AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lunar Eclipse 2021: ಮೇ 26ರ ಸೂಪರ್ ಬ್ಲಡ್ ಮೂನ್- ಪೂರ್ಣ ಚಂದ್ರಗ್ರಹಣದ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು

Chandra Grahan 2021: ಮೇ 26ನೇ ತಾರೀಕಿಗೆ ಪೂರ್ಣ ಚಂದ್ರಗ್ರಹಣ ಮತ್ತು ಸೂಪರ್ ಬ್ಲಡ್ ಮೂನ್ ನೋಡಬಹುದು. ಆದರೆ ಇದು ಭಾರತದ ಪೂರ್ವ ಭಾಗದಲ್ಲಿ ಮಾತ್ರ ಕಾಣಿಸುತ್ತದೆ.

Lunar Eclipse 2021: ಮೇ 26ರ ಸೂಪರ್ ಬ್ಲಡ್ ಮೂನ್- ಪೂರ್ಣ ಚಂದ್ರಗ್ರಹಣದ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು
ಸಾಂದರ್ಭಿಕ ಚಿತ್ರ
Srinivas Mata
|

Updated on: May 25, 2021 | 2:38 PM

Share

ಎರಡು ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ ಇದೇ ಮೊದಲ ಬಾರಿಗೆ ಸೂಪರ್ ಬ್ಲಡ್ ಮೂನ್ ಮತ್ತು ಸಂಪೂರ್ಣ ಚಂದ್ರಗ್ರಹಣ ಮೇ 26ನೇ ತಾರೀಕಿನ ಬುಧವಾರದಂದು ಸಂಭವಿಸುತ್ತಿದೆ. ಈ ಗ್ರಹಣದ ಇನ್ನಷ್ಟು ವೈಶಿಷ್ಟ್ಯಗಳಿವೆ. ಆದ್ದರಿಂದ ಈ ಸಂಪೂರ್ಣ ಚಂದ್ರಗ್ರಹಣ ಮತ್ತು ಸೂಪರ್ ಬ್ಲಡ್ ಮೂನ್ ನೋಡುವುದನ್ನು ತಪ್ಪಿಸಿಕೊಳ್ಳಬೇಡಿ. ಬುಧವಾರದಂದು ನಡೆಯಲಿರುವ ಈ ಬಾಹ್ಯಾಕಾಶದ ಕೌತುಕ ವೀಕ್ಷಿಸಲು ಹಲವು ಆನ್​ಲೈನ್​ ಲಿಂಕ್​ಗಳು ಲಭ್ಯವಿವೆ. ಆದರೆ ಭಾರತದ ಹಲವು ಕಡೆ ಈ ಚಂದ್ರಗ್ರಹಣ ಕಾಣಿಸುವುದಿಲ್ಲ. ದೇಶದ ಪೂರ್ವ ಭಾಗದ ಕೆಲವು ಕಡೆಗಳಲ್ಲಿ ಮಾತ್ರ ಚಂದ್ರೋದಯದ ನಂತರ ಭಾಗಶಃ ಗ್ರಹಣವನ್ನು ವೀಕ್ಷಿಸಬಹುದು. ಈ ಚಂದ್ರಗ್ರಹಣವು ವಿಶಿಷ್ಟವಾದ್ದರಿಂದ ಪ್ರಶ್ನೋತ್ತರ ಮಾದರಿಯಲ್ಲಿ ಮಾಹಿತಿ ಇಲ್ಲಿದೆ.

* ಭಾರತದಲ್ಲಿ ಚಂದ್ರಗ್ರಹಣ ಮತ್ತು ಸೂಪರ್ ಬ್ಲಡ್ ಮೂನ್ ಕಾಣಿಸುತ್ತದೆಯೇ? ಸೂಪರ್ ಬ್ಲಡ್ ಮೂನ್ ಮತ್ತು ಸಂಪೂರ್ಣ ಚಂದ್ರಗ್ರಹಣ ಭಾರತದಲ್ಲಿ ಬಹುತೇಕ ಜನರು ನೋಡುವುದಕ್ಕೆ ಸಾಧ್ಯವಿಲ್ಲ. ದೇಶದ ಪೂರ್ವಭಾಗದಲ್ಲಿ ವಾಸಿಸುವವರಿಗೆ ಕಾಣಿಸುತ್ತದೆ. ಅದು ಕೂಡ ಗ್ರಹಣದ ಕೊನೆ ಭಾಗ ಮಾತ್ರ. ಭಾಗಶಃ ಚಂದ್ರಗ್ರಹಣ ಮಧ್ಯಾಹ್ನ 3.15ಕ್ಕೆ ಆರಂಭವಾಗುತ್ತದೆ. ಕೋಲ್ಕತ್ತಾದಲ್ಲಿ ಸಂಜೆ 6.22ಕ್ಕೆ ಕೊನೆಯಾಗುತ್ತದೆ. ಭಾರತದಲ್ಲಿ ಸಂಪೂರ್ಣ ಚಂದ್ರಗ್ರಹಣ ಮಧ್ಯಾಹ್ನ 2.17ಕ್ಕೆ ಶುರುವಾಗಿ ರಾತ್ರಿ 7.19ಕ್ಕೆ ಕೊನೆಯಾಗುತ್ತದೆ.

* ಮೇ 26ನೇ ತಾರೀಕಿನ ಪೌರ್ಣಮಿ ಚಂದ್ರನನ್ನು ಏಕಾಗಿ ಸೂಪರ್ ಬ್ಲಡ್ ಮೂನ್ ಎನ್ನಲಾಗುತ್ತದೆ? ಬ್ಲಡ್ ಮೂನ್ ಅಥವಾ ರಕ್ತಚಂದ್ರ ಅನ್ನೋದು ವೈಜ್ಞಾನಿಕವಾದ ಹೆಸರಲ್ಲ. ಆದರೆ ಭೂಮಿಗೆ ಸಮೀಪವಾಗಿ ಚಂದ್ರ ಬಂದಾಗ ಕೆಲವನ್ನು ಸೂಪರ್ ಬ್ಲಡ್ ಮೂನ್ ಎನ್ನಲಾಗುತ್ತದೆ. ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಭೂಮಿಯ ಸಮೀಪ ಬಂದಾಗ ಸಾಮಾನ್ಯ ಗಾತ್ರಕ್ಕಿಂತ ತುಂಬ ದೊಡ್ಡದಾಗಿ ಕಾಣುತ್ತದೆ. ಭೂಮಿಯ ನೆರಳನ್ನು ಹಾದು ಹೋಗುವಾಗ ಚಂದ್ರನು ಕೆಂಪಾಗಿ ಹಾಗೂ ಕಣಗಳಿಂದ ತುಂಬಿದಂತೆಯೂ ಕಾಣುತ್ತದೆ.

2021ರ ಮೊದಲ ಸಂಪೂರ್ಣ ಚಂದ್ರಗ್ರಹಣ ಎಂಬ ಬಾಹ್ಯಾಕಾಶದ ಕೌತುಕವನ್ನು ಯಾವುದೇ ಅಳುಕಿಲ್ಲದೆ ನೋಡಬಹುದು. ಚಂದ್ರ ಹಾಗೂ ಸೂರ್ಯನ ಮಧ್ಯೆ ಭೂಮಿ ಬಂದಾಗ ಗ್ರಹಣ ಏರ್ಪಡುತ್ತದೆ. ಅಷ್ಟು ಸಮಯ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ.

ಇದನ್ನೂ ಓದಿ: Lunar Eclipse 2021: ನಾಳೆಯೇ ಚಂದ್ರಗ್ರಹಣ; ರಕ್ತಚಂದ್ರನನ್ನು ನೋಡಲು ಕಾತುರರಾಗಿರಿ

(May 26th complete lunar eclipse and super blood moon details here)

ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು