AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷದ ಕೊನೆಯ ಚಂದ್ರಗ್ರಹಣ ಇಂದು ಯಾವ ಸಮಯಕ್ಕೆ ಗೋಚರ..? ಮುಂದಿನ ಚಂದ್ರಗ್ರಹಣ ಯಾವಾಗ ಗೊತ್ತಾ?

2020ರಲ್ಲಿ ಮೊದಲು ಜನವರಿ 10, ಎರಡನೇ ಬಾರಿ ಜೂನ್ 5 ಹಾಗೂ ಜುಲೈ 5 ರಂದು ಮೂರನೇ ಬಾರಿ ಚಂದ್ರ ಗ್ರಹಣ ಗೋಚರವಾಗಿತ್ತು. ಅದನ್ನು ಬಿಟ್ಟು ಇಂದು (ನವೆಂಬರ್ 30) ಗೋಚರವಾಗುವ ಪೆನಂಬ್ರಲ್ ಚಂದ್ರ ಗ್ರಹಣ ನಾಲ್ಕನೇ ಬಾರಿಯಾಗಿದ್ದು, ಮುಂದಿನ ಚಂದ್ರ ಗ್ರಹಣ 2021ರ ಮೇ 26ರಂದು ನಡೆಯುತ್ತದೆ.

ವರ್ಷದ ಕೊನೆಯ ಚಂದ್ರಗ್ರಹಣ ಇಂದು ಯಾವ ಸಮಯಕ್ಕೆ ಗೋಚರ..? ಮುಂದಿನ ಚಂದ್ರಗ್ರಹಣ ಯಾವಾಗ ಗೊತ್ತಾ?
ಗ್ರಹಣದ ವೇಳೆಯಲ್ಲಿ ದಿಗಂತದ ಕೆಳಗೆ ಚಂದ್ರ ಇರುವ ಕಾರಣ ಭಾರತದಲ್ಲಿ ಗೋಚರವಾಗುವುದಿಲ್ಲ.
sandhya thejappa
sandhya thejappa| Edited By: ಸಾಧು ಶ್ರೀನಾಥ್​|

Updated on:Nov 30, 2020 | 12:38 PM

Share

ಇಂದು ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ಆರಂಭವಾಗಿ ಸಂಜೆ 5 ಗಂಟೆ 22 ನಿಮಿಷಕ್ಕೆ ಮುಗಿಯುವ ಚಂದ್ರಗ್ರಹಣ ವರ್ಷದ ನಾಲ್ಕನೇ ಹಾಗೂ ಕೊನೆಯ ಗ್ರಹಣವಾಗಿದ್ದು, ಗ್ರಹಣದ ವೇಳೆಯಲ್ಲಿ ದಿಗಂತದ ಕೆಳಗೆ ಚಂದ್ರ ಇರುವ ಕಾರಣ ಭಾರತದಲ್ಲಿ ಗೋಚರವಾಗುವುದಿಲ್ಲ.

2020ರಲ್ಲಿ ಮೊದಲು ಜನವರಿ 10, ಎರಡನೇ ಬಾರಿ ಜೂನ್ 5 ಹಾಗೂ ಜುಲೈ 5 ರಂದು ಮೂರನೇ ಬಾರಿ ಚಂದ್ರಗ್ರಹಣ ಗೋಚರವಾಗಿತ್ತು. ಅದನ್ನು ಬಿಟ್ಟು ಇಂದು (ನವೆಂಬರ್ 30) ಗೋಚರವಾಗುವ ಪೆನಂಬ್ರಲ್ ಚಂದ್ರಗ್ರಹಣ ನಾಲ್ಕನೇ ಬಾರಿಯಾಗಿದ್ದು, ಮುಂದಿನ ಚಂದ್ರಗ್ರಹಣ 2021ರ ಮೇ 26ರಂದು ನಡೆಯುತ್ತದೆ.

ಚಂದ್ರಗ್ರಹಣಕ್ಕೆ ಕಾರಣ?

ಚಂದ್ರ ಸ್ವಂತ ಬೆಳಕನ್ನು ಹೊಂದಿಲ್ಲ. ಸೂರ್ಯನ ಬೆಳಕಿನಿಂದ ಚಂದ್ರ ಪ್ರತಿದಿನ ಗೋಚರವಾಗುವುದು. ಚಂದ್ರಗ್ರಹಣದ ಸಮಯದಲ್ಲಿ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಸೂರ್ಯನ ಬೆಳಕು ಚಂದ್ರನನ್ನು ತಲುಪಲು ಭೂಮಿ ಅಡ್ಡವಾಗಿರುವುದರಿಂದ ಚಂದ್ರನ ಅರ್ಧ ಭಾಗ ಅಥವಾ ಸಂಪೂರ್ಣವಾಗಿ ಮುಚ್ಚುತ್ತದೆ. ಪೆನಂಬ್ರಲ್ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಭೂಮಿಯ ನೆರಳಿನ ಹೊರ ಭಾಗದ ಮೂಲಕ ಚಲಿಸುವುದರಿಂದ ಬಹಳ ಮುಸುಕಾಗಿರುತ್ತದೆ.

ಮುಂಬರುವ ಪೆನಂಬ್ರಲ್ ಚಂದ್ರಗ್ರಹಣ ಯುರೋಪ್ ಮತ್ತು ಅಮೇರಿಕ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಗೋಚರವಾಗುತ್ತದೆ. ನವೆಂಬರ್ ಚಂದ್ರಗ್ರಹಣವನ್ನು ವಿಶ್ವದ ಹಲವು ಕಡೆಗಳಲ್ಲಿ ಬೀವರ್ ಮೂನ್ ಎಂದು ಕರೆದರೆ, ಇನ್ನೂ ಕೆಲವು ಕಡೆಗಳಲ್ಲಿ ಫ್ರಾಸ್ಟಿ ಮೂನ್ ಅಥವಾ ಓಕ್ ಮೂನ್ ಎಂದು ಕರೆಯುತ್ತಾರೆ.

ಇದನ್ನೂ ಓದಿ:  ಅರೆ ನೆರಳು ಚಂದ್ರಗ್ರಹಣದಿಂದ ಕಾದಿದಿಯಾ ಮಹಾ ಕಂಟಕ?

Published On - 12:31 pm, Mon, 30 November 20

Follow Us
sandhya thejappa
sandhya thejappa
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ