Viral Video: ಡಾನ್ಸ್​ ಮಾಡ್ತಾ ಮಾಡ್ತಾ ವರನನ್ನು ಬೀಳಿಸಿಯೇ ಬಿಟ್ಟನಲ್ಲಾ ಪುಣ್ಯಾತ್ಮ!

ವಿಡಿಯೋವನ್ನು ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಇದೀಗ ಭಾರೀ ಸುದ್ದಿಯಲ್ಲಿದೆ. 1,67,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Viral Video: ಡಾನ್ಸ್​ ಮಾಡ್ತಾ ಮಾಡ್ತಾ ವರನನ್ನು ಬೀಳಿಸಿಯೇ ಬಿಟ್ಟನಲ್ಲಾ ಪುಣ್ಯಾತ್ಮ!
ಡಾನ್ಸ್​ ಮಾಡ್ತಾ ಮಾಡ್ತಾ ವರನನ್ನು ಬೀಳಿಸಿಯೇ ಬಿಟ್ಟನಲ್ಲಾ ಪುಣ್ಯಾತ್ಮ!
Follow us
TV9 Web
| Updated By: shruti hegde

Updated on:Jun 21, 2021 | 2:43 PM

ಮದುವೆ ಮನೆ ಅಂದ್ರೆ ಸಂಭ್ರಮವೋ ಸಂಭ್ರಮ. ನೂರಾರು ಜನರು.. ಮನೆ ತುಂಬ ಜನ.. ಇನ್ನೇನು ಸ್ಟೆಪ್​ ಹಾಕಿಯೇ ಬಿಡೋಣ ಅನ್ನುವಷ್ಟ ಮಟ್ಟಿಗೆ ವಾದ್ಯ, ಡೋಲಿನ ಸೌಂಡ್​.. ಜತೆಜತೆಗೆ ಬಹಳ ಖುಷಿಯಿಂದ ನೃತ್ಯ ಮಾಡುತ್ತಾ ಕುಣಿದು ಕುಪ್ಪಳಿಸುತ್ತೇವೆ. ಮದುವೆ ಮನೆಯಲ್ಲಿ ನೃತ್ಯ ಮಾಡುತ್ತಾ ವರನನ್ನು ಸ್ನೇಹೊನೊಬ್ಬ ನೆಲಕ್ಕೆ ಬೀಳಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೆಚ್ಚು ಉತ್ಸಾಹದಲ್ಲಿದ್ದಾಗ ಕೆಲವು ಅವಘಡಗಳು ಸಂಭವಿಸುವುದು ಎಂದು ಓರ್ವರು ಎಚ್ಚರಿಸುವ ಪ್ರತಿಕ್ರಿಯೆ ನೀಡಿದರೆ, ಇನ್ನು ಕೆಲವರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮದುವೆ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಎಲ್ಲರೂ ಅಲಂಕಾರಗೊಂಡು ನಗುನಗುತ್ತಾ ನೃತ್ಯ ಮಾಡುತ್ತಾರೆ, ವಾದ್ಯದೊಂದಿಗೆ ಡೋಲು ಬಡಿತದ ಸದ್ದು ಎಲ್ಲರೂ ಹೆಜ್ಜೆ ಹಾಕುವಂತೆ ಮಾಡಿದೆ. ಸ್ನೇಹಿತನ ಮದುವೆಯ ಖುಷಿಯಲ್ಲಿ ಸ್ನೇಹಿತನೊಬ್ಬ ವರನನ್ನು ಹೆಗಲ ಮೇಲೆ ಹೊತ್ತು ಭರ್ಜರಿ ಡಾನ್ಸ್​ ಮಾಡುತ್ತಿದ್ದಾನೆ. ಇಲ್ಲಿಗೇ ಮುಗಿದಿಲ್ಲ ವಿಷಯ ಇನ್ನೂ ಮುಂದಿದೆ ಓದಿ..

ಸುತ್ತಲೂ ಜನರು ನೃತ್ಯ ಮಾಡುತ್ತಿದ್ದಾರೆ. ಜತೆಗೆ ಮದುಮಗನ ಸ್ನೇಹಿತನೂ ಕೂಡಾ ಮದುಮಗನನ್ನು ಹೆಗಲೆ ಮೇಲೆ ಎತ್ತಿಕೊಂಡು ಡ್ಯಾನ್ಸ್​ನಲ್ಲಿ ಮುಳುಗಿದ್ದಾನೆ. ಇದ್ದಕ್ಕಿದ್ದಂತೆಯೇ ಸಮತೋಲನವನ್ನು ಕಳೆದು ಕೊಂಡು ವರನನ್ನು ಬೀಳಿಸಿಯೇ ಬಿಡ್ತಾನೆ!

ನಿರಂಜನ್​ ಎಂಬ ಇನ್​ಸ್ಟಾಗ್ರಾಮ್​ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಉಲ್ಲಾಸ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋವನ್ನು ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಇದೀಗ ಭಾರೀ ಸುದ್ದಿಯಲ್ಲಿದೆ. 1,67,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮದುವೆಯಲ್ಲಿ ಕೆಲವರಿಗೆ ಉತ್ಸಾಹ ಹೆಚ್ಚಾದಾಗ ಈ ರೀತಿಯ ಅವಘಡಗಳು ಆಗುತ್ತವೆ ಬಹಳ ಎಚ್ಚರಿಕೆಯಿಂದಿರಿ ಎಂದು ಓರ್ವರು ಹೇಳಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ ನಗುವ ಇಮೋಜಿಗಳನ್ನು ಕಾಮೆಂಟ್​ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ಮದುವೆ ಮನೆಗಳಲ್ಲಿ ನಡೆಯುವ ಬಹಳಷ್ಟು ತಮಾಷೆ ವಿಡಿಯೋಗಳು ವೈರಲ್​ ಆಗುತ್ತನೇ ಇರುತ್ತವೆ. ಈ ಹಿಂದೆ ಮದುಮಗ ವಧುವಿಗೆ ಪಾನಿಪುರಿ ತಿನ್ನಿಸುತ್ತಿರುವ ವಿಡಿಯೋ ವೈರಲ್​ ಅಗಿತ್ತು. ಪಾನಿಪುರಿ ಇಷ್ಟ ಪಡುವವರು ‘ಮಿಸ್​ ಯು ಪಾನಿಪುರಿ’ ಎಂದು ಪಾನಿಪುರಿಯ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದರು.

ಇದನ್ನೂ ಓದಿ:

Viral Video: ಸರತಿ ಸಾಲಿನಲ್ಲಿ ಸರಸರನೆ ಕಟ್ಟಡ ಇಳಿಯುತ್ತಿರುವ ಮಂಗಗಳು! ಉದ್ಯಮಿ ಹರ್ಷ ಗೋಯಂಕಾ ಹಂಚಿಕೊಂಡ ವಿಡಿಯೋ ವೈರಲ್

Viral Video: ಮದುವೆ ಮನೆಯಲ್ಲಿ ಪಾನಿಪುರಿ ರಸದೌತಣ! ನೀವೂ ಮಿಸ್​ ಮಾಡಿಕೊಳ್ಳುತ್ತಿದ್ದೀರಾ?

Published On - 2:35 pm, Mon, 21 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ