AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ಎಫೆಕ್ಟ್​: ಟೋಮ್ಯಾಟೋ, ಬದನೆ, ಎಲೆಕೋಸು ಮಾರಾಟ ಮಾಡಲಾಗದೆ ಹಸುಗಳಿಗೆ ತಿನ್ನಿಸುತ್ತಿರುವ ರೈತಾಪಿ ವರ್ಗ

ಟೋಮ್ಯಾಟೋವನ್ನು ಹಸುಗಳಿಗೆ ತಿನ್ನಿಸಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ರಾಶಿ ರಾಶಿ ಟೋಮ್ಯಾಟೋ ಗಿಡದಲ್ಲೇ ಕೊಳೆಯುತ್ತಿದೆ. ಬೇರೆ ದಾರಿಯಿಲ್ಲದೆ ರೈತರು ಹಸುಗಳನ್ನು ಕಟ್ಟಿ ಬೆಳೆಯನ್ನು ತಿನ್ನಿಸುತ್ತಿದ್ದಾರೆ. ಟೋಮ್ಯಾಟೋ ಜೊತೆಗೆ ಎಲೆಕೋಸು ಬೆಳೆದು ನಿಂತಿದೆ. ಆದರೆ ಮಾರಾಟಕ್ಕೆ ರೈತರು ಪರದಾಟ ಪಡುತ್ತಿದ್ದಾರೆ.

ಲಾಕ್​ಡೌನ್ ಎಫೆಕ್ಟ್​:  ಟೋಮ್ಯಾಟೋ, ಬದನೆ, ಎಲೆಕೋಸು ಮಾರಾಟ ಮಾಡಲಾಗದೆ ಹಸುಗಳಿಗೆ ತಿನ್ನಿಸುತ್ತಿರುವ ರೈತಾಪಿ ವರ್ಗ
ಗಿಡದಲ್ಲಿ ಕೊಳೆತು ಹೋಗಿರುವ ಟೋಮ್ಯಾಟೋ, ಬದನೆಕಾಯಿಯನ್ನು ತಿನ್ನುತ್ತಿರುವ ಹಸು
sandhya thejappa
|

Updated on:May 25, 2021 | 11:15 AM

Share

ಹಾಸನ: ಕೊರೊನಾ ನಿಯಂತ್ರಿಸಲು ಸರ್ಕಾರ ರಾಜ್ಯದಲ್ಲಿ ಲಾಕ್​ಡೌನ್​ ವಿಧಿಸಿದೆ. ಹೀಗಾಗಿ ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಬೆಳೆದ ಬೆಳೆ ಮಾರಾಟವಾಗದೆ ರಸ್ತೆ, ಹಳ್ಳಗಳಿಗೆ ಸುರಿಯುವ ಪರಿಸ್ಥಿತಿ ರೈತರಿಗೆ ಬಂದೊದಗಿದೆ. ಬೆಳೆದ ಟೋಮ್ಯಾಟೋ ವ್ಯಾಪಾರವಾಗದ ಕಾರಣ ಜಿಲ್ಲೆಯ ರೈತರು ಹಸುಗಳಿಗೆ ತಿನ್ನಲು ಹಾಕಿದ್ದಾರೆ. ರೈತರು ಸುಮಾರು ಎರಡು ಎಕರೆಯಲ್ಲಿ ಟೋಮ್ಯಾಟೋ ಬೆಳೆದಿದ್ದರು. ಆದರೆ ಲಾಕ್​ಡೌನ್​ ಕಾರಣ ಬೆಳೆದ ಟೋಮ್ಯಾಟೋವನ್ನು ವ್ಯಾಪಾರ ಮಾಡುವುದಕ್ಕೆ ಆಗುತ್ತಿಲ್ಲ.

ಟೋಮ್ಯಾಟೋವನ್ನು ಹಸುಗಳಿಗೆ ತಿನ್ನಿಸಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ರಾಶಿ ರಾಶಿ ಟೊಮ್ಯಾಟೊ ಗಿಡದಲ್ಲೇ ಕೊಳೆಯುತ್ತಿದೆ. ಬೇರೆ ದಾರಿಯಿಲ್ಲದೆ ರೈತರು ಹಸುಗಳನ್ನು ಕಟ್ಟಿ ಬೆಳೆಯನ್ನು ತಿನ್ನಿಸುತ್ತಿದ್ದಾರೆ. ಟೊಮ್ಯಾಟೊ ಜೊತೆಗೆ ಎಲೆಕೋಸು ಬೆಳೆದು ನಿಂತಿದೆ. ಆದರೆ ಮಾರಾಟಕ್ಕೆ ರೈತರು ಪರದಾಟ ಪಡುತ್ತಿದ್ದಾರೆ.

ತರಕಾರಿಯನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತಿಲ್ಲ. ಹಳ್ಳಿಯಲ್ಲಿ ಕೊರೊನಾ ಹೆಚ್ಚಿರುವ ಕಾರಣ ವರ್ತಕರೂ ಇತ್ತ ಸುಳಿಯುತ್ತಿಲ್ಲ. ಬೆಳೆದ ಬೆಳೆ ಮಾರಾಟ ಮಾಡಲಾಗದೆ ರೈತ ರುದ್ರೇಶ್ ಕಂಗಾಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರೇ ನಮ್ಮ ಪರಿಸ್ಥಿತಿ ನೋಡಿ. ನಮಗೆ ಆಸರೆ ನೀಡಿ. ಲಾಭ ಬೇಡ, ಮಾಡಿದ ಖರ್ಚನ್ನಾದರೂ ಕೊಡಿಸಿ ಎಂದು ಅಂಗಲಾಚಿ ಬೇಡಿದ್ದಾರೆ.

ಎಲೆಕೋಸು ನಾಶಮಾಡಿದ ರೈತ ಸೂಕ್ತ ಬೆಲೆ ಸಿಗದ ಕಾರಣ ಒಂದೂವರೆ ಎಕರೆಯಲ್ಲಿದ್ದ ಎಲೆಕೋಸನ್ನು ರೈತ ನಾಶಮಾಡಿದ್ದಾರೆ. ಬೇಲೂರು ತಾಲೂಕಿನ ಸೊಪ್ಪಿನಹಳ್ಳಿ ರೈತ ಪರ್ವತೇಗೌಡ ಎಂಬುವವರು ಎಲೆಕೋಸನ್ನು ನಾಶ ಮಾಡಿದ್ದಾರೆ. ಅರವತ್ತು ಸಾವಿರ ಹಣ ಖರ್ಚು ಮಾಡಿ ಬೆಳೆ ಮಾಡಿದ್ದೆ. ಫಸಲು ಮಾರಾಟ ಆಗಿದ್ದರೆ ಮೂರರಿಂದ ಮೂರುವರೆ ಲಕ್ಷ ಆದಾಯ ಬರುತ್ತಿತ್ತು. ಎಲೆಕೋಸು ಕೇಳುವವರಿಲ್ಲದೆ ಬೆಳೆ ಹಾಳಾಗಿ ಹೋಗಿದೆ. ಹಾಗಾಗಿ ಬೇರೆ ದಾರಿಯಿಲ್ಲದೆ ರೋಟರಿ ಹೊಡೆದು ನಾವೇ ನಾಶ ಮಾಡಿದ್ದೇವೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ಕೆನರಾ ಬ್ಯಾಂಕ್​ನಲ್ಲಿ ಎರಡುವರೆ ಲಕ್ಷ ಸಾಲ ಮಾಡಿದ್ದೆ. ಈ ಬೆಳೆ ಮಾರಾಟ ಮಾಡಿ ಸಾಲಾ ತೀರಿಸುವ ಯೋಚನೆ ಇತ್ತು. ಸಾಲ ತೀರಿಸೋದಿರಲಿ ಮಾಡಿದ ಖರ್ಚೆ ಕೈ ಸೇರಲಿಲ್ಲ. ಸರ್ಕಾರ ಕೊಡುವ ಹತ್ತು ಸಾವಿರದಿಂದ ನಾಲ್ಕು ಚೀಲ ಗೊಬ್ಬರ ಬರಲ್ಲ. ಈ ಭೂಮಿಗೆ 20 ಸಾವಿರ ರೂ. ಖರ್ಚು ಮಾಡಿ ಸಸಿ ಹಾಕಿದ್ದೆ. ಗೊಬ್ಬರಕ್ಕೆ 15 ಸಾವಿರ ಖರ್ಚಾಗಿದೆ. ಅವರು ಕೊಡುವ ಹತ್ತು ಸಾವಿರಕ್ಕೆ ಏನೂ ಬರಲ್ಲ. ನಾವು ಖರ್ಚು ಮಾಡಿರುವ ಹಣವನ್ನಾದರೂ ಕೊಡಿ ಎಂದು ರೈತ ಮನವಿ ಮಾಡಿಕೊಂಡಿದ್ದಾರೆ.

ಬದನೆಕಾಯಿ ಬೆಳೆ ನಾಶ ಕೊಪ್ಪಳ: ಬದನೆಕಾಯಿ ಮಾರಾಟ ಮಾಡಲಾಗದೆ ಬೆಳೆಯನ್ನು ರೈತ ಜಾನುವಾರುಗಳಿಗೆ ಹಾಕಿದ್ದಾರೆ. ರೈತ ಗವಿಸಿದ್ದಪ್ಪ ಡೊಳ್ಳಿನ ಎಂಬುವವರು ಒಂದು ಎಕರೆಯಲ್ಲಿ ಬದನೆಕಾಯಿಯನ್ನು ಬೆಳೆದಿದ್ದರು. ಸುಮಾರು 70 ಸಾವಿರ ಖರ್ಚು ಮಾಡಿದ್ದರು. ಕಟಾವು ಮಾಡಿದ ಬದನೆಯನ್ನು ಮಾರಾಟ ಮಾಡಲಾಗದೆ ಜಾನುವಾರುಗಳಿಗೆ ಹಾಕಿದ್ದಾರೆ. ರಾಜಕಾರಣಿಗಳು ಎಲೆಕ್ಷನ್ ಮಾಡುತ್ತಾರೆ. ಅವರಿಗೆ ಕೊರೊನಾ ಬರಲ್ಲ. ನಮಗ ಅಷ್ಟೆ ಕೊರೊನಾ ಬರತ್ತಾ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ

ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಸಿಗದೆ ಬ್ಲಾಕ್ ಪಂಗಸ್ ರೋಗಿಗಳ ಪರದಾಟ

ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಹಾಲಿನ ವಾಹನ ಪಲ್ಟಿ; 1 ಸಾವಿರ ಲೀಟರ್ ಹಾಲು ರಸ್ತೆ ಪಾಲು

(Farmers are facing hardships in not selling tomatoes and cabbage at hassan)

Published On - 10:16 am, Tue, 25 May 21

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ