AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಟೆಲ್ ತೆರೆದಿದ್ದಕ್ಕೆ ಸಿಲಿಂಡರ್ ಹೊತ್ತು ಹೋದ ಬಳ್ಳಾರಿ ಪೊಲೀಸರು

ಹೊಸಪೇಟೆಯ ವಾಲ್ಮೀಕಿ ರಸ್ತೆ ಬಳಿ ರೋಡ್ ಸೈಡ್ ಹೋಟೆಲ್ ತೆರೆದಿತ್ತು. ಫುಡ್ ಇನ್ಸ್​ಪೆಕ್ಟರ್​ ಬಂದು ಪಾರ್ಸಲ್ ಮಾತ್ರ ಅಂತ ಹೇಳಿ ಹೋಗಿದ್ದರು. ಆದರೆ ಪೊಲೀಸರು ಹೋಟೆಲ್ ಓಪನ್ ಮಾಡಲು ನಿಮಗೆ ಅನುಮತಿ ಕೊಟ್ಟಿದ್ದು ಯಾರು ಎಂದು ಕೇಳಿದ್ದಾರೆ. ಹೋಟೆಲ್ ಓಪನ್ ಮಾಡಲು ಅವಕಾಶ ಇದೆ.

ಹೋಟೆಲ್ ತೆರೆದಿದ್ದಕ್ಕೆ ಸಿಲಿಂಡರ್ ಹೊತ್ತು ಹೋದ ಬಳ್ಳಾರಿ ಪೊಲೀಸರು
ಸಿಲಿಂಡರ್​ನ ವಶಪಡಿಸಿಕೊಂಡ ಪೊಲೀಸರು
sandhya thejappa
sandhya thejappa|

Updated on: May 25, 2021 | 11:32 AM

Share

ಬಳ್ಳಾರಿ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಕಾರಣ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಾಗಿದೆ. ಹೀಗಾಗಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಿ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿದೆ. ಹೋಟೆಲ್​ಗಳಲ್ಲಿ ಪಾರ್ಸಲ್​ಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಬಳ್ಳಾರಿಯಲ್ಲಿ ಹೋಟೆಲ್ ಓಪನ್ ಮಾಡಿದ್ದಕ್ಕಾಗಿ ಪೊಲೀಸರು ಸಿಲಿಂಡರ್​ನ ಹೊತ್ತುಕೊಂಡು ಹೋಗಿದ್ದಾರೆ. ಬೀದಿ ಬದಿ ವ್ಯಾಪಾರಿ ಬೇಡಿಕೊಂಡರು ಯಾರ ಮಾತು ಕೇಳದೆ ಪೊಲೀಸರು ಸಿಲಿಂಡರ್​ನ ಹೊತ್ತುಕೊಂಡು ಹೋಗಿದ್ದಾರೆ.

ಹೊಸಪೇಟೆಯ ವಾಲ್ಮೀಕಿ ರಸ್ತೆ ಬಳಿ ರೋಡ್ ಸೈಡ್ ಹೋಟೆಲ್ ತೆರೆದಿತ್ತು. ಫುಡ್ ಇನ್ಸ್​ಪೆಕ್ಟರ್​ ಬಂದು ಪಾರ್ಸಲ್ ಮಾತ್ರ ಅಂತ ಹೇಳಿ ಹೋಗಿದ್ದರು. ಆದರೆ ಪೊಲೀಸರು ಹೋಟೆಲ್ ಓಪನ್ ಮಾಡಲು ನಿಮಗೆ ಅನುಮತಿ ಕೊಟ್ಟಿದ್ದು ಯಾರು ಎಂದು ಕೇಳಿದ್ದಾರೆ. ಹೋಟೆಲ್ ಓಪನ್ ಮಾಡಲು ಅವಕಾಶ ಇದೆ. ನಾವು ಪಾರ್ಸಲ್ ಮಾತ್ರ ಕೊಡುತ್ತಿದ್ದೆವು. ಯಾರಿಗೂ ತಿನ್ನಲು ಇಲ್ಲಿ ಕೊಟ್ಟಿಲ್ಲ. ಆದರೆ ಪೊಲೀಸರು ಹೇಳಿಲ್ಲ ಕೇಳಿಲ್ಲ ನಮ್ಮ ಸಿಲಿಂಡರ್​​ನ ತೆಗೆದುಕೊಂಡು ಹೋದರು. ಎಲ್ಲರಿಗೂ ಅವಕಾಶ ಇದೆ. ನಮಗೆ ಮಾತ್ರ ಯಾಕಿಲ್ಲ ಎಂದು ಬೀದಿ ಬದಿ ವ್ಯಾಪಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ನೂರಾರು ರೈತರ ಕ್ಯೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಬೀಜ, ರಸಗೊಬ್ಬರಕ್ಕಾಗಿ ನೂರಾರು ರೈತರು ಕಾಯುತ್ತಿದ್ದಾರೆ. ಬೆಳಿಗ್ಗೆ 5 ಗಂಟೆಗೆ ರೈತರು ಅಂಗಡಿಗಳ ಮುಂದೆ ಜಮಾಯಿಸಿದ್ದಾರೆ. ರೈತರು ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದು, ಬೇಗ ಅಂಗಡಿಗಳು ತೆರೆಯದಿದ್ದಕ್ಕೆ ರೈತರು ಆಕ್ರೋಶ ಹೊರಹಾಕಿದ್ದರು.

ಇವತ್ತು ಬೆಳಿಗ್ಗೆ 12 ರಿಂದ ಮೇ 21 ರವರೆಗೆ ಬಳ್ಳಾರಿ ಸಂಪೂರ್ಣ ಲಾಕ್​ಡೌನ್​ ಆಗಲಿದೆ. ಅಗತ್ಯ ವಸ್ತುಗಳ ಖರೀದಿಗೆ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ, ಬೆಂಗಳೂರು ರಸ್ತೆಯ ಮಾರ್ಕೆಟ್​ನಲ್ಲಿ ಜನಜಾತ್ರೆಯೇ ಸೇರಿದೆ. ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಜನರು ವ್ಯಾಪಾರದಲ್ಲಿ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ

ಲಾಕ್​ಡೌನ್ ಎಫೆಕ್ಟ್​: ಟೋಮ್ಯಾಟೋ, ಬದನೆ, ಎಲೆಕೋಸು ಮಾರಾಟ ಮಾಡಲಾಗದೆ ಹಸುಗಳಿಗೆ ತಿನ್ನಿಸುತ್ತಿರುವ ರೈತಾಪಿ ವರ್ಗ

Coronavirus cases in India: ದೇಶದಲ್ಲಿ ಹೊಸ ಕೊವಿಡ್ ಪ್ರಕರಣ 2 ಲಕ್ಷಕ್ಕಿಂತ ಕಡಿಮೆ, 3511 ಮಂದಿ ಸಾವು

(police had seized the cylinder since hotel was open at bellary)

Follow Us
sandhya thejappa
sandhya thejappa
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ