AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸದೆ ಸುಮಲತಾ ಅಂಬರೀಷ್​ ವಿರುದ್ಧ ಮಂಡ್ಯ ಜನರ ಆಕ್ರೋಶ; ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಜನತೆ ಕಿಡಿ ಕಿಡಿ

Sumalatha Ambareesh: ಎರಡು ವರ್ಷದ ಗೆಲುವಿನ ಸಂಭ್ರಮಕ್ಕೆ ಆಕ್ಷೇಪ ತೋರಿರುವ ಕ್ಷೇತ್ರದ ಜನತೆ, ಇಂತಹ ಸಮಯದಲ್ಲಿ ಇದೆಲ್ಲ ಬೇಕಾ? ಎಂದು ಕಿಡಿಕಾರಿದ್ದಾರೆ. ನಾವು ನಿಮ್ಮ ಅಭಿಮಾನಿಗಳು, ಗೆದ್ದು ಎರಡು ವರ್ಷ ಆಗಿದೆ‌, ನಮ್ಮ ಊರಿಗೆ ಒಮ್ಮೆಯಾದರೂ ಭೇಟಿ ನೀಡಿದ್ದೀರಾ...? ನೀವು ಬೆಂಗಳೂರಿನಲ್ಲಿ ಸುಖವಾಗಿರಿ ಎಂದು ವ್ಯಂಗ್ಯವಾಡಿದ್ದಾರೆ. ಆರೆ ಇದ್ಯಾವುದಕ್ಕೂ ಸಂಸದೆ ಸುಮಲತಾ ಕ್ಯಾರೆ ಎಂದಿಲ್ಲ.

ಸಂಸದೆ ಸುಮಲತಾ ಅಂಬರೀಷ್​ ವಿರುದ್ಧ ಮಂಡ್ಯ ಜನರ ಆಕ್ರೋಶ; ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಜನತೆ ಕಿಡಿ ಕಿಡಿ
ಸಂಸದೆ ಸುಮಲತಾ ಅಂಬರೀಷ್​ ವಿರುದ್ಧ ಮಂಡ್ಯ ಜನರ ಆಕ್ರೋಶ; ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಜನತೆ ಕಿಡಿ ಕಿಡಿ
ಸಾಧು ಶ್ರೀನಾಥ್​
|

Updated on:May 25, 2021 | 9:28 AM

Share

ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್​ ವಿರುದ್ಧ ಕ್ಷೇತ್ರದ ಜನ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಕೊರೊನಾದಿಂದ ಕಷ್ಟ ಅನುಭವಿಸ್ತಿದ್ದೇವೆ. ಸ್ವಾಭಿಮಾನದ ಗೆಲುವಿಗೆ 2 ವರ್ಷವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೀರಿ ಎಂದು ಸುಮಲತಾ ಪೋಸ್ಟ್ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಇದೆಲ್ಲಾ ಬೇಕಾ? ನಿಮ್ಮನ್ನು ಗೆಲ್ಲಿಸಿದ್ದು ವೇಸ್ಟ್, ಏನೂ ಯೂಸ್ ಇಲ್ಲ ಎಂದು ಜನ ಅಸಮಾಧಾನಗೊಂಡಿದ್ದಾರೆ.

ನೀವು ಬೆಂಗಳೂರಿನಲ್ಲಿ ಸುಖವಾಗಿ ಇದ್ದೀರಿ. K.R.ಪೇಟೆ ತಾಲೂಕು ಅಂತಾ ಒಂದು ಇದೆ, ಅದು ನಿಮಗೆ ಗೊತ್ತಾ? ಜನರ ಸ್ವಾಭಿಮಾನದ ಅವಧಿ ಆದಷ್ಟು ಬೇಗ ಮುಗಿಯಲಿ. ಆದಷ್ಟು ಬೇಗ ಮುಗಿಯಲಿ ಎಂದೇ ಕಾಯುತ್ತಿದ್ದೇವೆ ಎಂದು ಸುಮಲತಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಸುರಿಮಳೆಗೆರೆದಿದ್ದಾರೆ. ಅಕ್ಕ ನಿನ್ ಪಾದ ಜೆರಾಕ್ಸ್, ಗೆಲ್ಲಿಸಿದ್ದು ವೇಸ್ಟ್..! ಎಂದು ಕೆಲವರು ಸುಮಲತಾ ಫೇಸ್ ಬುಕ್ ಫೋಸ್ಟ್ ಗೆ ಆಕ್ರೋಶ ಹೊರಹಾಕಿದ್ದಾರೆ.

ಆದರೆ ಸಂಸದೆ ಸುಮಲತಾ ಅವರು ಕ್ಷೇತ್ರದ ಜನರ ಟೀಕೆಗಳಿಗೆ ಪ್ರತಿಕ್ರಿಯಿಸಿಲ್ಲ. ಮೇ 23ಕ್ಕೆ ಸಂಸದೆಯಾಗಿ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಡ್ಯ ಜನರಿಗೆ ಸುಮಲತಾ ಅವರು ಧನ್ಯವಾದ ಹೇಳಿದ್ದರು. ಕರೊನಾ ಸಂಕಷ್ಟದಲ್ಲೂ ಮಂಡ್ಯಕ್ಕೆ ಬಾರದಿರೋದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮಂಡ್ಯದಲ್ಲಿ ಕರೊನಾ ಅಬ್ಬರದಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿದ್ರೂ ಕ್ಷೇತ್ರಕ್ಕೆ ಬಾರದಕ್ಕೆ ಆಕ್ರೋಶ. ಆಕ್ಸಿಜನ್ ವಿವಾದದ ಬಳಿಕ ಸಂಸದೆ ಮಂಡ್ಯದಿಂದ ದೂರವುಳಿದಿದ್ದಾರೆ.

ಎರಡು ವರ್ಷದ ಗೆಲುವಿನ ಸಂಭ್ರಮಕ್ಕೆ ಆಕ್ಷೇಪ ತೋರಿರುವ ಕ್ಷೇತ್ರದ ಜನತೆ, ಇಂತಹ ಸಮಯದಲ್ಲಿ ಇದೆಲ್ಲ ಬೇಕಾ? ಎಂದು ಕಿಡಿಕಾರಿದ್ದಾರೆ. ನಾವು ನಿಮ್ಮ ಅಭಿಮಾನಿಗಳು, ಗೆದ್ದು ಎರಡು ವರ್ಷ ಆಗಿದೆ‌, ನಮ್ಮ ಊರಿಗೆ ಒಮ್ಮೆಯಾದರೂ ಭೇಟಿ ನೀಡಿದ್ದೀರಾ…? ನೀವು ಬೆಂಗಳೂರಿನಲ್ಲಿ ಸುಖವಾಗಿರಿ ಎಂದು ವ್ಯಂಗ್ಯವಾಡಿದ್ದಾರೆ. ಆರೆ ಇದ್ಯಾವುದಕ್ಕೂ ಸಂಸದೆ ಸುಮಲತಾ ಕ್ಯಾರೆ ಎಂದಿಲ್ಲ.

sumalatha ambareesh celebrates 2 years as mandya mp but constituency people show anger (3)

(sumalatha ambareesh celebrates 2 years as mandya mp but constituency people show anger)

Published On - 9:27 am, Tue, 25 May 21