಿ ಗಂಡ ಹೆಂಡತಿಯಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿತ್ತು. ಹಿಕ್ಸ್, ತನ್ನ ಮೊದಲ ಹೆಂಡತಿಗೆ ವಿಚ್ಚೇದನ ನೀಡಿ, ತನ್ನನ್ನು ಮದುವೆಯಾಗುವಂತೆ ಹೆದರಿಸುತ್ತಿದ್ದಳು ಎಂದು ತನಿಖೆಯ ಸಮಯದಲ್ಲಿ ಸ್ನೂಕ್ ಹೇಳಿದ್ದ. ಆದರೆ ತನ್ನ ಮೊದಲ ಹೆಂಡತಿಯನ್ನು ಕೊಲ್ಲಲು ಒಪ್ಪದ ಸ್ನೂಕ್, ತನ್ನ ಹೆಂಡತಿ ಮತ್ತು ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂಬುದು ವರದಿಯಾಗಿತ್ತು.
ಘೋರ ಮರಣದಂಡನೆ ಹೇಗಿತ್ತು ಒಲಿಂಪೀಡಿಯಾ.ಆರ್ಗ್ ವೆಬ್‌ಸೈಟ್‌ನ ಪ್ರಕಾರ, ಜೂನ್ 1929 ರಲ್ಲಿ, ಸ್ನೂಕ್ ತನ್ನ ಪ್ರೇಯಸಿ ತಲೆಗೆ ಸುತ್ತಿಗೆಯಿಂದ ಹಲವಾರು ಬಾರಿ ಹೊಡೆದಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದ. ಇದರ ನಂತರ, ಜುಗುಲಾರ್ ರಕ್ತನಾಳವನ್ನು ಚಾಕುವಿನಿಂದ ಕತ್ತರಿಸಿದ್ದ. ಗಂಟಲಿನ ನರವನ್ನು ಕತ್ತರಿಸಿದ್ದರಿಂದ ಆಕೆ ಮೃತಪಟ್ಟಳು ಎಂದು ಹೇಳಿಕೆ ನೀಡಿದ್ದ. ಆಗಸ್ಟ್ 1929 ರಲ್ಲಿ, ತೀರ್ಪುಗಾರರು ಸ್ನೂಕ್‌ನನ್ನು ಅಪರಾದಿ ಒಂದು ತೀರ್ಪು ನೀಡಿದ್ದರು. ಒಂದು ವಾರದ ನಂತರ, ಅವನಿಗೆ ಮರಣದಂಡನೆ ವಿಧಿಸಲಾಯಿತು. ನಂತರ ಫೆಬ್ರವರಿ 1930 ರಲ್ಲಿ, ವಿದ್ಯುತ್ ಕುರ್ಚಿಯ ಮೇಲೆ ಕೂರಿಸಿ, ವಿದ್ಯುತ್ ಅನ್ನು ಕುರ್ಚಿಯ ಮೇಲೆ ಪ್ರವಹಿಸಿ ಸ್ನೂಕ್‌ನನ್ನು ಕೊಲ್ಲಲಾಯಿತು.
ಪತ್ರಿಕೆಗಳಲ್ಲಿ ಸಹ ಪ್ರಕಟವಾಗದ ಘೋರ ಅಪರಾಧ ಟೈಮ್ ನಿಯತಕಾಲಿಕೆಯ ಸುದ್ದಿಯ ಪ್ರಕಾರ, ಸ್ನೂಕ್ ಅಂತಹ ಅಪರಾಧವನ್ನು ಮಾಡಿದ್ದು, ಅವರ ಹೆಚ್ಚಿನ ಹೇಳಿಕೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಸಹ ಸಾಧ್ಯವಾಗಲಿಲ್ಲ. ತನ್ನ ತಪ್ಪೊಪ್ಪಿಗೆಯಲ್ಲಿ, ಅವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಬಲವಂತವಾಗಿ ಸಂಬಂಧಗಳನ್ನು ಬೆಳೆಸಲು ಯತ್ನಸಿದ್ದ ಎಂಬುದು ಬಹಿರಂಗಗೊಂಡಿತ್ತು. ನಂತರ, ಕೆಲವರ ಹೇಳಿಕೆಯನ್ನು ಗೌಪ್ಯ ರೀತಿಯಲ್ಲಿ ಪಡೆದುಕೊಂಡು ಸಣ್ಣ ಕಿರುಪುಸ್ತಕವನ್ನು ತಯಾರಿಸಿ ಮಾರಾಟ ಮಾಡಿದರು. ಇದರಿಂದಾಗಿ ಇಡೀ ಅಮೆರಿಕ ಈ ಪ್ರಕರಣದಲ್ಲಿ ಆಸಕ್ತಿ ಹೊಂದಿತು. ಬೆಳಿಗ್ಗೆ 3 ಗಂಟೆಯಿಂದ ಜನರು ನ್ಯಾಯಾಲಯದ ಹೊರಗೆ ಲೈನ್ ತೆಗೆದುಕೊಂಡು ಪ್ರಕರಣದ ವಿಚಾರಣೆಯನ್ನು ನೋಡುತ್ತಿದ್ದರು ಎಂದು ಹೇಳಲಾಗಿದೆ.