Strawberry Supermoon: ಜೂನ್​ 24ರಂದು ಸ್ಟ್ರಾಬೆರಿ ಸೂಪರ್​ಮೂನ್ ವಿಸ್ಮಯ​! ಈ ಹೆಸರಿನ ಹಿಂದಿರುವ ಗುಟ್ಟೇನು?

ಜೂನ್​ 24 ರಂದು ಗೋಚರಿಸಲಿರುವ ಸೂಪರ್​ಮೂನ್​ಗೆ ಸ್ಟ್ರಾಬೆರಿ ಮೂನ್​ ಎಂಬ ಹೆಸರು ಬರಲು ವಿಶೇಷ ಕಾರಣವಿದೆ. ಅಮೆರಿಕಾದ ಉತ್ತರ ಭಾಗದಲ್ಲಿ ಜೂನ್​ ತಿಂಗಳ ಅವಧಿ ಸ್ಟ್ರಾಬೆರಿ ಹಣ್ಣು ಬೆಳೆಯುವ ಸಮಯ. ಈ ಕಾರಣಕ್ಕಾಗಿ ಇದನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ.

Strawberry Supermoon: ಜೂನ್​ 24ರಂದು ಸ್ಟ್ರಾಬೆರಿ ಸೂಪರ್​ಮೂನ್ ವಿಸ್ಮಯ​! ಈ ಹೆಸರಿನ ಹಿಂದಿರುವ ಗುಟ್ಟೇನು?
ಸ್ಟ್ರಾಬೆರಿ ಸೂಪರ್​ಮೂನ್​ (ಸಾಂಕೇತಿಕ ಚಿತ್ರ)
Follow us
TV9 Web
| Updated By: Skanda

Updated on: Jun 21, 2021 | 11:32 AM

ಮನುಷ್ಯ ಭೂಮಿಯ ಮೇಲೆ ವಾಸಿಸುವುದಾದರೂ ಆತನಿಗೆ ಬಾಹ್ಯಾಕಾಶದೆಡೆಗಿನ ಆಸಕ್ತಿ ಅತೀವ. ಕಗ್ಗತ್ತಲಲ್ಲಿ ಕಾಣುವ ಉಲ್ಕಾಪಾತದಿಂದ ಹಿಡಿದು, ಧೂಮಕೇತು, ಗ್ರಹಣ, ಸೂರ್ಯ-ಚಂದ್ರರ ಚಲನವಲನ ಎಲ್ಲವೂ ಕುತೂಹಲ ಕೆರಳಿಸುವ ವಿಷಯಗಳೇ. ಕಳೆದ ಮೇ ತಿಂಗಳಿನಲ್ಲಿ ಚಂದ್ರಗ್ರಹಣ ಹಾಗೂ ನಂತರ ಜೂನ್​ನಲ್ಲಿ ಸೂರ್ಯಗ್ರಹಣವೊಂದಕ್ಕೆ ಜಗತ್ತಿನ ಕೆಲ ಭಾಗಗಳ ಜನರು ಸಾಕ್ಷಿಯಾಗಿದ್ದಾರೆ. ಜೂನ್ 10ರಂದು ಘಟಿಸಿದ ಸೂರ್ಯಗ್ರಹಣವನ್ನು ಬೆಂಕಿಯ ಉಂಗುರ ಎಂದು ಬಣ್ಣಿಸಲಾಗಿದ್ದ ಕಾರಣ ಅದು ಅನೇಕ ಜನರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಆಕಾಶದಲ್ಲಿ ನಡೆಯಲಿರುವ ಮತ್ತೊಂದು ವಿದ್ಯಮಾನ ಎಲ್ಲರ ಗಮನ ಸೆಳೆಯುತ್ತಿದೆ. 2021ನೇ ಇಸವಿಯ ಕಟ್ಟಕಡೆಯ ಸೂಪರ್​ಮೂನ್​ ಜೂನ್​ 24ರಂದು ಸಂಭವಿಸಲಿದ್ದು, ಇದಕ್ಕೆ ಸ್ಟ್ರಾಬೆರಿ ಮೂನ್ ಎಂದು ನಾಮಕರಣ ಮಾಡಲಾಗಿದೆ.

ನಾಸಾ ಸಂಸ್ಥೆಯ ವಿಜ್ಞಾನಿಗಳು ಹೇಳಿರುವ ಪ್ರಕಾರ ಈ ವಿಸ್ಮಯ ಜೂನ್​ 24ರಂದು ಘಟಿಸಲಿದೆ. ಸೂಪರ್​ಮೂನ್​ ಎಂದರೆ ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದುಹೋಗುವ ಪ್ರಕ್ರಿಯೆ. ಹೀಗೆ ಚಂದ್ರ ಭೂಮಿಗೆ ಹತ್ತಿರವಾದಾಗ ಸಹಜವಾಗಿಯೇ ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದೆ. ಭೂಮಿಗೆ ಪರಿಪೂರ್ಣ ಒಂದು ಸುತ್ತು ಬರಲು ಸುಮಾರು 29.5 ದಿನಗಳ ಕಾಲಾವಕಾಶ ತೆಗೆದುಕೊಳ್ಳುವ ಚಂದ್ರನನ್ನು ಈ ಅವಧಿಯಲ್ಲಿ ಅಂದರೆ ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ವಿವಿಧ ಆಕಾರ, ಗಾತ್ರಗಳಲ್ಲಿ ಭೂಮಿಯ ಮೇಲಿನಿಂದ ಗಮನಿಸಬಹುದು. ಹೀಗೆ ಭೂಮಿಯನ್ನು ಸುತ್ತುವಾಗ ಚಂದ್ರ ಯಾವಾಗಲಾದರೂ ಒಮ್ಮೆ ತೀರಾ ಸನಿಹಕ್ಕೆ ಬಂದು ಹೋಗುವ ವಿಸ್ಮಯ ಘಟಿಸುತ್ತದೆ.

ಸ್ಟ್ರಾಬೆರಿ ಮೂನ್ ಹೆಸರಿನ ಹಿಂದಿರುವ ವಿಶೇಷತೆ ಏನು? ಜೂನ್​ 24 ರಂದು ಗೋಚರಿಸಲಿರುವ ಸೂಪರ್​ಮೂನ್​ಗೆ ಸ್ಟ್ರಾಬೆರಿ ಮೂನ್​ ಎಂಬ ಹೆಸರು ಬರಲು ವಿಶೇಷ ಕಾರಣವಿದೆ. ಅಮೆರಿಕಾದ ಉತ್ತರ ಭಾಗದಲ್ಲಿ ಜೂನ್​ ತಿಂಗಳ ಅವಧಿ ಸ್ಟ್ರಾಬೆರಿ ಹಣ್ಣು ಬೆಳೆಯುವ ಸಮಯ. ಈ ಕಾರಣಕ್ಕಾಗಿ ಇದನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ. ಆದರೆ, ಹೆಸರಿಗೆ ತಕ್ಕಂತೆ ಚಂದ್ರನ ಬಣ್ಣವೂ ಸ್ಟ್ರಾಬೆರಿ ಹಣ್ಣಿನಂತೆಯೇ ಕಾಣುತ್ತದೆ ಎಂದು ಭಾವಿಸಿದರೆ, ಅದು ಮಾತ್ರ ತಪ್ಪು. ಏಕೆಂದರೆ ಈ ಹೆಸರಿಗೂ ಚಂದ್ರನ ಬಣ್ಣಕ್ಕೂ ಸಂಬಂಧವಿಲ್ಲ.

ಅಂದಹಾಗೆ, ಈ ಸ್ಟ್ರಾಬೆರಿ ಮೂನ್​ಗೆ ಇನ್ನೂ ಕೆಲ ಹೆಸರುಗಳಿವೆ. ಇದನ್ನು ಬ್ಲೂಮಿಂಗ್ ಮೂನ್, ಗ್ರೀನ್ ಕಾರ್ನ್​ ಮೂನ್, ಆನರ್ ಮೂನ್, ಬರ್ತ್​ ಮೂನ್, ಎಗ್​ ಲೇಯಿಂಗ್ ಮೂನ್, ಹ್ಯಾಚಿಂಗ್ ಮೂನ್​, ಹನಿ ಮೂನ್, ಮೀಡ್ ಮೂನ್ ಎಂದು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಕರೆಯಲಾಗುತ್ತದೆ. ಜೂನ್​ 24ರ ಸ್ಟ್ರಾಬೆರಿ ಮೂನ್ ಭಾರತದಲ್ಲಿ ಕಾಣುವುದಿಲ್ಲವಾದರೂ ಆನ್​ಲೈನ್ ಮೂಲಕ ವೀಕ್ಷಿಸಬಹುದು.

ಇದನ್ನೂ ಓದಿ: Lunar Eclipse 2021: ಮೇ 26ರ ಸೂಪರ್ ಬ್ಲಡ್ ಮೂನ್- ಪೂರ್ಣ ಚಂದ್ರಗ್ರಹಣದ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು 

ಬಿಸಿಲ ನಾಡಲ್ಲಿ ಶೀತ ಪ್ರದೇಶದ ‘ಫಲ’! ಸ್ಟ್ರಾಬೆರಿ ಹಣ್ಣನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳೆದು ಮಾದರಿಯಾದ ವಿಜಯಪುರ ವಿದ್ಯಾರ್ಥಿನಿಯರು

Daily Horoscope: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಲಾಭವಾಗಲಿದೆ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್
‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!