Lunar Eclipse 2021: ಇಂದು ಚಂದ್ರಗ್ರಹಣ; ರಕ್ತಚಂದ್ರನನ್ನು ನೋಡಲು ಕಾತುರರಾಗಿರಿ

Chandra Grahan 2021: ಭೂಮಿ ಮತ್ತು ಚಂದ್ರನ ನಡುವೆ 3,84,000 ಸಾವಿರ ಕಿಲೋ ಮೀಟರ್ ಅಂತರವಿದೆ. ಆದರೆ 357000 ಸಾವಿರ ಕಿಲೋಮೀಟರ್ ಅಂತರದಲ್ಲಿ ಈ ಬಾರಿ ಚಂದ್ರ ಪರ್ಯಟನೆ ಮಾಡಲಿದ್ದಾನೆ. ಆ ಮೂಲಕ ಸುಮಾರು ಏಳು ಶೇಕಡಾದಷ್ಟು ಚಂದ್ರ ದೊಡ್ಡದಾಗಿ ಕಾಣಿಸಿಕೊಳ್ಳಲಿದ್ದಾನೆ.

Lunar Eclipse 2021: ಇಂದು ಚಂದ್ರಗ್ರಹಣ; ರಕ್ತಚಂದ್ರನನ್ನು ನೋಡಲು ಕಾತುರರಾಗಿರಿ
pfrAtಸಂಗ್ರಹ ಚಿತ್ರ
Follow us
preethi shettigar
| Updated By: Digi Tech Desk

Updated on:May 26, 2021 | 11:53 AM

ಉಡುಪಿ: ಮೇ 26ರ ವೈಶಾಖ ಹುಣ್ಣಿಮೆ ಬಹಳ ವಿಶೇಷವಾದ ಹುಣ್ಣಿಮೆ. ಇಂದು ಸೂಪರ್ ಮೂನ್ ಮತ್ತು ಚಂದ್ರಗ್ರಹಣ ಸಂಭವಿಸಲಿದೆ. 2021ರಲ್ಲಿ 3 ಸೂಪರ್ ಮೂನ್​ಗಳು ಗೋಚರವಾಗುತ್ತವೆ. ಅದರಲ್ಲಿ ಈ ವರ್ಷ ಭೂಮಿಗೆ ಅತಿ ಹತ್ತಿರದಿಂದ ಗೋಚರವಾಗುವ ಗ್ರಹಣ ಮೇ 26ಕ್ಕೆ ಸಂಭವಿಸಲಿದ್ದು, ಭೂಮಿಯ ಸುತ್ತ ದೀರ್ಘ ವೃತ್ತಾಕಾರದಲ್ಲಿ ಚಲಿಸುವ ಸಂದರ್ಭವಾಗಿರುವುದರಿಂದ ಭೂಮಿಗೆ ಅತಿ ಸಮೀಪ ಚಂದ್ರ ಬರುತ್ತಾನೆ. ಭೂಮಿ ಮತ್ತು ಚಂದ್ರನ ನಡುವೆ 3,84,000 ಸಾವಿರ ಕಿಲೋ ಮೀಟರ್ ಅಂತರವಿದೆ. ಆದರೆ 3 ಲಕ್ಷ 57 ಸಾವಿರ ಕಿಲೋಮೀಟರ್ ಅಂತರದಲ್ಲಿ ಈ ಬಾರಿ ಚಂದ್ರ ಪರ್ಯಟನೆ ಮಾಡಲಿದ್ದಾನೆ. ಈ ಮೂಲಕ ಸುಮಾರು ಏಳು ಶೇಕಡಾದಷ್ಟು ಚಂದ್ರ ದೊಡ್ಡದಾಗಿ ಕಾಣಿಸಿಕೊಳ್ಳಲಿದ್ದಾನೆ.

ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯ ನಡುವೆ ಈ ಚಂದ್ರಗ್ರಹಣ ನಡೆಯುತ್ತದೆ. ನಾವು ಭಾರತೀಯರು ಗ್ರಹಣವನ್ನು ನೋಡಲು ಸಾಧ್ಯವಿಲ್ಲ. ಭಾರತದ ಯಾವ ಭೂಪ್ರದೇಶದಲ್ಲಿಯೂ ಈ ಚಂದ್ರಗ್ರಹಣ ಗೋಚರಿಸುವುದಿಲ್ಲ. ಆಸ್ಟ್ರೇಲಿಯಾ, ಚೀನಾ, ಜಪಾನ್, ಇಂಡೋನೇಷಿಯಾದ ಜನ ಚಂದ್ರಗ್ರಹಣ ನೋಡಬಹುದು.

ಭೂಮಿ, ಸೂರ್ಯ ಮತ್ತು ಚಂದ್ರನ ನಡುವೆ ಸಮತಲ ಇರುವುದರಿಂದ ಇಂತಹ ಗ್ರಹಣಗಳು ಸಂಭವಿಸುತ್ತವೆ. ಈ ಬಾರಿ ಸಂಪೂರ್ಣವಾಗಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಒಂದು ಚೂರೂ ಸೂರ್ಯನ ನೆರಳು ಚಂದ್ರನಿಗೆ ಬೀಳದೆ ಇರುವ ಕಾರಣ ಚಂದ್ರ ಸಂಪೂರ್ಣವಾಗಿ ಕೆಂಪಗೆ ಕಾಣಿಸುತ್ತಾನೆ. ಇದನ್ನು ನಾವು ರಕ್ತಚಂದ್ರ ಎಂದು ಕರೆಯುತ್ತೇವೆ.

ಭೂಮಿಯ ತುದಿಗಳಿಂದ ಮಾತ್ರ ಚಂದ್ರನಿಗೆ ಬೆಳಕು ಬೀಳುವ ಕಾರಣ ಚಂದ್ರ ಕೆಂಪಾಗಿ ಗೋಚರಿಸುತ್ತಾನೆ. ಪ್ರಪಂಚದ ಓಶನಿಯಾ ಪ್ರದೇಶಗಳಲ್ಲಿ ಮಾತ್ರ ಚಂದ್ರಗ್ರಹಣ ಗೋಚರಿಸುತ್ತದೆ. ಈಶಾನ್ಯ ರಾಜ್ಯಗಳ ಕೆಲವೆಡೆಯಲ್ಲಿ ಅರೆ ನೆರಳಿನ ಚಂದ್ರಗ್ರಹಣ ಗೋಚರಿಸಬಹುದು. ಮಧ್ಯಾಹ್ನ 2.17 ರಿಂದ 7.19ರ ನಡುವೆ ಈ ಗ್ರಹಣ ನಡೆಯಲಿದೆ.

ಗ್ರಹಣ ಕಾಣುವ ದೇಶಗಳಲ್ಲೂ ಕೂಡ 11 ನಿಮಿಷಗಳ ಕಾಲ ಮಾತ್ರ ಪೂರ್ಣಗ್ರಹಣ ಕಣ್ತುಂಬಿಕೊಳ್ಳಬಹುದು. ಬಾಹ್ಯಾಕಾಶದಲ್ಲಿ ನಡೆಯುವ ಈ ಬದಲಾವಣೆಯಿಂದ ಯಾರಿಗೂ ಅಪಾಯ ಇಲ್ಲ. ಸಮುದ್ರದ ಅಲೆ ಕೊಂಚ ಹೆಚ್ಚಾಗುವ ಸಾಧ್ಯತೆ ಇದೆ. ಯಾರಿಗೂ ಭಯಬೇಡ ಆತಂಕಬೇಡ. ಎಲ್ಲರೂ ಖುಷಿಯಿಂದ ಈ ಸೂಪರ್ ಮೂನ್​ ಅನ್ನು ವೀಕ್ಷಣೆ ಮಾಡಿ ಎಂದು ಪೂರ್ಣಪ್ರಜ್ಞ ಖಗೋಳ ವೀಕ್ಷಕರ ಸಂಘ ತಿಳಿಸಿದೆ.

ಇದನ್ನೂ ಓದಿ:

Lunar Eclipse 2021: ಈ ವರ್ಷದ ಮೊದಲ ಚಂದ್ರಗ್ರಹಣದ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು ಹೀಗಿವೆ

ವರ್ಷದ ಕೊನೆಯ ಚಂದ್ರಗ್ರಹಣ ಇಂದು ಯಾವ ಸಮಯಕ್ಕೆ ಗೋಚರ..? ಮುಂದಿನ ಚಂದ್ರಗ್ರಹಣ ಯಾವಾಗ ಗೊತ್ತಾ?

Published On - 10:50 am, Tue, 25 May 21

ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು