Viral Video: ಸರತಿ ಸಾಲಿನಲ್ಲಿ ಸರಸರನೆ ಕಟ್ಟಡ ಇಳಿಯುತ್ತಿರುವ ಮಂಗಗಳು! ಉದ್ಯಮಿ ಹರ್ಷ ಗೋಯಂಕಾ ಹಂಚಿಕೊಂಡ ವಿಡಿಯೋ ವೈರಲ್

Viral Video: 10 ಸೆಕೆಂಡುಗಳಿರುವ ವಿಡಿಯೋ ಕ್ಲಿಪ್​ನಲ್ಲಿ ಎರಡು ಮಂಗಗಳು ಸರತಿ ಸಾಲಿನಲ್ಲಿ ಕಟ್ಟಡವನ್ನು ಇಳಿಯುತ್ತಿವೆ. ಅತೀ ವೇಗದಲ್ಲಿ ಸರಸರನೆ ಕಟ್ಟಡ ಇಳಿದು ಯಾರ ಕಣ್ಣಿಗೂ ಬೀಳದಂತೆ ಓಡಿ ಹೋಗಿವೆ.

Viral Video: ಸರತಿ ಸಾಲಿನಲ್ಲಿ ಸರಸರನೆ ಕಟ್ಟಡ ಇಳಿಯುತ್ತಿರುವ ಮಂಗಗಳು! ಉದ್ಯಮಿ ಹರ್ಷ ಗೋಯಂಕಾ ಹಂಚಿಕೊಂಡ ವಿಡಿಯೋ ವೈರಲ್
ಸರತಿ ಸಾಲಿನಲ್ಲಿ ಸರಸರನೆ ಕಟ್ಟಡ ಇಳಿಯುತ್ತಿರುವ ಮಂಗಗಳು!
Follow us
TV9 Web
| Updated By: Digi Tech Desk

Updated on:Jun 22, 2021 | 10:47 AM

ಮಂಗನ ಆಟ ನೋಡ್ತಿದ್ರೆ ಕೆಲವು ಬಾರಿ ನಗು ಬರುವಂತಿರುತ್ತದೆ! ಸರ್.. ​ಎಂದು ಮರ ಇಳಿಯುವುದು.. ಒಂದು ಮರದಿಂದ ಇನ್ನೊಂದು ಮರಕ್ಕೆ ಗಬಕ್​ನೆ​ ಹಾರುವುದು.. ಇದ್ದ-ಬಿದ್ದ ಹಣ್ನುಗಳನ್ನೆಲ್ಲಾ ಅರ್ಧಮ್ಮರ್ಧ ತಿಂದು ಬಿಸಾಡುವುದು.. ಸುತ್ತಮುತ್ತಲು ಕಣ್​ ಮಿಟುಕಿಸುತ್ತಾ ಜಮೀನು ತುಂಬ ಕೀಟಲೆ ಮಾಡುವುದು.. ಇವುಗಳೆಲ್ಲಾ ಕಿರಿಕಿರಿ ಅನಿಸಿದರೂ ವಿಡಿಯೋದಲ್ಲಿ ಅವುಗಳ ತುಂಟಾಟ ನೋಡಲು ಸಕತ್​ ಇಷ್ಟವಾಗುತ್ತದೆ. ಉದ್ಯಮಿ ಹರ್ಷ ಗೋಯಂಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಇದೀಗ ಫುಲ್​ ವೈರಲ್​ ಆಗಿದೆ.

ಉದ್ಯಮಿ ಹರ್ಷ ಗೋಯಂಕಾ ಹಂಚಿಕೊಂಡಿರುವ ವಿಡಿಯೋ ನಿಮ್ಮನ್ನು ನಿಜವಾಗಿಯೂ ನಗಿಸುವಂತಿದೆ. ಇವರು ಶನಿವಾರ (ಜೂನ್​19) ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರಿಗೆ ಭಾರೀ ಖುಷಿಕೊಟ್ಟಿದೆ. ಮಂಗ ಸರಸರನೆ ಕಟ್ಟಡ ಇಳಿಯುತ್ತಿರುವ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

10 ಸೆಕೆಂಡುಗಳಿರುವ ವಿಡಿಯೋ ಕ್ಲಿಪ್​ನಲ್ಲಿ ಎರಡು ಮಂಗಗಳು ಸರತಿ ಸಾಲಿನಲ್ಲಿ ಕಟ್ಟಡವನ್ನು ಇಳಿಯುತ್ತಿವೆ. ಎರಡೂ ಮಂಗಗಳು ಒಂದೇ ವೇಗದಲ್ಲಿವೆ ಮತ್ತು ಒಂದನ್ನು ಒಂದು ಹಿಂಬಾಲಿಸುತ್ತಿದ್ದಂತೆ ಅನಿಸುತ್ತಿದೆ. ಅತೀ ವೇಗದಲ್ಲಿ ಸರಸರನೆ ಕಟ್ಟಡ ಇಳಿದು ಯಾರ ಕಣ್ಣಿಗೂ ಬೀಳದಂತೆ ಓಡಿ ಹೋಗಿವೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ 6 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ‘ಜೀವನದಲ್ಲಿ ನೀವು ನೋಡುವ ಸರಳ ಸಂಗತಿಗಳಿವು.. ಇವುಗಳು ನಿಮ್ಮ ದಿನವನ್ನು ಬೆಳಗಿಸುತ್ತವೆ’ ಎಂಬ ಪ್ರತಿಕ್ರಿಯೆ ಕೇಳಿ ಬಂದಿದೆ.  ಶನಿವಾರ ದೆಹಲಿ ಮೆಟ್ರೋ ರೈಲಿನಲ್ಲಿ ಮಂಗ ಪ್ರಯಾಣ ಮಾಡಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಅದರ ಜತೆಗೆ ಈ ವೀಡಿಯೋ ಸಹ ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Viral Video: ಮಾಸ್ಕ್ ಧರಿಸದೆ ಓಡಾಡಿದವರಿಗೆ ಮಂಗಳಾರತಿ ಬೆಳಗಿ ಹಾಡು ಹೇಳಿದ ಮಹಿಳಾ ಪೊಲೀಸ್ ಅಧಿಕಾರಿ, ವಿಡಿಯೋ ವೈರಲ್

ಹಾಯಾಗಿದೆ ಪ್ರಯಾಣವೆನ್ನುತ್ತಾ.. ಮೆಟ್ರೋ ರೈಲಿನಲ್ಲಿ ಮಂಗನ ಸ್ಟಂಟ್​! ವಿಡಿಯೋ ನೋಡಿ

Published On - 1:47 pm, Mon, 21 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ